ರಣವೀರ್ ರವರನ್ನು ಮದುವೆಯಾಗುವ ಮುನ್ನ ದೀಪಿಕಾ ರವರು ಡೇಟ್ ಮಾಡಿರುವ 7 ಸೆಲೆಬ್ರೆಟಿಗಳು ಯಾರ್ಯಾರು ಗೊತ್ತೇ?? ಯಾರ್ಯಾರಿದ್ದಾರೆ ಗೊತ್ತೇ??

2,988

ನಮಸ್ಕಾರ ಸ್ನೇಹಿತರೇ ದೀಪಿಕಾ ಪಡುಕೋಣೆ ಅವರ ಕುರಿತಂತೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗದಿಂದ ಪ್ರಾರಂಭಿಸಿ ಬಾಲಿವುಡ್ ಚಿತ್ರದವರೆಗೂ ಈಗಾಗಲೇ ಬೆಳೆದುನಿಂತು ಹಾಲಿವುಡ್ ಚಿತ್ರಗಳಲ್ಲಿ ಕೂಡ ನಟಿಸಿ ಬಂದಿದ್ದಾರೆ. ಇನ್ನು ಪ್ರಭಾಸ್ ರವರ ಜೊತೆಗೆ ತೆಲುಗು ಸಿನಿಮಾದಲ್ಲಿ ನಟಿಸುವ ಮೂಲಕ ಮತ್ತೊಮ್ಮೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಬರುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಒಟ್ಟಾರೆಯಾಗಿ ಭಾರತೀಯ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿ ದೀಪಿಕಾ ಪಡುಕೋಣೆ ಎನ್ನಬಹುದು. ಇನ್ನು ಇವರು ರಣವೀರ್ ಸಿಂಗ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ ಆದರೆ ಅವರನ್ನು ಮದುವೆ ಆಗುವ ಮುನ್ನ ಯಾರೆಲ್ಲರ ಜೊತೆಗೆ ಡೇಟಿಂಗ್ ಮಾಡಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.

ನಿಹಾರ್ ಪಾಂಡ್ಯ; ದೀಪಿಕಾ ಪಡುಕೋಣೆ ರವರು ಬೆಂಗಳೂರಿನಿಂದ ಮುಂಬೈಗೆ ಬಂದ ಸಂದರ್ಭದಲ್ಲಿ ನಿಹಾರ್ ಪಾಂಡ್ಯ ಎನ್ನುವ ಮಾಡೆಲ್ ಜೊತೆಗೆ ಮೂರು ವರ್ಷಗಳ ಕಾಲ ಲಿವಿಂಗ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದರು. ನಂತರ ಇವರಿಬ್ಬರ ನಡುವೆ ನಲ್ಲಿ ಮೂಡಿಬಂದ ಹಲವಾರು ಕಾರಣಗಳಿಂದಾಗಿ ಇಬ್ಬರೂ ಕೂಡ ಬೇರೆಯಾಗುತ್ತಾರೆ.

ಉಪೇನ್ ಪಟೇಲ್; 36 ಚೈನಾ ಹಾಗೂ ನಮಸ್ತೆ ಲಂಡನ್ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಈ ನಟ ಹಾಗೂ ದೀಪಿಕಾ ಪಡುಕೋಣೆ ಅವರ ನಡುವೆ ಲವ್ವಿಡವ್ವಿ ಇತ್ತು ಎನ್ನುವ ಸುದ್ದಿಗಳು ಕೂಡ ಬಾಲಿವುಡ್ ನಲ್ಲಿ ಹರಿದಾಡಿದೆ. ಇನ್ನು ಇವರಿಬ್ಬರು ಒಟ್ಟಾಗಿ ಮಾಡಿಸಿಕೊಂಡಿರುವ ಹಲವಾರು ಗ್ಲಾಮರಸ್ ಫೋಟೋಶೂಟ್ ಗಳು ಕೂಡ ಇದಕ್ಕೆ ಕಾರಣ ಎನ್ನಬಹುದು.

