ಜೈಪುರದ ರಾಜಕುಮಾರಿಯನ್ನು ಮದುವೆಯಾಗುವ ಮುನ್ನ ಶ್ರೀಶಾಂತ್ ಜೊತೆ ಸುತ್ತಾಡಿದ್ದ ಟಾಪ್ 6 ನಟಿಯರು ಯಾರ್ಯಾರು ಗೊತ್ತೇ??

7,245

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಕೇರಳ ಮೂಲದ ಕ್ರಿಕೆಟಿಗ ಆಗಿರುವ ಶ್ರೀಶಾಂತ್ ಅವರ ಕುರಿತಂತೆ ತಿಳಿದಿರುತ್ತದೆ. ಶ್ರೀಶಾಂತ್ ರವರು ಭಾರತೀಯ ಕ್ರಿಕೆಟ್ ತಂಡದ ಒಂದುಕಾಲದ ಅಗ್ರೆಸ್ಸಿವ್ ಬೌಲರ್ ಆಗಿದ್ದರು. ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ನಲ್ಲಿ ಕೂಡ ಭಾಗವಹಿಸಿದ್ದರು. ಆದರೆ 2013 ರಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಹಿನ್ನೆಲೆಯಲ್ಲಿ ಕ್ರಿಕೆಟ್ ನಿಂದ ಬ್ಯಾನ್ ಕೂಡ ಆಗುತ್ತಾರೆ. ನಂತರ ಇವರು ಹಲವಾರು ಸಿನಿಮಾಗಳಲ್ಲಿ ಹಾಗೂ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಕೂಡ ಕಾಣಿಸುತ್ತಾರೆ. ಇನ್ನು ಇವರು ಜೋಧ್ಪುರ್ ಮೂಲದ ರಾಜಮನೆತನದ ಭುವನೇಶ್ವರಿ ಕುಮಾರಿ ಅವರನ್ನು ವಿವಾಹವಾಗುತ್ತಾರೆ. ಇದಕ್ಕೂ ಮುನ್ನ ಆರು ನಟಿಯರನ್ನು ಶ್ರೀಶಾಂತ್ ರವರು ಡೇಟಿಂಗ್ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹಾಗಿದ್ದರೆ ಅವರು ಯಾರು ಎಂಬುದನ್ನು ಮೊದಲು ತಿಳಿದುಕೊಳ್ಳೋಣ ಬನ್ನಿ.

ಶ್ರೇಯ ಶರಣ್; ಶ್ರೀಶಾಂತ್ ಹಾಗೂ ಶ್ರೇಯ ಶರಣ್ ಇಬ್ಬರು ಕೂಡ ಮುಂಬೈನಲ್ಲಿ ನಡೆದಿರುವಂತಹ ಒಂದು ಫ್ಯಾಶನ್ ಶೋ ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಒಟ್ಟಿಗೆ ಡಿನ್ನರ್ ಕೂಡ ಮಾಡಿ ಒಂದೇ ಕಾರಿನಲ್ಲಿ ಹೋಗಿದ್ದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಯಿತು. ಇವರಿಬ್ಬರ ನಡುವೆ ಪರಿಚಯ ಕಿಂತಲೂ ಮಿಗಿಲಾದ ಸಂಬಂಧವಿದೆ ಎಂಬುದಾಗಿ ಮೀಡಿಯಾಗಳಲ್ಲಿ ಪ್ರಸಾರವಾಯಿತು. ಆದರೆ ನಟಿ ಶ್ರೇಯ ಶರಣ ರವರೆ ಮುಂದೆ ಬಂದು ನಮ್ಮಿಬ್ಬರ ನಡುವೆ ಆ ತರಹದ ಯಾವುದೇ ಸಂಬಂಧಗಳಿಲ್ಲ ಎಂಬುದನ್ನು ಖುಲಾಸೆಗೊಳಿಸಿದರು.

