ಕೊನೆಗೂ ಸಿಕ್ತು ಅಸಲಿ ಕಾರಣ: ಮಂಜು ಹಾಗೂ ರೀನ ರವರನ್ನು ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಿಂದ ಹೊರ ಕಳುಹಿಸಲು ಕಾರಣವೇನು ಗೊತ್ತೇ??

202

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಿರುವ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮ ಜೀ ಕನ್ನಡ ವಾಹಿನಿಯ ಡ್ರಾಮಾ ಜೂನಿಯರ್ ಕಾರ್ಯಕ್ರಮಕ್ಕೆ ಸರಿಯಾದ ಕಾಂಪಿಟೇಶನ್ ನೀಡುತ್ತಿದೆ. ಚೆನ್ನಾಗಿ ರೇಟಿಂಗ್ ಕೂಡ ಪಡೆಯುತ್ತಿದೆ. ಆದರೆ ಕೆಲವು ಕಾರಣಗಳಿಂದ ಪ್ರೇಕ್ಷಕರಿಗೆ ಕಾರ್ಯಕ್ರಮ ಸ್ವಲ್ಪ ಇರಿಸುಮುರುಸನ್ನು ಉಂಟು ಮಾಡುತ್ತಿದೆ. ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿ ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದ ವಂಶಿಕ ರಾಜ-ರಾಣಿ ಕಾರ್ಯಕ್ರಮದ ಶ್ರೀಕಾಂತ್ ಹೀಗೆ ಹಲವಾರು ಖ್ಯಾತನಾಮ ಸ್ಪರ್ಧಿಗಳು ಕೂಡ ಕಾಣಿಸಿಕೊಂಡಿದ್ದಾರೆ.

ಇನ್ನು ಈ ಕಾರ್ಯಕ್ರಮವನ್ನು ಪ್ರಾರಂಭದಿಂದಲೂ ಕೂಡ ನಿರೂಪಣೆ ಮಾಡಿಕೊಂಡು ಬರುತ್ತಿರುವುದು ಬಿಗ್ ಬಾಸ್ ವಿನ್ನರ್ ಆಗಿರುವ ಮಂಜು ಪಾವಗಡ ಹಾಗೂ ಕ್ರಿಕೆಟ್ ನಿರೂಪಕಿ ಯಾಗಿರುವ ರೀನಾ ಡಿಸೋಜರವರು. ಆದರೆ ಈಗ ಇವರಿಬ್ಬರನ್ನು ಕೂಡ ಕಾರ್ಯಕ್ರಮದ ಅರ್ಧದಲ್ಲಿಯೇ ಹೊರಕ್ಕೆ ಕಳಿಸಲಾಗಿದೆ. ಇಷ್ಟೊಂದು ಚೆನ್ನಾಗಿ ಪ್ರೇಕ್ಷಕರ ನೆಚ್ಚಿನ ಕಾರ್ಯಕ್ರಮವಾಗಿ ಮೂಡಿಬಂದಿದ್ದ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಿಂದ ಇವರಿಬ್ಬರನ್ನು ನಿರೂಪಕರಾಗಿ ಹೊರಗೆ ಕಳುಹಿಸಿದ್ದು ಯಾಕೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಗೆಳೆಯರೇ ಪಾವಗಡ ಮಂಜು ಹಾಗೂ ರೀನ ಡಿಸೋಜ ಇಬ್ಬರನ್ನು ಕೂಡ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಿಂದ ನಿರೂಪಕರ ಸ್ಥಾನದಿಂದ ಹೊರಕ್ಕೆ ಕಳಿಸಲಾಗಿತ್ತು ಅವರ ಜಾಗಕ್ಕೆ ಈಗ ಖ್ಯಾತ ನಿರೂಪಕ ನಿರಂಜನ್ ದೇಶಪಾಂಡೆ ಅವರನ್ನು ನೇಮಿಸಲಾಗಿದೆ. ವಿಶೇಷ ಎನ್ನುವಂತೆ ಈ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ನಿರಂಜನ್ ರವರ ಪತ್ನಿಯಾಗಿರುವ ಯಶಸ್ವಿನಿ ಅವರು ಕೂಡ ಸ್ಪರ್ಧಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಕಾರ್ಯಕ್ರಮ ಮುಗಿಯುವರೆಗೂ ನಾನು ಕೇವಲ ಇಲ್ಲಿ ನಿರೂಪಕ ಮಾತ್ರ ಎನ್ನುವುದಾಗಿ ಹಾಸ್ಯಸ್ಪದವಾಗಿ ಹೇಳಿದ್ದಾರೆ.