ಮಹೇಂದ್ರ ಸಿಂಗ್ ಧೋನಿ; ಹಲವಾರು ಫಂಕ್ಷನ್ ಗಳಲ್ಲಿ ಮಹೇಂದ್ರ ಸಿಂಗ್ ಧೋನಿ ಹಾಗೂ ದೀಪಿಕಾ ಪಡುಕೋಣೆ ಅವರ ಹೆಸರನ್ನು ಒಟ್ಟಿಗೆ ತಳುಕುಹಾಕಿ ಧೋನಿ ರವರನ್ನು ಶಾರುಖ್ ಖಾನ್ ರವರು ಹಲವಾರು ಬಾರಿ ಗೇಲಿ ಕೂಡ ಮಾಡಿದ್ದಾರೆ. ಅದರಲ್ಲೂ ಒಮ್ಮೆ ಧೋನಿ ಅವರು ದೀಪಿಕಾ ಪಡುಕೋಣೆ ಅವರಿಗೆ ನನ್ನನ್ನು ಪರಿಚಯ ಮಾಡಿಕೊಡಿ ಎನ್ನುವ ಮೂಲಕವೂ ಕೂಡ ಸುದ್ದಿಯಾಗಿದ್ದರು.

ಯುವರಾಜ್ ಸಿಂಗ್; ಇತ್ತ ಮಹೇಂದ್ರ ಸಿಂಗ್ ಧೋನಿ ರವರ ಜೊತೆ ದೀಪಿಕಾ ಪಡುಕೋಣೆ ಅವರ ಹೆಸರು ತಳುಕು ಹಾಕಿಕೊಂಡಿದ್ದರೆ ಆಕಡೆ ಯುವರಾಜ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇಬ್ಬರು ಕೂಡ ಹಲವಾರು ಸಮಾರಂಭಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಜೋಡಿ ಗಳಾಗಿದ್ದಾರೆ ಎಂಬುದಾಗಿ ಸುದ್ದಿಯಾಗಿದ್ದರು. ಇಷ್ಟು ಮಾತ್ರವಲ್ಲದೆ ಇವರಿಬ್ಬರ ಸಂಬಂಧದ ಕುರಿತಂತೆ ಎಷ್ಟರಮಟ್ಟಿಗೆ ಗಾಳಿಸುದ್ದಿ ಹರಡಿತ್ತು ಎಂದರೆ ಇವರಿಬ್ಬರು ಸಮಾರಂಭದಲ್ಲಿ ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದಾರೆ ಎಂಬುದಾಗಿ ಸುದ್ದಿ ಹರಡಿತ್ತು.

ರಣಬೀರ್ ಕಪೂರ್; ದೀಪಿಕಾ ಪಡುಕೋಣೆ ಅವರ ಪ್ರೇಮಸಂಬಂಧ ರಣಬೀರ್ ಕಪೂರ್ ಅವರಷ್ಟು ಬೇರೆ ಯಾವ ಸೆಲೆಬ್ರಿಟಿ ಜೊತೆಗೆ ಕೂಡ ಕೇಳಿಬಂದಿಲ್ಲ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಅವರ ಸಂಬಂಧ ಅತ್ಯಂತ ದೀರ್ಘಕಾಲದವರೆಗೆ ಸಾಗಿತ್ತು. ಇವರಿಬ್ಬರು ಖಂಡಿತವಾಗಿ ಮದುವೆಯಾಗುತ್ತಾರೆ ಎಂಬ ಸುದ್ದಿಗಳು ಕೂಡ ಬಾಲಿವುಡ್ನಲ್ಲಿ ಹರಿದಾಡಿತ್ತು. ಆದರೆ ಇವರಿಬ್ಬರ ಸಂಬಂಧ ಅರ್ಧಕ್ಕೆ ನಿಲ್ಲುವುದಕ್ಕೆ ಎರಡು ಕಾರಣಗಳು ಇದ್ದವು ಎಂಬುದಾಗಿ ಹೇಳಲಾಗುತ್ತದೆ. ಮೊದಲನೇದಾಗಿ ದೀಪಿಕಾ ಪಡುಕೋಣೆ ಅವರ ಜೊತೆಗೆ ಪ್ರೇಮ ಸಂಬಂಧದಲ್ಲಿ ಇದ್ದಾಗಲೇ ರಣಬೀರ್ ಕಪೂರ್ ರವರು ಕತ್ರಿನಾ ಕೈಫ್ ರವರ ಜೊತೆಗೆ ಪ್ರೇಮ ಸಂಬಂಧವನ್ನು ಹೊಂದಿದ್ದರು ಎಂಬುದಾಗಿ ಕೇಳಿಬಂದಿದೆ. ಇದಕ್ಕೂ ಮಿಗಿಲಾಗಿ ಎರಡನೇದಾಗಿ ರಣಬೀರ್ ಕಪೂರ್ ಅವರ ತಾಯಿಯಾಗಿರುವ ನೀತು ಸಿಂಗ್ ಅವರಿಗೆ ದೀಪಿಕಾ ಪಡುಕೋಣೆ ಮನೆಯ ಸೊಸೆಯಾಗಿ ಬರುವುದು ಇಷ್ಟ ಇಲ್ಲ ಎನ್ನುವುದಾಗಿ ಕೇಳಿಬಂದಿದೆ.

