ನಾನು ರಿಲೇಷನ್ಶಿಪ್ ನಲ್ಲಿ ಇದ್ದೇನೆ ಎಂದು ಮಾತು ಆರಂಭಿಸಿ ವೈಷ್ಣವಿ ಗೌಡ ಹೇಳಿದ್ದೇನು ಗೊತ್ತಾ?? ಯಾರ ಜೊತೆ ಅಂತೇ ಗೊತ್ತೇ?
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಟಿ ವೈಷ್ಣವಿ ಗೌಡರವರು ಕರ್ನಾಟಕ ರಾಜ್ಯದಲ್ಲಿ ಅವರ ಹೆಸರಿನಿಂದ ಕಡಿಮೆ ಹಾಗೂ ಸನ್ನಿಧಿಯನ್ನುವ ಹೆಸರಿನಿಂದ ಜಾಸ್ತಿಯಾಗಿ ಪರಿಚಿತರಾಗಿದ್ದಾರೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಕನ್ನಡ ಚಿತ್ರರಸಿಕರಿಗೆ ಪರಿಚಿತರಾದ ವೈಷ್ಣವಿ ಗೌಡರವರ ಇಂದಿಗೂ ಕೂಡ ಅತ್ಯಂತ ಜನಪ್ರಿಯ ಕಿರುತೆರೆ ವಾಹಿನಿಯ ನಟಿಯಾಗಿ ಕಾಣಿಸಿಕೊಂಡಿದ್ದಾರೆ.
ಒಂದು ಲೆಕ್ಕದಲ್ಲಿ ಹೇಳುವುದಾದರೆ ಇಂದು ಇಷ್ಟು ದೊಡ್ಡ ಮಟ್ಟಿಗೆ ವೈಷ್ಣವಿ ಗೌಡ ರವರು ಬೆಳೆದಿದ್ದಾರೆ ಎಂದರೆ ನಿಜಕ್ಕೂ ಕೂಡ ಅಗ್ನಿಸಾಕ್ಷಿ ಧಾರಾವಾಹಿಯ ಜನಪ್ರಿಯತೆ ಕಾರಣ ಎಂದರೆ ತಪ್ಪಾಗಲಾರದು. ಇದಾದ ನಂತರ ಬಿಗ್ಬಾಸ್ ಸೀಸನ್ 8ರಲ್ಲಿ ಕೂಡ ವೈಷ್ಣವಿ ಗೌಡರವರು ಕಾಣಿಸಿಕೊಂಡು ಪ್ರತಿಯೊಬ್ಬ ವೀಕ್ಷಕರ ಮನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಖಂಡಿತವಾಗಿ ಪ್ರತಿಯೊಬ್ಬ ಪ್ರೇಕ್ಷಕರು ಕೂಡ ಸೆಲೆಬ್ರಿಟಿಗಳ ನಿಜಜೀವನದಲ್ಲಿ ಏನೆಲ್ಲಾ ನಡೆಯುತ್ತದೆ ಅವರು ಹೇಗೆ ವರ್ತಿಸುತ್ತಾರೆ ಎನ್ನುವುದರ ಕುರಿತಂತೆ ತಿಳಿದುಕೊಳ್ಳಲು ಆಸಕ್ತಿ ಹೊಂದಿರುತ್ತಾರೆ.

ಬಿಗ್ ಬಾಸ್ ಮನೆಯಲ್ಲಿ ವೈಷ್ಣವಿ ಗೌಡರವರ ನಡವಳಿಕೆಯನ್ನು ವುದು ನಿಜಕ್ಕೂ ಕೂಡ ಅಪರಂಜಿ ಹಾಗೆ ಇತ್ತು ಎಂದರೆ ತಪ್ಪಾಗಲಾರದು. ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಬಂದಾಗಿನಿಂದಲೂ ಕೂಡ ವೈಷ್ಣವಿ ಗೌಡ ರವರ ಬಾಯ್ಫ್ರೆಂಡ್ ಯಾರು ಯಾವಾಗ ಮದುವೆಯಾಗುತ್ತಾರೆ ಎನ್ನುವ ಪ್ರಶ್ನೆಗಳು ಆಗಾಗ ಬರುತ್ತಲೇ ಇದ್ದವು. ಈಗ ಕೊನೆಗೂ ಕೂಡ ಈ ಕುರಿತಂತೆ ಅವರೇ ಮೌನ ಮುರಿದು ಮಾತನಾಡಿದ್ದಾರೆ. ಹೌದು ಗೆಳೆಯರೇ ಚಂದು ಗೌಡರವರು ವೀಕೆಂಡ್ ನಲ್ಲಿ ನಡೆಸಿಕೊಡುವ ಚಾಟ್ ಕಾರ್ನರ್ ಕಾರ್ಯಕ್ರಮದಲ್ಲಿ ಈ ಕುರಿತಂತೆ ಪ್ರಶ್ನಿಸಿದಾಗ ನಾನು ಕಮಿಟೆಡ್ ಆಗಿದ್ದೇನೆ ಎಂಬುದಾಗಿ ವೈಷ್ಣವಿ ಗೌಡ ಹೇಳಿದ್ದಾರೆ. ಆದರೆ ಅವರು ಕಮಿಟೆಡ್ ಆಗಿರುವುದು ಯಾವುದೋ ಹುಡುಗನಿಗಲ್ಲ ಬದಲಾಗಿ ಅವರ ಕೆಲಸಕ್ಕಾಗಿ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಜೀವನದಲ್ಲಿ ಸಾಧಿಸಲು ಇನ್ನೂ ಬೇಕಾದಷ್ಟಿದೆ ಅವುಗಳನ್ನು ಸಾಧಿಸುವವರೆಗೂ ಕೂಡ ಇದರ ಕುರಿತಂತೆ ಯಾವ ಯೋಚನೆ ಇಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.