ಸದಾ ವಿಷ್ಣುವರ್ಧನ್ ರವರ ಕೈಯಲ್ಲಿ ಇರುತ್ತಿದ್ದ ಖಡ್ಗ ಅವರ ಕೈಗೆ ಬಂದಿದ್ದು ಹೇಗೆ ಗೊತ್ತೇ?? ಅವರಿಗೆ ಅದನ್ನು ಕೊಟ್ಟವರು ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪಂಚ ಭಾಷೆಗಳಲ್ಲಿ ಕೂಡ ನಟಿಸಿ ದಂತಹ ನಟರಲ್ಲಿ ಮೊದಲಿಗರಾಗಿ ಸಾಹಸಸಿಂಹ ವಿಷ್ಣುವರ್ಧನ್ ರವರು ಕಾಣಿಸಿಕೊಳ್ಳುತ್ತಾರೆ ಎಂದರೆ ತಪ್ಪಾಗಲಾರದು. ಕನ್ನಡ ಚಿತ್ರರಂಗದಲ್ಲಿ ದೊಡ್ಡಮಟ್ಟದ ಅಭಿಮಾನಿಗಳನ್ನು ಹೊಂದಿರುವ ನಟ ಆಗಿದ್ದರೂ ಕೂಡ ವಿಷ್ಣುವರ್ಧನ್ ರವರು ಸಾಕಷ್ಟು ಸಮಸ್ಯೆಗಳನ್ನು ಕೂಡ ಕನ್ನಡ ಚಿತ್ರರಂಗದಲ್ಲಿ ಅನುಭವಿಸಬೇಕಾಗಿ ಬಂದಿತ್ತು. ಅವರ ಕುರಿತಂತೆ ಕನ್ನಡ ಚಿತ್ರರಂಗದಲ್ಲಿ ಇಲ್ಲಸಲ್ಲದ ಅಪವಾದಗಳನ್ನು ಕೂಡ ಹೊರಿಸಲಾಗುತ್ತಿತ್ತು.
ಕಾರ್ಮಿಕರಿಗೆ ಸಹಾಯ ಆಗಲಿ ಎನ್ನುವ ಕಾರಣಕ್ಕಾಗಿ ಬನ್ನೇರಘಟ್ಟ ರೋಡಿನಲ್ಲಿ ಸಿಲ್ಕ್ ಫ್ಯಾಕ್ಟರಿ ಆರಂಭಿಸಿದರು ಆದರೆ ಅದು ಚೆನ್ನಾಗಿ ನಡೆದಿದ್ದ ಕಾರಣ ಲಾಸ್ ಗೆ ಒಳಗಾಗುತ್ತಾರೆ. ಇದಾದನಂತರ ಸಿನಿಮಾದಿಂದ ಬಂದಂತಹ ಹಣದಿಂದ ಈ ಸಾಲವನ್ನು ತೀರಿಸುತ್ತಾರೆ. ಹಲವಾರು ಸಂದರ್ಭಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ರವರಿಗೆ ಅನ್ಯಾಯವಾಗಿದೆ ಎಂದರೆ ತಪ್ಪಾಗಲಾರದು. ವಿಷ್ಣುವರ್ಧನ್ ರವರ ಸಿನಿಮಾಗಳ ಬಿಡುಗಡೆ ಸಂದರ್ಭದಲ್ಲಿ ಕೂಡ ಕಿಡಿಗೇಡಿಗಳು ಅವರ ಸಿನಿಮಾ ಬಿಡುಗಡೆಗೆ ತೊಡಕಾಗಿ ನಿಂತಿದ್ದರು.

ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಿದ್ದ ವಿಷ್ಣುವರ್ಧನ್ ರವರಿಗೆ ಯಾಕೆ ಹೀಗಾಗುತ್ತಿದೆ ಎಂದು ಅವರಿಗೆ ಕೂಡ ಬೇಸರವಾಗುತ್ತಿತ್ತು ಎನ್ನುವುದನ್ನು ಅವರ ಆಪ್ತರು ಹೇಳುತ್ತಾರೆ. ಇನ್ನು ವಿಷ್ಣುವರ್ಧನ್ ರವರ ಕೈಯಲ್ಲಿರುವ ಖಡ ಎಲ್ಲಿಂದ ಬಂದಿರಬಹುದು ಎನ್ನುವುದಾಗಿ ನಿಮಗೆ ಅನುಮಾನಗಳು ಇರಬಹುದು. ಅದನ್ನು ಕೂಡ ನಿವಾರಿಸುತ್ತೇವೆ ಬನ್ನಿ. ಹೌದು ಗೆಳೆಯರೇ ಸಾಹಸಸಿಂಹ ವಿಷ್ಣುವರ್ಧನ್ ಅವರು ಪಂಜಾಬಿಗೆ ಹೋದ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರನ್ನು ನೋಡಿದ ಒಬ್ಬರು ಸರ್ದಾರ್ಜಿ ನೀನು ಭವಿಷ್ಯದಲ್ಲಿ ಉತ್ತಮವಾಗಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ ಎಂಬುದಾಗಿ ಭವಿಷ್ಯವನ್ನು ನುಡಿದು ಆ ಖಡ್ಗವನ್ನು ವಿಷ್ಣುವರ್ಧನ್ ರವರಿಗೆ ನೀಡುತ್ತಾರೆ. ಅಂದಿನಿಂದ ಕೊನೆಯವರೆಗೂ ಕೂಡ ವಿಷ್ಣುವರ್ಧನರವರ ಕೈಯಲ್ಲಿ ಆ ಖಡ ಶಾಶ್ವತವಾಗಿ ಇತ್ತು. ಇನ್ನು ವಿಷ್ಣುವರ್ಧನ್ ಅವರನ್ನು ನೋಡಿ ಅದೆಷ್ಟೋ ಅಭಿಮಾನಿಗಳು ಈ ಸ್ಟೈಲನ್ನು ಅನುಕರಿಸಿದರು ಎನ್ನುವುದನ್ನು ಕೂಡ ಇಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ.