ಯಶಸ್ಸಿನ ಮೇಲೆ ಯಶಸ್ಸು ಪಡೆದರೂ ಕೂಡ ಅಣ್ಣಾವ್ರು, ವಿಷ್ಣುದಾದ ರವರ ಜೊತೆ ಮತ್ತೆ ಸಿನಿಮಾ ಯಾಕೆ ಮಾಡಲಿಲ್ಲ ಗೊತ್ತೇ??

30

ನಮಸ್ಕಾರ ಸ್ನೇಹಿತರೇ ಇಂದಿನ ಭಾರತೀಯ ಚಿತ್ರರಂಗದಲ್ಲಿ ಹೇಗೆ ರಾಜಕುಮಾರ್ ಹಿರಾನಿ ರಾಜಮೌಳಿ ಅವರು ಇದ್ದಾರೋ. ಅದೇ ರೀತಿಯಲ್ಲಿ ಅಂದು ಕನ್ನಡ ಚಿತ್ರರಂಗದಲ್ಲಿ ಚಿತ್ರ ಬ್ರಹ್ಮನಾಗಿ ಪುಟ್ಟಣ್ಣ ಕಣಗಾಲ್ ಅವರು ಮಿಂಚುತ್ತಿದ್ದರು. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗದ ಕಣ್ಣುಗಳು ಎನ್ನುವುದಾಗಿ ರಾಜಕುಮಾರ್ ಹಾಗೂ ವಿಷ್ಣುವರ್ಧನ್ ರವರನ್ನು ಎಲ್ಲರೂ ಕರೆಯುತ್ತಾರೆ. ನಿಮಗೆ ಗೊತ್ತಾ ಗೆಳೆಯರೇ ರಾಜಕುಮಾರ್ ಹಾಗೂ ವಿಷ್ಣುವರ್ಧನ್ ರವರ ಜೊತೆಗೆ ಕನ್ನಡ ಚಿತ್ರ ರಂಗದ ಚಿತ್ರಬ್ರಹ್ಮ ಎಂದೇ ಖ್ಯಾತರಾಗಿರುವ ಪುಟ್ಟಣ್ಣ ಕಣಗಾಲ್ ಅವರು ಹೆಚ್ಚು ಸಿನಿಮಾಗಳನ್ನು ಮಾಡಿಲ್ಲ.

ಇಷ್ಟೊಂದು ಯಶಸ್ವಿ ನಿರ್ದೇಶಕರು ಈ ಇಬ್ಬರು ನಟರೊಂದಿಗೆ ಯಾಕೆ ಹೆಚ್ಚಿನ ಸಿನಿಮಾಗಳನ್ನು ಮಾಡಿಲ್ಲ ಎನ್ನುವುದಾಗಿ ಕೂಡ ನಿಮಗೆ ಆಶ್ಚರ್ಯ ಅನಿಸಬಹುದು. ಪುಟ್ಟಣ್ಣ ಕಣಗಾಲ್ ಅವರು ಅಣ್ಣಾವ್ರು ಜೊತೆಗೆ ಮಾಡಿದ್ದು ಕೇವಲ ಮೂರು ಸಿನಿಮಾ ಮಾತ್ರ. ಅವುಗಳು ಯಾವುವೆಂದರೆ ಸಾಕ್ಷಾತ್ಕಾರ ಕರುಳಿನ ಕರೆ ಹಾಗೂ ಮಲ್ಲಮ್ಮನ ಪವಾಡ. ವಿಷ್ಣುವರ್ಧನ್ ರವರೊಂದಿಗೆ ಪುಟ್ಟಣ್ಣ ಕಣಗಾಲ್ ರವರು ಮಾಡಿರುವ ಒಂದೇ ಒಂದು ಸಿನಿಮಾ ಎಂದರೆ ಅದು ನಾಗರಹಾವು.

ಹೀಗಿದ್ದಲ್ಲಿ ಪುಟ್ಟಣ್ಣ ಕಣಗಾಲ್ ಅವರು ಈ ಇಬ್ಬರು ಸೂಪರ್ಸ್ಟಾರ್ ನಟರೊಂದಿಗೆ ಮತ್ತೊಮ್ಮೆ ಯಾಕೆ ಸಿನಿಮಾ ಮಾಡಲು ಹೋಗಲಿಲ್ಲ ಎಂಬುದಾಗಿ ನೀವು ಕುತೂಹಲರಾಗಿರಬಹುದು. ಬನ್ನಿ ಅದಕ್ಕೆ ಪುಟ್ಟಣ್ಣ ಕಣಗಾಲ್ ರವರ ಕಾರಣಗಳೇನೆಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಹೌದು ಗೆಳೆಯರೆ ಪುಟ್ಟಣ್ಣ ಕಣಗಾಲ್ ಅವರು ಇದಾದನಂತರ ಹೆಚ್ಚಿಗೆ ಮಹಿಳಾ ಪ್ರಾಧಾನ್ಯತೆ ಹೊಂದಿರುವ ಚಿತ್ರಗಳ ನಿರ್ದೇಶನದ ಕಡೆಗೆ ಆಸಕ್ತಿಯನ್ನು ಹೊಂದಿರುತ್ತಾರೆ. ಇದಾದ ನಂತರ ಅವರು ಮಾಡಿರುವುದು ಕೂಡ ಹೆಚ್ಚಿಗೆ ಮಹಿಳಾ ಪ್ರಾಧಾನ್ಯತೆ ಹೊಂದಿರುವ ಸಿನಿಮಾಗಳನ್ನೇ. ಈ ಸಂದರ್ಭದಲ್ಲಿ ನಾಯಕರಾಗಿ ಹೊಸಬರಿಗೆ ಹೆಚ್ಚಾಗಿ ಅವಕಾಶವನ್ನು ನೀಡುತ್ತಿದ್ದರು. ಹೀಗಾಗಿ ಈ ಸಂದರ್ಭದಲ್ಲಿ ದೊಡ್ಡ ಜನಪ್ರಿಯತೆ ಹೊಂದಿದ್ದ ಅಣ್ಣಾವ್ರು ಹಾಗೂ ದಾದಾ ರವರ ಜೊತೆಗೆ ಸಿನಿಮಾವನ್ನು ಮಾಡಲು ಹೋಗಲಿಲ್ಲ ಎಂದು ಹೇಳಬಹುದಾಗಿದೆ.