ಗೆದ್ದರೆ ಉಳಿಗಾಲ ಎಂಬಂತೆ ಇರುವ ಗುಜರಾತ್ ವಿರುದ್ದದ ಪಂದ್ಯದಲ್ಲಿ ಆರ್ಸಿಬಿ ಹನ್ನೊಂದರ ಹೀಗೆ ಆಯ್ಕೆ ಮಾಡಿದರೆ ಗೆಲುವು ಪಕ್ಕ. ಯಾರು ಹೊರಗೆ ಹೋಗಬೇಕು ಗೊತ್ತೇ??

18

ನಮಸ್ಕಾರ ಸ್ನೇಹಿತರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಎದುರು ಸೋತ ಹಿನ್ನೆಲೆಯಲ್ಲಿ ಮಾರ್ಚ್ 19 ರಂದು ನಡೆಯಲಿರುವ ಗುಜರಾತಿ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇ ಬೇಕಾದಂತಹ ಒತ್ತಡದಲ್ಲಿದೆ. ಹೌದು ಗೆಳೆಯರೇ ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಪ್ಲೇಆಫ್ ಹಂತಕ್ಕೆ ತೇರ್ಗಡೆಯಾಗುವ ರೇಸ್ ನಲ್ಲಿದೆ. ಹೀಗಾಗಿ ಮೇ 19ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟನ್ಸ್ ತಂಡದ ವಿರುದ್ಧವಾಗಿ ಗೆಲ್ಲಲೇಬೇಕಾಗಿದೆ.

ಈಗಾಗಲೇ ಗುಜರಾತ್ ಟೈಟನ್ಸ್ ತಂಡ ಟೇಬಲ್ ಟಾಪರ್ ಆಗಿ ಮುಂದಿನ ಹಂತಕ್ಕೆ ತೇರ್ಗಡೆಯಾಗಿದ್ದು ಕೊನೆಯ ಪಂದ್ಯ ಅಷ್ಟೊಂದು ಮಹತ್ವಪೂರ್ಣ ಆಗಿರುವುದಿಲ್ಲ. ಇನ್ನೂ ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಎದುರು ಸೋತರೆ ಮಾತ್ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮುಂದಿನ ಹಂತಕ್ಕೆ ತೇರ್ಗಡೆ ಆಗುವಂತಹ ಸಾಧ್ಯತೆ ಇರುತ್ತದೆ. ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದರೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಒಂದು ಅವಕಾಶ ಇರಲಿದೆ. ಅದೇನೆಂದರೆ ಗುಜರಾತ್ ಟೈಟನ್ಸ್ ವಿರುದ್ಧ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 80 ರನ್ನುಗಳಿಗಿಂತಲೂ ದೊಡ್ಡ ಅಂತರದ ಗೆಲುವು ಅಥವಾ 10 ಓವರ್ ಒಳಗೆ ಟಾರ್ಗೆಟ್ ಅನ್ನು ತಲುಪಬೇಕಾಗುತ್ತದೆ.

ಈ ಸಾಧನೆಯನ್ನು ಗುಜರಾತ್ ಟೈಟಾನ್ಸ್ ಪಂದ್ಯದಲ್ಲಿ ಮಾಡಿದರೆ ಮಾತ್ರ ಆರ್ಸಿಬಿ ತಂಡ ಉತ್ತಮ ರನ್ ರೇಟ್ ಜೊತೆಗೆ ಮುಂದಿನ ಹಂತಕ ತೇರ್ಗಡೆಯಾಗಲು ಸಾಧ್ಯವಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿನ ಪಂದ್ಯದಲ್ಲಿ ಕೇವಲ ಒಂದು ಬದಲಾವಣೆ ಮಾಡಿದರೆ ಸಾಕು ಎಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ. ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಆಡಿದ ತಂಡದಿಂದ ಸಿರಾಜ್ ರವರನ್ನು ಕೈ ಬಿಟ್ಟು, ಸಿದ್ದಾರ್ಥ ಕೌಲ್ ಅಥವಾ ಯುವ ಆಟಗಾರ ಚಾಮ ಮಿಲಿಂದ್ ರವರಿಗೆ ಸ್ಥಾನ ನೀಡಬಹುದು ಎಂದು ಹೇಳಿದ್ದಾರೆ. ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿದೆ, ವಿರಾಟ್ ಕೊಹ್ಲಿ, ಡುಪ್ಲೆಸಿಸ್, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್ವೆಲ್, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೋರ್, ಶಹಬಾಜ್ ಆಹ್ಮದ್, ಮೊಮ್ಮದ್ ಸಿರಾಜ್/ ಚಾಮ ಮಿಲಿಂದ್/ ಸಿದ್ದಾರ್ಥ ಕೌಲ್, ವಾನಿಂದು ಹಸರಂಗ, ಹರ್ಷಲ್ ಪಟೇಲ್, ಹೆಝಲ್ ವುಡ್,. ಇನ್ನು ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ತಮ್ಮ ಲಯಕ್ಕೆ ಮರಳ ಬೇಕಾಗಿರುವುದು ಅನಿವಾರ್ಯವಾಗಿದೆ.