ತಂದೆ ತೀರಿಕೊಂಡ ಬಳಿಕ ಮೊಬೈಲ್ ಅನ್ನು ಮಗಳಿಗೆ ಕೊಟ್ಟ ತಾಯಿ, ಆದರೆ ಆ ಮೊಬೈಲ್ ನಿಂದ ಇಂದು ಮಗಳ ಪರಿಸ್ಥಿತಿ ಏನಾಗಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಈ ಡಿಜಿಟಲ್ ಯುಗದಲ್ಲಿ ಮಕ್ಕಳು ಎಷ್ಟು ಮಟ್ಟಿಗೆ ಸೂಕ್ಷ್ಮಮತಿ ಗಳಾಗಿದ್ದಾರೆ ಎಂಬುದನ್ನು ಊಹಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಒಂದು ಕಾಲದಲ್ಲಿ ಮಕ್ಕಳಿಗೆ ಏನೇ ಹೇಳಿದರೂ ಕೂಡ ನಾವು ಅದನ್ನು ನಮ್ಮ ಒಳ್ಳೆಯದಕ್ಕಾಗಿ ಹೇಳಿದ್ದಾರೆ ಎಂಬುದಾಗಿ ಅಂದುಕೊಳ್ಳುತ್ತಿದ್ದೆವು. ಆದರೆ ಇಂದಿನ ಮಕ್ಕಳಿಗೆ ಚಿಕ್ಕ ಬೈಗುಳವನ್ನು ಬೈದ್ರು ಕೂಡ ಅವರು ಅದನ್ನು ಅತ್ಯಂತ ಸೂಕ್ಷ್ಮವಾಗಿ ತೆಗೆದುಕೊಳ್ಳುತ್ತಾರೆ ಎನ್ನುವುದು ವಿಪರ್ಯಾಸವಾಗಿದೆ. ಇಂದು ನಾವು ಹೇಳಲು ಹೊರಟಿರುವ ಕಥೆ ಕೂಡ ಇದಕ್ಕೆ ವಿಭಿನ್ನವಾಗಿಲ್ಲ ಎಂದು ಹೇಳಬಹುದಾಗಿದೆ. ನಾವು ಇಂದು ಮಾತನಾಡಲು ಹೊರಟಿರುವುದು 14ವರ್ಷದ ದೇವಿಕಾಳ ಕುರಿತಂತೆ. ತಿರುವನಂತಪುರಂ ನಿವಾಸಿಯಾಗಿರುವ ಈಕೆ ಪ್ರವೀಣ್ ಹಾಗೂ ಗೋಪಿಕಾ ದಂಪತಿಗಳ ಮಗಳಾಗಿದ್ದಾಳೆ.
ಕಳೆದ ವರ್ಷವಷ್ಟೇ ತಂದೆ ಪ್ರವೀಣ್ ಮಹಾಮಾರಿ ಕಾರಣದಿಂದಾಗಿ ಅಕಾಲಿಕವಾಗಿ ಮರಣವನ್ನು ಹೊಂದಿದ್ದಾರೆ. ತಂದೆಯ ಮರಣದ ನಂತರ ದೇವಿಕಾಳ ಕೈಗೆ ತಂದೆಯ ಮೊಬೈಲ್ ಫೋನ್ ಸಿಕ್ಕಿತ್ತು ಹೀಗಾಗಿ ಪ್ರತಿದಿನ ಎಲ್ಲಾ ಸಮಯದಲ್ಲಿ ಕೂಡ ಮೊಬೈಲನ್ನು ಉಪಯೋಗಿಸುತ್ತಿದ್ದಳು. ಇನ್ನು ತಾಯಿ ಗೋಪಿಕಾ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯಲ್ಲಿ ಕೆಲಸದಲ್ಲಿದ್ದರು. ತಂದೆ ಇಲ್ಲದ ಮಗು ಎನ್ನುವ ಕಾರಣಕ್ಕಾಗಿ ತಾಯಿ ತನ್ನ ಮಗಳನ್ನು ಅತ್ಯಂತ ಮುದ್ದಿನಿಂದ ಸಾಕಿದ್ದರು. ಆದರೆ ಮಗಳು ಮಾತ್ರ ಎಷ್ಟೊತ್ತಿಗೆ ನೋಡಿದರೂ ಕೂಡ ಮೊಬೈಲ್ನಲ್ಲಿ ಮುಳುಗಿರುತ್ತಿದ್ದಳು.

ಇದನ್ನು ನೋಡಿದ ತಾಯಿ ಮಗಳಿಗೆ ಸರಿಯಾಗಿ ಬೈದು ಬುದ್ಧಿ ಹೇಳಿ ಅವಳಿಂದ ಮೊಬೈಲನ್ನು ಕಿತ್ತುಕೊಂಡು ಇನ್ನುಮುಂದೆ ನಿನಗೆ ಮೊಬೈಲನ್ನು ನೀಡುವುದಿಲ್ಲ ಎಂಬುದಾಗಿ ಹೇಳಿ ಓದಿಕೋ ಎನ್ನುವುದಾಗಿ ಬುದ್ಧಿವಾದವನ್ನು ಹೇಳಿದ್ದರು. ಆದರೆ ದೇವಿಕಾ ಇದನ್ನು ಸ್ವಲ್ಪ ಸೂಕ್ಷ್ಮವಾಗಿ ತೆಗೆದುಕೊಂಡಿದ್ದಾಳೆ. ಅದೇ ದಿನ ಮಧ್ಯಾಹ್ನ ತನ್ನ ಗೆಳತಿಯ ಮನೆಗೆ ಹೋಗಿ ಇದರ ಕುರಿತಂತೆ ದುಃಖವನ್ನು ಕೊಡುತ್ತಾನೆ ಕೊಂಡಿದ್ದಾಳೆ. ಆದರೆ ಯಾರೂ ಕೂಡ ಈಕೆ ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳುತ್ತಾಳೆ ಎಂಬುದಾಗಿ ಯಾರು ಕೂಡ ಭಾವಿಸಿರಲಿಲ್ಲ. ಶನಿವಾರ ರಾತ್ರಿ 7.30 ರ ಸಂದರ್ಭದಲ್ಲಿ ಮನೆಯಲ್ಲಿಯೇ ಶ’ವವಾಗಿ ದೇವಿಕ ಪತ್ತೆಯಾಗಿದ್ದಾಳೆ. ಚಿಕ್ಕ ಬುದ್ಧಿ ಮಾತಿಗೆ ದೇವಿಕ ಈ ರೀತಿಯ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುತ್ತಾಳೆ ಎಂಬುದಾಗಿ ಅವರ ತಾಯಿ ಕೂಡ ಭಾವಿಸಿರಲು ಸಾಧ್ಯವಿಲ್ಲ. ನಿಜಕ್ಕೂ ಕೂಡ ಇಂದಿನ ಯುಗದ ಮಕ್ಕಳು ಯಾವ ಕಡೆಗೆ ಹೋಗುತ್ತಿದ್ದಾರೆ ಎಂಬುದನ್ನು ನೆನೆಸಿಕೊಂಡರೆ ಭ’ಯವಾಗುತ್ತದೆ.