ಸಿದ್ಧಾರ್ಥ್ ಮಲ್ಯ; ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲಿಕನಾಗಿದ್ದ ವಿಜಯ್ ಮಲ್ಯ ರವರ ಪುತ್ರ ಸಿದ್ಧಾರ್ಥ್ ಮಲ್ಯ ರವರ ಜೊತೆಗೆ ಕೂಡ ಐಪಿಎಲ್ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ಅವರು ಹಲವಾರು ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದರು ಇದು ಅವರ ನಡುವೆ ಇರುವಂತಹ ಪ್ರೇಮ ಸಂಬಂಧವನ್ನು ಪಬ್ಲಿಕ್ ಆಗಿ ಇನ್ನಷ್ಟು ಕಾಣುವಂತೆ ಮಾಡಿತ್ತು.

ಮುಜಮಿಲ್ ಇಬ್ರಾಹಿಂ; ಸಿದ್ಧಾರ್ಥ್ ಮಲ್ಯ ಅವರ ಜೊತೆಗಿನ ಬ್ರೇಕಪ್ ನಂತರ ದೀಪಿಕಾ ಪಡುಕೋಣೆ ಅವರು ಮುಜಮಿಲ್ ಇಬ್ರಾಹಿಂ ರವರ ಜೊತೆಗೆ ಡೇಟಿಂಗ್ ಮಾಡಲು ಆರಂಭಿಸುತ್ತಾರೆ. ಆದರೆ ಇದು ಕೂಡ ಹೆಚ್ಚು ಓಪನ್ ಆಗಿರಲಿಲ್ಲ. ದೀಪಿಕಾ ಪಡುಕೋಣೆ ಅವರ ಜೊತೆಗಿನ ಸಿನಿಮಾದಲ್ಲಿ ಜೊತೆಯಾಗಿ ನಟಿಸಲು ಆಫರ್ ಬಂದ ತಕ್ಷಣ ಅದನ್ನು ಅವರು ತಿರಸ್ಕರಿಸುತ್ತಾರೆ. ಇದಾದ ನಂತರ ಇವರಿಬ್ಬರ ನಡುವಿನ ಸಂಬಂಧ ಮುಗಿಯುತ್ತದೆ ಎಂಬುದಾಗಿ ಹೇಳಲಾಗುತ್ತಿದೆ.

ಇದಾದನಂತರ ನಿಮಗೆಲ್ಲ ತಿಳಿದಿರುವಂತೆ ದೀಪಿಕಾ ಪಡುಕೋಣೆ ಅವರು ರಣವೀರ್ ಸಿಂಗ್ ಅವರ ಜೊತೆಗೆ ಡೇಟಿಂಗ್ ನಡೆಸಿ ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ಇಬ್ಬರು ಕೂಡ ಅದ್ದೂರಿಯಾಗಿ ಮದುವೆಯಾಗುತ್ತಾರೆ. ದೀಪಿಕಾ ಪಡುಕೋಣೆ ಅವರ ಡೇಟಿಂಗ್ ಲಿಸ್ಟ್ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.