ಶಸ್ತ್ರಚಿಕಿತ್ಸೆ ಹಿನ್ನೆಲೆಯಲ್ಲಿ ಇಹಲೋಕ ತ್ಯಜಿಸಿದ ನಟಿ ಚೇತನ ಶಸ್ತ್ರಚಿಕಿತ್ಸೆಗೆ ಎಷ್ಟು ಹಣವನ್ನು ಕಟ್ಟಿದ್ದರು ಗೊತ್ತಾ?? ಸತ್ತ ಮೇಲೆ ಕೂಡ ಹೆಚ್ಚಾದ ಆಸ್ಪತ್ರೆ ಬಿಲ್.

49

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿರುವ ವಿಚಾರವೆಂದರೆ ಕಿರುತೆರೆಯ ಖ್ಯಾತ ಯುವ ಉದಯೋನ್ಮುಕ ನಟಿ ಚೇತನ ರವರ ಮರಣದ ವಿಚಾರ. ಹೌದು ಗೆಳೆಯರೇ ಚೇತನ ರಾಜ್ ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ಈಗ ತಾನೇ ಬೆಳವಣಿಗೆ ಹೊಂದುತ್ತಿದ್ದ ನಟಿಯಾಗಿದ್ದರು. ಆದರೆ ಅವರು ತಮ್ಮ ಫ್ಯಾಟ್ ಕರಗಿಸಲು ವಿಶೇಷವಾದ ಶಸ್ತ್ರಚಿಕಿತ್ಸೆಗೆ ಒಳಗಾದ ಬೇಕಾದಂತಹ ಪರಿಸ್ಥಿತಿಗೆ ಸಿಲುಕಿದ್ದರು. ಇದಕ್ಕಾಗಿ ಅವರು ಶೆಟ್ಟಿಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು.

ಚೇತನ ರವರ ಮನೆಯವರು ಹೇಳುವಂತೆ ಈ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ವೈದ್ಯರು ಮಾಡಿರುವ ಎಡವಟ್ಟಿನಿಂದಾಗಿ ಶ್ವಾಸಕೋಶದಲ್ಲಿ ನೀರು ತುಂಬಿ ನಂತರ ಕಾರ್ಡಿಯಾಕ್ ಅರೆಸ್ಟ್ ನಿಂದಾಗಿ ಚೇತನ ರವರು ಮರಣವನ್ನು ಹೊಂದಿದ್ದಾರೆ ಎಂಬುದಾಗಿ ಹೇಳುತ್ತಿದ್ದಾರೆ. ಆದರೆ ಚೇತನ ರವರ ಮರಣಕ್ಕೆ ನಿಜವಾದ ಕಾರಣ ಏನು ಎಂಬುದು ಇದುವರೆಗೂ ಕೂಡ ತಿಳಿದುಬಂದಿಲ್ಲ. ಈಗಾಗಲೇ ಚೇತನಾ ರವರ ಮರಣೋತ್ತರ ಪರೀಕ್ಷೆ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನಡೆಯುತ್ತಿದೆ. ಚೇತನ ರವರು ಫ್ಯಾಟ್ ಕರಗಿಸಲು ಶಸ್ತ್ರಚಿಕಿತ್ಸೆ ಮಾಡುವ ಕುರಿತಂತೆ ಮನೆಯವರ ಬಳಿ ಮೊದಲು ಕೇಳಿದ್ದರು. ಆದರೆ ಚೇತನ ರವರ ಪೋಷಕರು ಇದಕ್ಕೆ ಒಪ್ಪಿಗೆಯನ್ನು ನೀಡಿರಲಿಲ್ಲ. ನಂತರ ಮನೆಯವರಿಗೆ ತಿಳಿಯದಂತೆ ಸ್ನೇಹಿತರ ಜೊತೆಗೂಡಿ ಈ ಚಿಕಿತ್ಸೆಗೆ ಚೇತನಾ ರವರು ಒಳಗಾಗಿದ್ದಾರೆ.

ಇನ್ನು ಈ ಚಿಕಿತ್ಸೆಗೆ ವೈದ್ಯರು ಬರೋಬರಿ 1.6 ಲಕ್ಷ ಆಗುತ್ತದೆ ಎಂಬುದಾಗಿ ಹೇಳಿದ್ದರು ಇದಕ್ಕಾಗಿಯೇ ಚೇತನ ರವರು ಶಸ್ತ್ರಚಿಕಿತ್ಸೆಗೂ ಮೊದಲೇ ಆಸ್ಪತ್ರೆಯಲ್ಲಿ 92 ಸಾವಿರ ರೂಪಾಯಿ ಹಣವನ್ನು ಕಟ್ಟಿದ್ದರು. ಈ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆಯ ನಡುವೆಯೇ ಚೇತನ ರವರಿಗೆ ಕಾರ್ಡಿಯಾಕ್ ಅರೆಸ್ಟ್ ಆಗುತ್ತದೆ. ಹೀಗಾಗಿ ಆಸ್ಪತ್ರೆಯಿಂದ ಕಾಡೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಅವರು ಕೊನೆಯುಸಿರನ್ನು ಹೇಳಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಕೇವಲ ಚೇತನ ರವರು ಮಾತ್ರವಲ್ಲದೆ ಅವರ ಮನೆಯವರ ಬಳಿ ಕೂಡ 19 ಸಾವಿರ ರೂಪಾಯಿ ಹಣವನ್ನು ಕೊಟ್ಟು ಅಂತ ಹೇಳಲಾಗಿತ್ತು ಇದರಲ್ಲಿ 9 ಸಾವಿರ ರೂಪಾಯಿ ಹಣವನ್ನು ಚೇತನ್ ಅವರ ಮನೆಯವರು ಕಟ್ಟಿದ್ದಾರೆ. ಹಣದ ವಿಷಯ ಏನೇ ಇರಲಿ ಗೆಳೆಯರೇ ಇಲ್ಲಿ ವೈದ್ಯರ ನಿರ್ಲಕ್ಷದಿಂದಾಗಿ ಒಂದು ಎಳೆ ಜೀವ ತನ್ನ ಜೀವನವನ್ನೇ ಕಳೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಿಜಕ್ಕೂ ಇದರ ಹಿಂದೆ ಏನು ನಡೆದಿದೆ ಎಂಬುದು ತಿಳಿದು ಬರಬೇಕಷ್ಟೆ.