ಕೇವಲ ಸಿಂಪಲ್ ಟಿಪ್ಸ್ ಅನ್ನು ಬಳಸಿಕೊಂಡು ಬಿಸಿಲಿನ ಬೇಗೆಯಿಂದ ನಿಮ್ಮ ಕಾರನ್ನು ರಕ್ಷಿಸುವುದು ಹೇಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ದೇಶದ ತುಂಬೆಲ್ಲ ಈಗ ಬೇಸಿಗೆಗಾಲ ಎನ್ನುವುದು ಹೆಚ್ಚಾಗಿ ಬಿಟ್ಟಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶ ತಾಪಮಾನದಿಂದ ಸುಡುತ್ತಿದೆ ಎಂದು ಹೇಳಬಹುದಾಗಿದೆ. ತಾಪಮಾನಗಳ ವೈಪರಿತ್ಯದಿಂದಾಗಿ ವಾಹನಗಳನ್ನು ರಕ್ಷಿಸುವುದು ಹೇಗೆ ಎನ್ನುವುದರ ಕುರಿತಂತೆ ಕೆಲವರಿಗೆ ಚಿಂತೆ ಹೆಚ್ಚಿರಬಹುದು. ಈ ಬೇಸಿಗೆಯಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಕಷ್ಟವಾಗಿಬಿಟ್ಟಿದೆ ಇನ್ನು ಕಾರುಗಳನ್ನು ಹೇಗೆ ರಕ್ಷಿಸುವುದು ಎನ್ನುವುದಾಗಿ ನೀವು ಯೋಚಿಸುತ್ತಿರಬಹುದು ಅದಕ್ಕೆ ಕೆಲವೊಂದು ಕ್ರಮಗಳಿವೆ ಅದನ್ನು ಹಿಂಬಾಲಿಸಿದರೆ ಖಂಡಿತವಾಗಿ ಬೇಸಿಗೆ ಸಂದರ್ಭದಲ್ಲಿ ಕಾರುಗಳ ಸುರಕ್ಷತೆಯನ್ನು ನೋಡಿಕೊಳ್ಳಬಹುದಾಗಿದೆ.
ಮೊದಲಿಗೆ ನೀವು ಪ್ರತಿಸಾರಿ ಎಸಿ ಸರಿಯಾಗಿದೆ ಎನ್ನುವುದನ್ನು ಗಮನಿಸುತ್ತಲೇ ಇರಬೇಕು. ಯಾಕೆಂದರೆ ಒಂದು ವೇಳೆ ಒಮ್ಮೆಗೆ ಎಸಿ ಹಾಳಾಗಿ ಬಿಟ್ಟರೆ ಮುಂದಿನ ದಿನಗಳಲ್ಲಿ ಅದು ನಿಮಗೆ ಸಾಕಷ್ಟು ದೊಡ್ಡಮಟ್ಟದ ತೊಂದರೆಗಳನ್ನು ತರಬಹುದು. ಅದಕ್ಕಾಗಿ ಒಂದು ವೇಳೆ ಎಸಿ ಹಾಳಾದರೆ ತಪ್ಪದೆ ಮೆಕಾನಿಕ್ ಬಳಿ ಮೊದಲು ಅದನ್ನು ತೋರಿಸಿ. ಯಾಕೆಂದರೆ ಇಂತಹ ಸಮಸ್ಯೆಗಳು ನಂತರ ದೊಡ್ಡದಾದ ಮೇಲೆ ಇನ್ನಷ್ಟು ಖರ್ಚು ಹಾಗೂ ಕೆಲಸವನ್ನು ನೀಡುತ್ತದೆ.

ಎರಡನೆಯದಾಗಿ ಎಸಿಯನ್ನು ಹೇಗೆ ಚೆನ್ನಾಗಿ ನೋಡಿಕೊಳ್ಳುತ್ತಿರೋ ಅದೇ ರೀತಿಯಲ್ಲಿ ಏರ್ ಫಿಲ್ಟರ್ ಅನ್ನು ಕೂಡ ಪ್ರತಿಬಾರಿ ಕ್ಲೀನ್ ಮಾಡುತ್ತಲೇ ಇರಬೇಕು. ಯಾಕೆಂದರೆ ಈ ಹವಾಮಾನದ ಬದಲಾವಣೆಯಿಂದಾಗಿ ಅದರಲ್ಲಿ ದೂಳು ಹಾಗೂ ಕೊಳಕು ತುಂಬಿಕೊಳ್ಳುತ್ತದೆ. ಹೀಗಾಗಿ ಅವುಗಳನ್ನು ಸರಿ ಮಾಡದಿದ್ದರೆ ಎಸಿ ರೀತಿಯಲ್ಲಿ ಅದು ಕೂಡ ದೊಡ್ಡಮಟ್ಟದ ತೊಂದರೆಯನ್ನು ನೀಡುತ್ತದೆ. ಹೀಗಾಗಿ ಒಂದು ವೇಳೆ ಇದರಲ್ಲಿ ಕೂಡ ಕೊಳಕು ಅಥವಾ ಕ್ಲೀನಿಂಗ್ ವಿಚಾರಗಳ ಸಮಸ್ಯೆ ಅಥವಾ ಹಾಳಾಗಿದ್ದರೆ ತಪ್ಪದೇ ಇದನ್ನು ಸರಿಪಡಿಸಿ ಇಲ್ಲವೇ ಬದಲಾಯಿಸಿಬಿಡಿ.