ರಿಯಾ ಸೇನ್; ರಿಯಾ ಸೇನ್ ರವರು ಈ ಮೊದಲು ಭಾರತೀಯ ಕ್ರಿಕೆಟಿಗ ಯುವರಾಜ್ ಸಿಂಗ್ ರವರ ಜೊತೆಗೆ ಡೇಟಿಂಗ್ ಮಾಡುತ್ತಿದ್ದರು ಅವರೊಂದಿಗೆ ಬ್ರೇಕಪ್ ಮಾಡಿಕೊಂಡ ನಂತರ ಶ್ರೀಶಾಂತ್ ಅವರ ಜೊತೆಗೆ ಹಲವಾರು ಬಾರಿ ಕಾಣಿಸಿಕೊಂಡಿದ್ದಾರೆ. ಅವರು ಆಡುತ್ತಿದ್ದಾಗ ತಂಡಕ್ಕೆ ಸಪೋರ್ಟ್ ಮಾಡಲು ಕೂಡ ಸ್ಟೇಡಿಯಂಗೆ ಆಗಮಿಸಿದ್ದರು ಎಂಬುದು ಕೂಡ ತಿಳಿದುಬಂದಿದೆ. ಇಬ್ಬರು ಒಂದು ವರ್ಷಗಳ ಕಾಲ ಡೇಟಿಂಗ್ ಮಾಡಿ ಮದುವೆ ಆಗುವ ಹಂತಕ್ಕೆ ಕೂಡ ಹೋಗಿದ್ದರು ಆದರೆ ನಂತರ ಇವರಿಬ್ಬರೂ ಬ್ರೇಕಪ್ ಮಾಡಿಕೊಂಡಿದ್ದರು ಎಂಬುದಾಗಿ ತಿಳಿದುಬಂದಿದೆ.

ಶಝಾನ್ ಪದಮ್ಸೀ; ಇವರಿಬ್ಬರೂ ಕೂಡ 2011 ರ ಮ್ಯಾಚ್ ನಡೆದ ನಂತರ ಡ್ರೈವ್ ಗೆ ಹೋಗಿದ್ದರು. ಹಲವಾರು ಬಾರಿ ಕ್ಯಾಮೆರಾ ಕಣ್ಣಿಗೆ ಕೂಡ ಗುಟ್ಟಾಗಿ ಕಾಣಿಸಿಕೊಂಡ ಕಾರಣದಿಂದಾಗಿ ಗಾಳಿಯಲ್ಲಿ ಇವರ ಸುದ್ದಿ ಬೇರೆ ರೀತಿಯಲ್ಲಿ ಹರಡಲು ಆರಂಭವಾಗುತ್ತದೆ. ಆದರೆ ಅದೇ ಕೂಡಲೇ ಶ್ರೀಶಾಂತ್ ಗಾಳಿಯಲ್ಲಿ ಹರಡಿರುವ ವಿಚಾರವನ್ನು ತಿಳಿ ಗೊಳಿಸುತ್ತಾರೆ. ಅವರನ್ನು ಸ್ವೀಟ್ ಎನ್ನುವುದಾಗಿ ಕರೆದು ಕೇವಲ ನಾವಿಬ್ಬರೂ ಒಳ್ಳೆಯ ಗೆಳೆಯರು ಮಾತ್ರ ಎಂಬುದಾಗಿ ಹೇಳಿಕೊಂಡಿದ್ದಾರೆ.

