ಕೊನೆಯ ಪಂದ್ಯ ಬಲಿಷ್ಠ ಗುಜರಾತ್ ವಿರುದ್ಧ, ಆದಕಾರಣ ಪಂಜಾಬ್ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿದೆ ಆರ್ಸಿಬಿ, ಹನ್ನೊಂದರ ಬಳಗ ಹೇಗಿದ್ದರೆ ಗೆಲುವು ಸುಲಭ ಗೊತ್ತೇ?

86

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಚಕ ಹಂತಕ್ಕೆ ಬಂದು ನಿಂತಿದೆ. ಅದೇನೆಂದರೆ ಇನ್ನು ಮುಂದೆ ಆಡುವಂತಹ ಎಲ್ಲಾ ಪಂದ್ಯಗಳನ್ನು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲಲೇಬೇಕಾಗಿದೆ. ಈ ಬಾರಿಯ ಪ್ಲೇಆಫ್ ಹಂತಕ್ಕೆ ತೇರ್ಗಡೆ ಆಗುವಂತಹ ಕಾಂಪಿಟೇಶನ್ ದೊಡ್ಡ ಸ್ಥರದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡುಪ್ಲೆಸಿಸ್ ರವರ ನಾಯಕತ್ವದಲ್ಲಿ ಮೊದಲಾರ್ಧದಲ್ಲಿ ಐಪಿಎಲ್ ನಲ್ಲಿ ಸತತವಾಗಿ ಗೆಲುವುಗಳನ್ನು ದಾಖಲಿಸುವ ಮೂಲಕ ಸುಲಭವಾಗಿ ಪ್ಲೇಆಫ್ ಹಂತಕ್ಕೆ ಮೊದಲ ಎರಡು ಸ್ಥಾನಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತೇರ್ಗಡೆ ಆಗುತ್ತದೆ ಎಂಬುದಾಗಿ ಭಾವಿಸಲಾಗಿತ್ತು.

ಆದರೆ ದ್ವಿತೀಯಾರ್ಧದಲ್ಲಿ ಸತತವಾಗಿ ಮೂರು ಪಂದ್ಯಗಳನ್ನು ಸೋಲುವ ಮೂಲಕ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಿನ್ನಡೆ ಅನುಭವಿಸಿತು. ಆದರೆ ನಂತರ ಮತ್ತೆ ಸತತವಾಗಿ ಇರುವ ಮೂಲಕ ಈಗ ನಾಲ್ಕನೇ ಸ್ಥಾನದಲ್ಲಿ ಮಿಂಚುತ್ತಿದೆ. ಹೌದು ಗೆಳೆಯರೇ ಆಡಿರುವ 12 ಪಂದ್ಯಗಳಲ್ಲಿ ಈಗ ಏಳು ಪಂದ್ಯಗಳನ್ನು ಗೆಲ್ಲುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಯಿಂಟ್ಸ್ ಟೇಬಲ್ ನಲ್ಲಿ ನಾಲ್ಕನೇ ಸ್ಥಾನದಲ್ಲಿ. ಇನ್ನು ತನ್ನ ಮುಂದಿನ ಪಂದ್ಯವನ್ನು 13 ನೇ ತಾರೀಖಿನಂದು ಪಂಜಾಬ್ ತಂಡದ ವಿರುದ್ಧ ಆಡಲಿದೆ. ಆರ್ಸಿಬಿ ತನ್ನ ಐಪಿಎಲ್ ಟೂರ್ನಮೆಂಟನ್ನು ಆರಂಭಮಾಡಿದ್ದು ಕೂಡ ಪಂಜಾಬ್ ವಿರುದ್ಧದ ಸೋಲಿನ ಮೂಲಕ. ಇನ್ನೂ ಉಳಿದಿರುವ ಎರಡು ಪಂದ್ಯಗಳಲ್ಲಿ ಒಂದನ್ನಾದರೂ ಕೂಡ ಆರ್ಸಿಬಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಹೀಗಾಗಿ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಗೆದ್ದರೆ ಪ್ಲೇಆಫ್ ಹಂತಕ್ಕೆ ತೇರ್ಗಡೆಯಾದ ಹಾಗೂ ಆಗುತ್ತದೆ ತನ್ನ ಸೋಲಿನ ಸೇಡನ್ನು ತೀರಿಸಿಕೊಂಡ ಹಾಗೂ ಆಗುತ್ತದೆ. ಇನ್ನು ಪಂಜಾಬ್ ತಂಡದ ವಿರುದ್ಧ ಆರ್ಸಿಬಿಯ ಬೆಸ್ಟ್ ಪ್ಲೇಯಿಂಗ್ 11 ಯಾವುದು ಎಂಬುದನ್ನು ನೋಡೋಣ ಬನ್ನಿ. ಹೌದು ಗೆಳೆಯರೇ ಈಗಾಗಲೇ ಗೆಲುವಿನ ಕಾಂಬಿನೇಷನ್ನಲ್ಲಿ ಮಿಂಚುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಅದೇ ತಂಡವನ್ನು ಆಡಿಸುವುದು ಉತ್ತಮ ಎಂದು ಹೇಳಬಹುದಾಗಿದೆ,

ಆದರೆ ಸಿರಾಜ್ ರವರ ಹೊರಗಿಟ್ಟು ಬೇರೆ ಅವರಿಗೆ ಚಾನ್ಸ್ ನೀಡಿದರು ಉತ್ತಮ ಎಂದು ಹೇಳಲಾಗುತ್ತಿದೆ. ರಜತ್ ಪಾಟಿದಾರ್ ಸೇರಿದಂತೆ ಎಲ್ಲಾ ಹೊಸ ಸೇರ್ಪಡೆಯ ಆಟಗಾರರು ಕೂಡ ಉತ್ತಮವಾಗಿ ಪರ್ಫಾರ್ಮೆನ್ಸ್ ನೀಡುತ್ತಿದ್ದಾರೆ. ಹೀಗಾಗಿ ವಿನ್ನಿಂಗ್ ಕಾಂಬಿನೇಷನ್ ಅನ್ನು ಬದಲಾಯಿಸುವುದು ಬೇಡ. ಲೆಕ್ಕದಲ್ಲಿ ಆರ್ಸಿಬಿ ತಂಡದ ಪ್ಲೇಯಿಂಗ್ 11 ಡುಪ್ಲೆಸಿಸ್ ವಿರಾಟ್ ಕೊಹ್ಲಿ ರಜತ್ ಪಾಟಿದಾರ್ ಗ್ಲೆನ್ ಮ್ಯಾಕ್ಸ್ವೆಲ್ ದಿನೇಶ್ ಕಾರ್ತಿಕ್ ಮಹಿಪಾಲ್ ಲೊಮ್ರೋರ್ ಶಾಬಾಜ್ ಅಹಮದ್ ವನಿಂದು ಹಸರಂಗ ಹರ್ಷಲ್ ಪಟೇಲ್ ಜೋಶ್ ಹೆಝಲ್ ವುಡ್ ಮೊಹಮ್ಮದ್ ಸಿರಾಜ್/ ಸಿದ್ಧಾರ್ಥ್ ಕೌಲ್. ಈ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.