ಚೇತನ ಒಬ್ಬರೇ ಅಲ್ಲ, ಅವರಂತೆ ಸರ್ಜರಿ ಮಾಡಿಸಿಕೊಂಡು ಅಡ್ಡ ಪರಿಣಾಮ ಎದುರಿಸಿದ ಟಾಪ್ ನಟ ನಟಿಯರು ಯಾರ್ಯಾರು ಗೊತ್ತೆ? ಇವರೆಲ್ಲರ ಪರಿಸ್ಥಿತಿ ಈಗ ಹೇಗಿದೆ ಗೊತ್ತಾ??

39

ನಮಸ್ಕಾರ ಸ್ನೇಹಿತರೇ ಚಿತ್ರಜಗತ್ತಿನಲ್ಲಿ ಸೆಲೆಬ್ರಿಟಿಗಳು ಬೇರೆಯವರಿಗಿಂತ ಚೆನ್ನಾಗಿ ಕಾಣಿಸಿಕೊಳ್ಳಬೇಕೆಂಬ ಅಭಿಲಾಷೆಯನ್ನು ಹೊಂದಿರುತ್ತಾರೆ ನಿಜ ಆದರೆ ಅದಕ್ಕಾಗಿ ಅತ್ಯಂತ ವೇಗದ ಮಾರ್ಗವನ್ನು ಹುಡುಕಿಕೊಳ್ಳುವುದು ನಿಜಕ್ಕೂ ಕೂಡ ಅದರ ದುಷ್ಪರಿಣಾಮಗಳನ್ನು ಎದುರಿಸುವ ಹಾಗೆ ಮಾಡುತ್ತದೆ. ಅಂದರೆ ಶಾರ್ಟ್ಕಟ್ ಉಪಯೋಗಿಸಿದರೆ ಖಂಡಿತವಾಗಿ ಮುಂದಿನ ದಿನಗಳಲ್ಲಿ ಅದಿಕ್ಕೆ ಸರಿಯಾದಂತಹ ಬೆಲೆ ತೆರಬೇಕಾಗುತ್ತದೆ. ಇಂದಿನ ವಿಚಾರದಲ್ಲಿ ಕೂಡ ನಾವು ಇದೇ ರೀತಿಯ ವಿಚಾರಗಳಿಂದ ತೊಂದರೆಯನ್ನು ಹೊಂದಿದಂತಹ ಸೆಲೆಬ್ರಿಟಿಗಳ ಕುರಿತಂತೆ ಮಾತನಾಡಲು ಹೊರಟಿದ್ದೇವೆ.

ಹೌದು ಗೆಳೆಯರೇ ಕೆಲವು ಕಾಸ್ಮೆಟಿಕ್ ಸರ್ಜರಿ ಹಾಗೂ ತೂಕವನ್ನು ಕಡಿಮೆ ಮಾಡುವಂತಹ ಸರ್ಜರಿ ಯಿಂದಾಗಿ ವಿಪತ್ತಿಗೆ ಒಳಗಾದಂತಹ ಸೆಲೆಬ್ರಿಟಿಗಳ ಕುರಿತಂತೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ಹಾಗಿದ್ದರೆ ಇಂತಹ ಸರ್ಜರಿ ಗಳಿಂದಾಗಿ ಸಮಸ್ಯೆಯನ್ನು ಅನುಭವಿಸಿರುವಂತಹ ಸೆಲೆಬ್ರಿಟಿಗಳು ಯಾರೆಲ್ಲ ಇದ್ದಾರೆ ಎಂಬುದನ್ನು ನೋಡೋಣ ಬನ್ನಿ.