ಇನ್ನು ಕಲರ್ಸ್ ಕನ್ನಡ ವಾಹಿನಿಯ ಈ ಜನಪ್ರಿಯ ರಿಯಾಲಿಟಿ ಶೋ ಕಾರ್ಯಕ್ರಮದಿಂದ ನಿರೂಪಣೆಯ ಸ್ಥಾನದಿಂದ ಮಂಜು ಪಾವಗಡ ಹಾಗೂ ರೀನ ಡಿಸೋಜ ಇಬ್ಬರು ಕೂಡ ಹೊರಹೋಗುವುದಕ್ಕೆ ಅವರ ಬೇರೆ ಕೆಲಸಗಳು ಹಾಗೂ ಬ್ಯುಸಿ ಶೆಡ್ಯೂಲ್ ಕಾರಣ ಎಂಬುದಾಗಿ ಹೇಳಲಾಗಿದೆಯಾದರೂ ಕೂಡ, ಇಲ್ಲಿ ಕಾರಣ ಬೇರೇನೆ ಇದೆ. ಹೌದು ಗೆಳೆಯರೇ ಗಿಚ್ಚಿ ಗಿಲಿಗಿಲಿ ನಂತಹ ಕಾರ್ಯಕ್ರಮಕ್ಕಾಗಿ ಹಲವಾರು ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತದೆ. ಒಳ್ಳೆಯ ರೇಟಿಂಗ್ ಬಂದರೆ ಮಾತ್ರ ಕಾರ್ಯಕ್ರಮವನ್ನು ಜನರು ಇಷ್ಟಪಟ್ಟು ನೋಡುತ್ತಾರೆ ಇದರ ಮೂಲಕವೇ ಹಾಕಿರುವ ಬಂಡವಾಳದಿಂದ ಲಾಭವನ್ನು ನಿರ್ಮಾಪಕರು ಪಡೆಯುತ್ತಾರೆ. ಇದಕ್ಕಾಗಿ ಕಾರ್ಯಕ್ರಮದ ಕಂಟೆಂಟ್ ನಿರೂಪಣೆ ಹಾಗೂ ಅದನ್ನು ಜನರಿಗೆ ತಲುಪಿಸುವಂತಹ ರೀತಿ ಕೂಡ ಚೆನ್ನಾಗಿರಬೇಕಾಗುತ್ತದೆ.

ಮೊದಲಿಗೆ ಮಂಜು ಪಾವಗಡ ರವರ ಕುರಿತಂತೆ ಮಾತನಾಡುವುದಾದರೆ ಅವರೊಬ್ಬ ಉತ್ತಮ ಕಲಾವಿದ ಹಾಗೂ ಹಾಸ್ಯ ವನ್ನು ಯಾವ ಸಮಯದಲ್ಲಿ ಬೇಕಾದರೂ ಸಿಂಪಡಿಸ ಬಲ್ಲ ಅಂತಹ ಜಾದುಗಾರ ಆದರೆ ನಿರೂಪಣ ವಿಚಾರದಲ್ಲಿ ಮಾತ್ರ ಅವರಿಗೆ ಅದರ ಕುರಿತಂತೆ ಟೆಕ್ನಿಕ್ ತಿಳಿದಿಲ್ಲ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಇದಕ್ಕಾಗಿ ತಮ್ಮ ನಿರೂಪಣಾ ನೈಪುಣ್ಯತೆಯ ಮೂಲಕ ಇಂದು ಅಕುಲ್ ಬಾಲಾಜಿ ಸೃಜನ್ ಲೋಕೇಶ್ ಮಾಸ್ಟರ್ ಆನಂದ್ ಅನುಶ್ರೀ ಅವರಂತಹ ನಿರೂಪಕರು ಇಂದು ಕನ್ನಡ ಚಿತ್ರರಂಗದಲ್ಲಿ ದಿ ಬೆಸ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ನಿರೂಪಣೆ ಮಾಡುವುದರಲ್ಲಿ ಕೂಡ ಕೌಶಲ್ಯ ತೆಯ ಅವಶ್ಯಕತೆ ಹೆಚ್ಚಾಗಿರುತ್ತದೆ. ಆಯಾಯ ಸಂದರ್ಭಕ್ಕೆ ಅದಕ್ಕೆ ಅನುಗುಣವಾಗಿ ಅಂತಹ ಮಾತುಗಳನ್ನು ನಮ್ಮಲ್ಲಿ ಅದನ್ನು ಇಂಪ್ರೂವ್ ಮಾಡಿಕೊಳ್ಳಬೇಕು.

ಇದೇ ಕಾರಣದ ಹಿನ್ನೆಲೆಯಲ್ಲಿ ಮಂಜು ಪಾವಗಡ ಹಾಗೂ ರಿನೋ ಡಿಸೋಜರವರ ಕಾಂಬಿನೇಷನ್ ಎನ್ನುವುದು ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದ ಸ್ಟೇಜ್ ಮೇಲೆ ವರ್ಕೌಟ್ ಆಗದ ಹಿನ್ನೆಲೆಯಲ್ಲಿ ಇಬ್ಬರನ್ನು ಕಾರ್ಯಕ್ರಮದ ಹೊರಗೆ ಕಳಿಸಲಾಗಿದೆ. ಇನ್ನು ಅವರ ಜಾಗಕ್ಕೆ ಈಗ ನಿರಂಜನ್ ದೇಶಪಾಂಡೆ ಅವರನ್ನು ಕರೆತರಲಾಗಿದೆ. ಈಗಾಗಲೇ ಕಾರ್ಯಕ್ರಮ ಉತ್ತಮ ಜನಾಭಿಪ್ರಾಯವನ್ನು ಪಡೆದುಕೊಳ್ಳುತ್ತಿದ್ದು ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮವನ್ನು ಹಿಂದಿಕ್ಕಿ ರಿಯಾಲಿಟಿಶೋ ಕಾರ್ಯಕ್ರಮಗಳ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆಯೇ ಎಂಬುದನ್ನು ಕಾದುನೋಡಬೇಕಾಗಿದೆ. ಈ ವಿಚಾರದ ಕುರಿತಂತೆ ನಿಮಗೇನನ್ನಿಸುತ್ತದೆ ಎಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.