ರಶ್ಮಿಕಾ ಎಂದು ಕರೆಯದಿದ್ದರೂ ಪರವಾಗಿಲ್ಲ ಎಂದು ಹೇಳಿಗೆ ತನಗೆ ಬೇರೆ ಹೆಸರಿಂದ ಕರೆಯಿರಿ ಎಂದ ರಶ್ಮಿಕಾ. ಏನೆಂದು ಕರೆಯಬೇಕಂತೆ ಗೊತ್ತೇ??

13

ನಮಸ್ಕಾರ ಗೆಳೆಯರೇ ಕನ್ನಡ ಚಿತ್ರರಂಗದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ತಮ್ಮ ಸಿನಿಮಾ ಜರ್ನಿ ಯನ್ನು ಪ್ರಾರಂಭಿಸಿರುವ ರಶ್ಮಿಕಾ ಮಂದಣ್ಣ ಅತ್ಯಂತ ಬಹುಬೇಡಿಕೆಯ ನಟಿಯಾಗಿ ಕಾಣಿಸಿಕೊಳ್ಳುತಿದ್ದಾರೆ. ಅದರಲ್ಲೂ ಇತ್ತೀಚಿಗೆ ತೆಲುಗು ಚಿತ್ರರಂಗದಲ್ಲಿ ಅಲ್ಲುಅರ್ಜುನ್ ರವರ ಪುಷ್ಪ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಪಂಚಭಾಷಾ ತಾರೆಯಾಗಿ ತಮ್ಮ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ.

ಒಟ್ಟಾರೆಯಾಗಿ ರಶ್ಮಿಕ ಮಂದಣ್ಣ ಅವರ ಹೆಸರು ಪ್ರತಿಯೊಂದು ಚಿತ್ರರಂಗದಲ್ಲಿ ಕೂಡ ಈಗ ಓಡುವ ಕುದುರೆಯ ರೂಪದಲ್ಲಿ ಬೇಡಿಕೆ ಎಂದು ಹೇಳಬಹುದಾಗಿದೆ. ಅದರಲ್ಲೂ ಇತ್ತೀಚಿಗಷ್ಟೇ ತಮಿಳು ಚಿತ್ರರಂಗದ ತಲಪತಿ ವಿಜಯ್ ರವರ ಮುಂದಿನ ಸಿನಿಮಾಗೂ ಕೂಡ ನಾಯಕಿಯಾಗಿ ಆಯ್ಕೆಗೊಂಡಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ರಶ್ಮಿಕಾ ಮಂದಣ್ಣ ನವರು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಅತ್ಯಂತ ಹೆಚ್ಚು ಯಶಸ್ಸನ್ನು ಪಡೆದಿರುವ ಭಾರತೀಯ ಚಿತ್ರರಂಗದ ನಾಯಕ ನಟಿ ಆಗಿದ್ದಾರೆ ಎಂದರೆ ತಪ್ಪಾಗಲಾರದು.

ಇತ್ತೀಚಿಗಷ್ಟೇ ರಶ್ಮಿಕ ಮಂದಣ್ಣ ಹೆಸರು ಚೇಂಜ್ ಮಾಡಿಕೊಂಡಿದ್ದಾರೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ಸುದ್ದಿ ಆಗೋಕೂ ಕಾರಣ ಕೂಡ ರಶ್ಮಿಕ ಮಂದಣ್ಣ ನವರೇ ಎಂದು ಹೇಳಬಹುದಾಗಿದೆ. ನಿಜವಾಗಿ ಹೇಳಬೇಕೆಂದರೆ ಬೇರೆ ಹೆಸರಿನಿಂದ ಕರೆಯುವುದಕ್ಕೆ ಹೇಳಿರುವುದು ಕೂಡ ರಶ್ಮಿಕ ಮಂದಣ್ಣ ನವರೇ. ಹೌದು ಚಿತ್ರೀಕರಣದ ಸಂದರ್ಭದಲ್ಲಿ ರಶ್ಮಿಕಾ ಎಂದು ಕರೆಯುವುದು ಸಾಕಷ್ಟು ಉದ್ದದ ಹೆಸರು ಆಗಬಹುದು ಎನ್ನುವುದಾಗಿ ಅರಿತ ರಶ್ಮಿಕ ಮಂದಣ್ಣ ನವರು ನನ್ನನ್ನು ನೀವು ರಶ್ ಎನ್ನುವುದಾಗಿ ಕರೆಯಬಹುದು ನನಗೇನು ಅಡ್ಡಿ ಇಲ್ಲ ಎಂಬುದಾಗಿ ಹೇಳಿದ್ದಾರೆ. ಅಭಿಮಾನಿಗಳಿಗೆ ರಶ್ಮಿಕ ಮಂದಣ್ಣ ಅವರನ್ನು ಪ್ರೀತಿಯಿಂದ ಕರೆಯಲು ಒಂದು ಹೆಸರು ಸಿಕ್ಕಿತು ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ತುಂಬಾ ಸಮಯದ ನಂತರ ಚಿತ್ರೀಕರಣದಿಂದ ಬಿಡುವು ಮಾಡಿಕೊಂಡು ಕುಟುಂಬದೊಂದಿಗೆ ಕೂಡ ಈಗ ಕಾಲಕಳೆಯುತ್ತಿದ್ದಾರೆ.