ಆರತಿ ಅಗರ್ವಾಲ್; ತೆಲುಗು ಚಿತ್ರರಂಗದ ಅತ್ಯಂತ ಸುಂದರ ನಟಿಯಾಗಿದ್ದ ಆರತಿ ಅಗರ್ವಾಲ್ ರವರು ಶಸ್ತ್ರಚಿಕಿತ್ಸೆ ಯಿಂದಾಗಿ ಮರಣವನ್ನು ಹೊಂದಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಹೌದು ಗೆಳೆಯರು ತಮ್ಮ ದೇಹ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಆರತಿ ಅಗರ್ವಾಲ್ ರವರು ಲಿಪೋಸೆಕ್ಷನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಇದರಿಂದಾಗಿಯೇ ಅವರು ಹೃದಯಾ’ಘಾತದ ಕಾರಣದಿಂದಾಗಿ ಅಕಾಲಿಕವಾಗಿ ಮರಣವನ್ನು ಹೊಂದಿದ್ದಾರೆ ಎಂಬುದಾಗಿ ಸುದ್ದಿ. ತೂಕ ಇಳಿಕೆ ಮಾಡಲು ಕೂಡ ಶಸ್ತ್ರಚಿಕಿತ್ಸೆಗೆ ಒಳಗಾಗಿ ಇದೇ ಕಾರಣದಿಂದಾಗಿಯೂ ಕೂಡ ಕೆಲವು ದಿನಗಳ ನಂತರ ಮರಣಹೊಂದಿದ್ದಾರೆ ಎನ್ನುವ ಕಥೆ ಕೂಡ ಓಡಾಡುತ್ತಿದೆ ಯಾವುದು ಸತ್ಯ ಎನ್ನುವುದು ತಿಳಿದವರಿಗೆ ಗೊತ್ತು.

ಬುಲೆಟ್ ಪ್ರಕಾಶ್; ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ಹಾಸ್ಯನಟನಾಗಿ ಮಿಂಚಿ ಮರೆತಿದ್ದ ಬುಲೆಟ್ ಪ್ರಕಾಶ್ ರವರು ನಂತರದ ದಿನಗಳಲ್ಲಿ ಯಾವುದೇ ಅವಕಾಶವಿಲ್ಲದೆ ಕುಗ್ಗಿಹೋಗುತ್ತಾರೆ. ಈ ಪರಿಸ್ಥಿತಿಗೆ ಕಾರಣವಾಗಿದ್ದು ಅವರ ಅತಿಯಾದ ತೂಕ. ಇದಕ್ಕಾಗಿ ಅವರು 2018 ರಲ್ಲಿ ಫ್ಯಾಟ್ ಇಳಿಸಿಕೊಳ್ಳಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ 2020 ರ ಸುಮಾರಿಗೆ ಬುಲೆಟ್ ಪ್ರಕಾಶ್ ರವರು ಇದರ ಕಾರಣದಿಂದಾಗಿ ಬಹು ಅಂಗಾಂಗ ವೈಫಲ್ಯದ ಹಿನ್ನೆಲೆಯಲ್ಲಿ ಮರಣವನ್ನು ಹೊಂದುತ್ತಾರೆ.

ಚೇತನ ರಾಜ್; ಗೀತ ಹಾಗೂ ದೊರೆಸಾನಿ ಧಾರಾವಾಹಿಗಳ ಮೂಲಕ ಪ್ರವರ್ಧಮಾನಕ್ಕೆ ಬಂದಿರುವ ಅತ್ಯಂತ ಯುವ ಉದಯೋನ್ಮುಖ ನಟಿಯಾಗಿರುವ ಚೇತನ ರಾಜ್ ರವರು ತಮ್ಮ ದೇಹದ ತೂಕವನ್ನು ಕರಗಿಸಿಕೊಳ್ಳುವ ಕಾರಣಕ್ಕಾಗಿ ಸರ್ಜರಿಗೆ ಒಳಗಾಗಿ ಈ ಕಾರಣದಿಂದಾಗಿ ಅವರ ಶ್ವಾಸಕೋಶದಲ್ಲಿ ನೀರು ಹೆಚ್ಚಾಗಿ ಇದರಿಂದಾಗಿ ಮರಣವನ್ನು ಹೊಂದಿದ್ದಾರೆ. ಇದರಲ್ಲಿ ವೈದ್ಯರ ನಿರ್ಲಕ್ಷ್ಯ ಕೂಡ ಕಾರಣವಾಗಿದೆ ಎಂಬುದಾಗಿ ಹೇಳಲಾಗುತ್ತಿದೆ. ಇತ್ತೀಚಿಗಷ್ಟೇ ನಡೆದಿರುವ ಈ ಪ್ರಕರಣ ಈಗಾಗಲೇ ದೊಡ್ಡಮಟ್ಟದಲ್ಲಿ ಕರ್ನಾಟಕದಲ್ಲಿ ಸುದ್ದಿಯಾಗುತ್ತಿದೆ.