ನಮ್ಮ ದೇಹಕ್ಕೆ ಹೇಗೆ ನೀರು ಬೇಕಾಗುತ್ತದೆಯೋ ಕಾರಿಗೂ ಕೂಡ ಅದೇ ರೀತಿಯಲ್ಲಿ ಫ್ಲೂಯಿಡ್ ಬೇಕಾಗುತ್ತದೆ. ಹೌದು ಗೆಳೆಯರೇ ಕಾರಿನ ನೀರಿನ ಮಟ್ಟವನ್ನು ಅದಕ್ಕೆ ಅಗತ್ಯವಿರುವ ಅಷ್ಟರಮಟ್ಟಿಗೆ ನೀವು ಇಡಲೇ ಬೇಕಾಗುತ್ತದೆ. ಅದು ಕೂಡ ಈ ಬೇಸಿಗೆ ಸಂದರ್ಭದಲ್ಲಿ ಕಾರಿಗೆ ಹಾಕಿರುವ ಫ್ಲೂಯಿಡ್ ಆವಿಯಾಗಿ ಬಿಡುವ ಕಾರಣದಿಂದಾಗಿ ಅದನ್ನು ಪದೇ ಪದೇ ಚೆಕ್ ಮಾಡುತ್ತಲೇ ಇರಬೇಕಾಗುತ್ತದೆ. ಹೀಗಾಗಿ ಇದೊಂದು ತಪ್ಪದೇ ಹಾಕಿ ಬಿಡಿ. ಇದರಿಂದಾಗಿ ಗಾಡಿಯ ಬಾಳಿಕೆ ಕೂಡ ಹೆಚ್ಚಿನ ದಿನಗಳ ಕಾಲ ಬರುತ್ತದೆ.
ಎಲ್ಲದಕ್ಕಿಂತ ಹೆಚ್ಚಾಗಿ ನೀವು ಗಾಡಿಯಲ್ಲಿ ಹೋಗುವಾಗ ಒಂದು ವೇಳೆ ನೀವು ಬ್ರೇಕ್ ಹಾಕಿದಾಗ ಯಾವುದಾದರೂ ಸದ್ದು ಅಥವಾ ಅದು ಸರಿಯಿಲ್ಲ ಎಂಬ ಅನುಭವ ಬರುತ್ತಿದ್ದಂತೆ ಕೂಡಲೇ ಮೆಕ್ಯಾನಿಕ್ ಬಳಿ ತೋರಿಸಿ ಬ್ರೇಕ್ ಅನ್ನು ಮೊದಲು ಸರಿ ಮಾಡಿಕೊಳ್ಳಿ. ಒಂದು ವೇಳೆ ನೀವು ನಿರ್ಲಕ್ಷ ತೋರಿಸಿದರೆ ಮುಂದೆ ಅನಾಹುತ ಆಗಬಹುದಾದಂತ ಸಾಧ್ಯತೆ ಕೂಡ ಇರುತ್ತದೆ.
ಇನ್ನು ಈ ಬೇಸಿಗೆಯಲ್ಲಿ ಕಾರನ್ನು ಹೆಚ್ಚಾಗಿ ಓಡಾಡಿಸುವುದು ಕ್ಕಿಂತ ಹೆಚ್ಚಾಗಿ ಮನೆಯಲ್ಲಿ ಹಾಗೆ ಸುಮ್ಮನೆ ಇರುವುದು ಹೆಚ್ಚು ಎಂದು ಹೇಳಬಹುದು. ಅದಕ್ಕಾಗಿಯೇ ಗಾಡಿಯ ಟೈಯರ್ ಅನ್ನು ಹಾಗೂ ಅದರಲ್ಲಿ ಗಾಳಿ ಸರಿಯಾಗಿ ಇದೆಯೇ ಇಲ್ಲವೋ ಎನ್ನುವುದನ್ನು ಆಗಾಗ ತಪಾಸಣೆ ಮಾಡಿಸುತ್ತಲೇ ಇರಿ. ಯಾಕೆಂದರೆ ಬೇಸಿಗೆ ಕಾಲದಲ್ಲಿ ಟೈಯರ್ ಒಳಗೆ ಟ್ಯೂಬ್ ನಲ್ಲಿ ಗಾಳಿ ಹೀಗೆ ಪ್ರೆಷರ್ ರಿಲೀಸ್ ಆಗುವುದು ಆಗುತ್ತಲೇ ಇರುತ್ತದೆ.

ಇದಕ್ಕಾಗಿ ನೀವು ಯಾವಾಗ ಎಲ್ಲಾ ಕಾರನ್ನು ಪಾರ್ಕ್ ಮಾಡಿದಾಗ ನೆರಳಿನ ಜಾಗದಲ್ಲಿ ಗಾಡಿಯನ್ನು ಪಾರ್ಕ್ ಮಾಡುವುದು ಅತ್ಯುತ್ತಮ. ಹೀಗೆ ಬೇಸಿಗೆಯಲ್ಲಿ ಎಂತಹ ಮೂಲಭೂತ ಕಾರಿನ ವಿಚಾರಗಳನ್ನು ಧ್ಯಾನದಲ್ಲಿ ಇಟ್ಟುಕೊಳ್ಳುವ ಕಾರಣದಿಂದಾಗಿ ನಿಮ್ಮ ಗಾಡಿಯ ಪರಿಸ್ಥಿತಿ ಬೇಸಿಗೆಗಾಲದ ಚೆನ್ನಾಗಿರುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳುವುದನ್ನು ಮರೆಯಬೇಡಿ.