ಮಿನಿಶ ಲಾಂಬ; ಮಿನಿಶ ಹಾಗೂ ಶ್ರೀಶಾಂತ್ ಇಬ್ಬರು ಕೂಡ ಮಕಾವ್ ನಲ್ಲಿ ನಡೆದಿರುವಂತಹ ಫಿಲಂ ಅವಾರ್ಡ್ ಫಂಕ್ಷನ್ ನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು ಎಂಬ ಸುದ್ದಿ ಇದೆ. ಇದಾದನಂತರ ಕಸಿನೋ ಹೀಗೆ ಹಲವಾರು ಪ್ರದೇಶಗಳಲ್ಲಿ ಒಟ್ಟಾಗಿ ಸುತ್ತಾಡಿದ್ದಾರೆ. ಇವರಿಬ್ಬರೂ ಕಿಸ್ಸಿಂಗ್ ಕೂಡ ಮಾಡಿದ್ದಾರೆ ಎಂಬುದಾಗಿ ಸುದ್ದಿ ಇದೆ. ಒಂದು ವರ್ಷಗಳವರೆಗೆ ಇವರಿಬ್ಬರ ಕುರಿತಂತೆ ಸಾಕಷ್ಟು ಸುದ್ದಿಗಳು ಆಗಾಗ ಹೊರ ಬರುತ್ತಲೇ ಇದ್ದವು.

ಲಕ್ಷ್ಮಿ ರೈ; ಕರ್ನಾಟಕ ಮೂಲದ ದಕ್ಷಿಣ ಭಾರತ ಚಿತ್ರರಂಗದಲ್ಲಿ ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ತನ್ನದೇ ಆದಂತಹ ಮಿಂಚನ್ನು ಹರಿಸಿರುವ ನಟಿ ಲಕ್ಷ್ಮಿ ರೈ ರವರ ಜೊತೆಗೆ ಕೂಡ ಶ್ರೀಶಾಂತ್ ಅವರ ಹೆಸರು ತಳುಕು ಹಾಕಿಕೊಂಡಿದ್ದು ನಂತರ ಶ್ರೀಶಾಂತ ರವರೇ ಈ ವಿಚಾರವನ್ನು ತಳ್ಳಿಹಾಕಿದ್ದಾರೆ.

ಸುರ್ವೀನ್ ಚಾವ್ಲ; ಸಿನಿಮಾ ಸೆಟ್ ಒಂದರಲ್ಲಿ ಸುರ್ವೀನ್ ಹಾಗೂ ಶ್ರೀಶಾಂತ್ ಇಬ್ಬರು ಕೂಡ ಪರಿಚಿತರಾಗಿ ಅವರ ಪರಿಚಯ ಎನ್ನುವುದು ಪ್ರೀತಿಗೆ ತಿರುಗುತ್ತದೆ. ಬೆಂಗಳೂರಿನ ಕ್ಲಬ್ ಹಾಗೂ ಹೋಟೆಲ್ಗಳಲ್ಲಿ ವರ್ಷಗಟ್ಟಲೆ ಇವರಿಬ್ಬರು ಸುತ್ತಾಡುತ್ತಾರೆ ಆದರೆ ಇವರಿಬ್ಬರ ಈ ಟೆಂಪರ್ವರಿ ಪ್ರೀತಿಯನ್ನು ವುದು 2009 ರಲ್ಲಿ ಕೊನೆಗೊಳ್ಳುತ್ತದೆ.

ಇದಾದ ನಂತರ ಶ್ರೀಶಾಂತ್ ರವರು ಭುವನೇಶ್ವರಿ ಕುಮಾರಿ ಎನ್ನುವ ಶೇಖಾವತ್ ಎನ್ನುವ ರಾಜಕುಟುಂಬದ ಹುಡುಗಿಯನ್ನು 2015 ರಲ್ಲಿ ಮದುವೆಯಾಗುತ್ತಾರೆ. ನಿಮ್ಮ ಸದ್ಯಕ್ಕೆ ಶ್ರೀಶಾಂತ್ ರವರು ಎರಡು ಮಕ್ಕಳ ತಂದೆಯಾಗಿ ನೆಮ್ಮದಿಯ ಜೀವನವನ್ನು ಸಾಗಿಸುತ್ತಿದ್ದಾರೆ. ಶ್ರೀಶಾಂತ್ ಅವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.