ಅನುಷ್ಕಾ ಶೆಟ್ಟಿ; ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಬಹುಬೇಡಿಕೆ ನಟಿಯಾಗಿದ್ದ ಅನುಷ್ಕಾ ಶೆಟ್ಟಿ ಅವರು ಕೂಡ ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸರ್ಜರಿಯನ್ನು ಮಾಡಿಸಿಕೊಂಡಿದ್ದರು ಆದರೆ ಅದರ ವ್ಯತಿರಿಕ್ತ ಪರಿಣಾಮದಿಂದಾಗಿ ಅವರ ದೇಹದಲ್ಲಿ ಮತ್ತೆ ತೂಕ ಹೆಚ್ಚಾಯಿತು. ಇದೇ ಕಾರಣಕ್ಕಾಗಿ ಅನುಷ್ಕಾ ಶೆಟ್ಟಿ ಅವರ ಬೇಡಿಕೆ ತೆಲುಗು ಚಿತ್ರರಂಗದಲ್ಲಿ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಕಡಿಮೆಯಾಯಿತು ಎಂದು ಹೇಳಬಹುದಾಗಿದೆ. ಇದೇ ಕಾರಣಕ್ಕಾಗಿ ಬಾಹುಬಲಿ ಚಿತ್ರದ ನಂತರ ನೀವು ಅವರ ತೂಕದಲ್ಲಿ ಹೆಚ್ಚಳವಾದದ್ದನ್ನು ಗಮನಿಸಬಹುದಾಗಿದೆ.

ನಯನತಾರ; ಈ ಸುದ್ದಿ ಎಷ್ಟರಮಟ್ಟಿಗೆ ಸತ್ಯ ಅಥವಾ ಸುಳ್ಳು ಎನ್ನುವುದು ಗೊತ್ತಿಲ್ಲ ಆದರೆ ಮೂಲಗಳ ಪ್ರಕಾರ ನಯನತಾರ ರವರು ಕೂಡ ತಮ್ಮ ಮುಖದ ಸೌಂದರ್ಯ ಹೆಚ್ಚುಮಾಡಲು ಸರ್ಜರಿಗೆ ಒಳಗಾಗಿದ್ದರಂತೆ. ಆದರೆ ಇದರ ವ್ಯತಿರಿಕ್ತ ಪರಿಣಾಮವನ್ನು ಇದುವರೆಗೂ ಕೂಡ ನಾವು ಯಾವುದೇ ಸಂದರ್ಭದಲ್ಲಿ ನೋಡಿಲ್ಲ ಎಂದು ಹೇಳಬಹುದು. ಈ ಎಲ್ಲಾ ವಿಚಾರಗಳನ್ನು ನೋಡಿದ ನಂತರ ಪ್ರಮುಖವಾಗಿ ನಾವು ಅರ್ಥೈಸಿಕೊಳ್ಳಬೇಕಾಗಿಲ್ಲ ಒಂದು ವಿಚಾರ ಎಂದರೆ ದೇವರು ನಮಗೆ ಸಹಜವಾಗಿ ನೀಡಿರುವ ದೈಹಿಕ ಸೌಂದರ್ಯವನ್ನು ನಾವು ಸಹಜ ರೀತಿಯಲ್ಲಿ ಉತ್ತಮಪಡಿಸಿಕೊಳ್ಳಲು ಪ್ರಯತ್ನ ಪಡಬೇಕೇ ಹೊರತು ಅದನ್ನು ಅಡ್ಡದಾರಿಯಲ್ಲಿ ಅತಿ ವೇಗವಾಗಿ ಉತ್ತಮಪಡಿಸಿಕೊಳ್ಳಲು ಹೋದರೆ ಅದರ ವ್ಯಕ್ತಿತ್ವ ಪರಿಣಾಮಗಳನ್ನು ಎದುರಿಸಲು ಕೂಡ ನಾವು ಸಿದ್ಧರಾಗಿರಬೇಕಾಗುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.