ನನ್ನನ್ನು ಹೀರೋ ಮಾಡಿ ಸಿನಿಮಾ ಮಾಡಿ ಎಂದ ಅಲ್ಲೂ ಅರ್ಜುನ್ ಬಳಿ ನಿರ್ದೇಶಕ ಅಟ್ಲೀ ಕೇಳಿದ ಸಂಭಾವನೆ ಎಷ್ಟು ಗೊತ್ತೇ?? ಸಂಭಾವನೆ ಕೇಳಿ ಬೇಡ ಅಲ್ಲೂ, ಅಷ್ಟೊಂದಾ??
ನಮಸ್ಕಾರ ಸ್ನೇಹಿತರೇ ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ ಪುಷ್ಪಾ ಚಿತ್ರದ ನಂತರ ಅಲ್ಲು ಅರ್ಜುನ್ ಅವರ ಜನಪ್ರಿಯತೆಯನ್ನು ವುದು ಕೇವಲ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಾತ್ರವಲ್ಲದೆ ಹಿಂದಿ ರಾಜ್ಯಗಳಲ್ಲಿ ಕೂಡ ಗಣನೀಯವಾಗಿ ಹೆಚ್ಚಾಗಿದೆ. ಹೀಗಾಗಿ ಅವರ ಸಂಭಾವನೆ ಹಾಗೂ ಬೇಡಿಕೆ ಕೂಡ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಇನ್ನು ಇತ್ತೀಚಿಗಷ್ಟೇ ಕೆಲವೊಂದು ಸುದ್ದಿಗಳ ಪ್ರಕಾರ ಅಲ್ಲುಅರ್ಜುನ್ ರವರು ತಮ್ಮ ಮುಂದಿನ ಸಿನಿಮಾದ ವಿಚಾರವಾಗಿ ತಮಿಳಿನ ಖ್ಯಾತ ನಿರ್ದೇಶಕ ಆಗಿರುವ ಆಟ್ಲೀ ರವರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎಂಬುದಾಗಿ ಕೇಳಿಬಂದಿತ್ತು.
ಆದರೆ ಈಗ ಚಿತ್ರ ನಿರ್ಮಾಣದ ವಿಚಾರದಿಂದ ಹೊರಗೆ ಬಂದಿದ್ದಾರೆ ಎಂಬುದಾಗಿ ಕೇಳಿಬಂದಿದೆ. ಆಟ್ಲೀ ಸೂಪರ್ ಹಿಟ್ ರಾಜ-ರಾಣಿ ಸಿನಿಮಾದಿಂದ ತಮ್ಮ ನಿರ್ದೇಶವನ್ನು ಪ್ರಾರಂಭಿಸಿ ನಂತರ ತಲಪತಿ ವಿಜಯ್ ರವರಿಗೆ ತೇರಿ ಮೆರ್ಸಲ್ ಬಿಗಿಲ್ ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಇದುವರೆಗೂ ತಮ್ಮ ವೃತ್ತಿ ಜೀವನದಲ್ಲಿ ಯಾವುದೇ ಸೋಲನ್ನು ಕಂಡಿಲ್ಲ. ಇಷ್ಟು ಮಾತ್ರವಲ್ಲದೆ ಈಗಾಗಲೇ ಅವರು ಬಾಲಿವುಡ್ ಚಿತ್ರರಂಗದ ಕಿಂಗ್ ಖಾನ್ ಶಾರುಖ್ ಖಾನ್ ರವರಿಗೂ ಕೂಡ ನಿರ್ದೇಶನ ಮಾಡುವುದು ಫಿಕ್ಸ್ ಆಗಿದೆ. ನಾಯಕಿಯನ್ನಾಗಿ ನಯನತಾರ ರವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಇನ್ನು ಇದಕ್ಕೂ ಮುನ್ನವೇ ಅಲ್ಲು ಅರ್ಜುನ್ ಹಾಗೂ ಆಟ್ಲೀ ರವರ ಕಾಂಬಿನೇಷನ್ನಲ್ಲಿ ಲೈಕ ಪ್ರೊಡಕ್ಷನ್ ಸಂಸ್ಥೆಯ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತದೆ ಎನ್ನುವುದನ್ನು ಅಂದುಕೊಳ್ಳಲಾಗಿತ್ತು. ಆದರೆ ಈಗ ಆಟ್ಲೀ ರವರ ಸಂಭಾವನೆ ಯಿಂದಾಗಿ ಅಲ್ಲು ಅರ್ಜುನ್ ರವರು ಈ ವಿಚಾರದಿಂದ ಹಿಂದೆ ಸರಿದಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹೌದು ಗೆಳೆಯರೇ ಅಲ್ಲು ಅರ್ಜುನ್ ರವರಿಗೆ ಲೈಕಾ ಪ್ರೊಡಕ್ಷನ್ ಸಂಸ್ಥೆ ನೂರು ಕೋಟಿ ರೂಪಾಯಿ ಸಂಭಾವನೆ ನೀಡಲು ಮುಂದಾಗಿದೆ. ಆದರೆ ನಿರ್ದೇಶಕನಾಗಿ ಆಟ್ಲೀ ರವರು ಬರೋಬ್ಬರಿ 35 ಕೋಟಿ ರೂಪಾಯಿಗೂ ಅಧಿಕ ಸಂಭಾವನೆಯನ್ನು ಕೇಳುತ್ತಿರುವುದು ಈಗ ಎಲ್ಲರನ್ನೂ ಪೇಚಿಗೆ ಸಿಲುಕಿಸಿದೆ. ಹೀಗಾಗಿ ಆಟ್ಲೀ ರವರು ಈ ಪ್ರಾಜೆಕ್ಟ್ ನಲ್ಲಿ ನಿರ್ದೇಶಕರಾಗಿ ಕಾಣಿಸಿಕೊಳ್ಳುವುದು ಅನುಮಾನವಾಗಿದೆ. ಆದರೆ ಲೈಕಾ ಪ್ರೊಡಕ್ಷನ್ ಸಂಸ್ಥೆ ಅಲ್ಲು ಅರ್ಜುನ ರವರೊಂದಿಗೆ ಸಿನಿಮಾ ಮಾಡುವುದಂತೂ ಗ್ಯಾರೆಂಟಿ ಎಂಬುದಾಗಿ ಹೇಳಲಾಗುತ್ತಿದೆ.