ಪಾಂಡ್ಯ ಅಲ್ಲಾ, ಮುಂಬರುವ ಸೌತ್ ಆಫ್ರಿಕಾ ವಿರುದ್ಧದ ಟಿ-20 ಸರಣಿಗೆ ಭಾರತ ತಂಡಕ್ಕೆ ಈ ಇಬ್ಬರನ್ನು ಆಯ್ಕೆ ಮಾಡಿ ಎಂದ ಮಿಲ್ಲರ್. ಯಾರ್ಯರಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನದಿನಗಳಲ್ಲಿ ಐಪಿಎಲ್ ತನ್ನ ಪಂದ್ಯಾವಳಿಗಳ ಕೊನೆ ಹಂತಕ್ಕೆ ತಲುಪಿದ್ದು ಯಾರು ನಾಲ್ಕನೇ ಸ್ಥಾನದಲ್ಲಿ ಪ್ಲೇಆಫ್ ಹಂತಕ್ಕೆ ತೇರ್ಗಡೆ ಆಗುತ್ತಾರೆ ಎನ್ನುವುದು ಇನ್ನೂ ಕೂಡ ಕುತೂಹಲಕರ ವಿಚಾರವಾಗಿ ಉಳಿದಿದ್ದು ಡೆಲ್ಲಿ ಹಾಗೂ ಆರ್ಸಿಬಿ ತಲೆಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಒಂದುವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಗೆದ್ದರೆ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಆಫ್ ಹಂತಕ್ಕೆ ತೇರ್ಗಡೆ ಆಗುವಂತಹ ಕನಸು ಕನಸಾಗಿಯೇ ಉಳಿಯಲಿದೆ.
ಮುಂದಿನ ಹಂತಕ್ಕೆ ತೇರ್ಗಡೆಯಾಗಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ ಟೈಟನ್ಸ್ ತಂಡದ ವಿರುದ್ಧ ಗೆಲ್ಲುವುದು ಮಾತ್ರವಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಸೋಲಲೇಬೇಕು. ಹೀಗಾಗಿ ದೊಡ್ಡ ಅಂತರದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಗೆಲ್ಲಲೇ ಬೇಕಾದಂತಹ ಅನಿವಾರ್ಯತೆಯಲ್ಲಿದೆ. ಈ ಬಾರಿಯ ಐಪಿಎಲ್ ಮುಗಿದ ನಂತರ ಭಾರತ ಕ್ರಿಕೆಟ್ ತಂಡ ಸೌತ್ ಆಫ್ರಿಕಾ ವಿರುದ್ಧ 5 ಟಿ ಟ್ವೆಂಟಿ ಪಂದ್ಯಗಳ ಸರಣಿಯನ್ನು ಆಡಲಿದೆ. ಸೌತ್ ಆಫ್ರಿಕಾದ ಆಟಗಾರ ಆಗಿರುವ ಡೇವಿಡ್ ಮಿಲ್ಲರ್ ಅವರು ಈ ಬಾರಿ ಗುಜರಾತ್ ಟೈಟಾನ್ಸ್ ತಂಡದಲ್ಲಿ ಆಡುತ್ತಿದ್ದು ಸೌತ್ ಆಫ್ರಿಕಾ ವಿರುದ್ಧ ಭಾರತೀಯ ತಂಡದಲ್ಲಿ ಗುಜರಾತ್ ಟೈಟನ್ಸ್ ತಂಡದ ಈ ಇಬ್ಬರು ಆಟಗಾರರು ಇರಲೇಬೇಕು ಎಂಬುದಾಗಿ ಹೇಳಿದ್ದಾರೆ. ಹಾಗಿದ್ದರೆ ಆ ಆಟಗಾರರು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಗೆಳೆಯರೆ ಡೇವಿಡ್ ಮಿಲ್ಲರ್ ರವರು ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದಲ್ಲಿ ರಾಹುಲ್ ತೆವಾಟಿಯ ಹಾಗೂ ಶುಭಮನ್ ಗಿಲ್ ರವರು ಇರಲೇಬೇಕು ಎಂಬುದಾಗಿ ಹೇಳಿದ್ದಾರೆ. ರಾಹುಲ್ ತೆವಾಟಿಯ ಆಲ್-ರೌಂಡರ್ ಪರ್ಫಾರ್ಮೆನ್ಸ್ ಅನ್ನು ಗುಜರಾತ್ ತಂಡದಲ್ಲಿ ನೀಡಿದ್ದಾರೆ. ಇನ್ನು ಗಿಲ್ 13 ಪಂದ್ಯಗಳಲ್ಲಿ 402 ರನ್ನುಗಳನ್ನು ಬಾರಿಸಿದ್ದಾರೆ. ಅವರನ್ನು ಕೂಡ ಈ ಬಾರಿ ತಂಡದಲ್ಲಿ ಇರಬೇಕು ಎಂಬುದಾಗಿ ಹೇಳಿದ್ದಾರೆ. ಆದರೆ ಹಾರ್ದಿಕ್ ಪಾಂಡ್ಯ ರವರನ್ನು ಈ ಸಾಲಿನಲ್ಲಿ ಡೇವಿಡ್ ಮಿಲ್ಲರ್ ರವರು ಹೆಸರನ್ನು ಹೇಳದೆ ಇರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಈ ವಿಚಾರದ ಕುರಿತು ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.