ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರಾ ರವರ ಬದುಕಿನ ಕುರಿತಂತೆ ನಿಮಗೆ ಗೊತ್ತಿರದ ಷಾಕಿಂಗ್ ವಿಚಾರಗಳು ಯಾವ್ಯಾವು ಗೊತ್ತೇ??

38

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎನ್ನುವುದಾಗಿ ನಯನತಾರಾ ರವರನ್ನು ಕರೆಯುತ್ತಾರೆ. ನಯನತಾರಾ ರವರು ಮೂಲತಃ ಬೆಂಗಳೂರಿಗರಾಗಿದ್ದರೂ ಕೂಡ ಅವರ ಸಿನಿಮಾ ಜೀವನದ ಆರಂಭ ಹಾಗೂ ಬೆಳವಣಿಗೆ ಎರಡೂ ಕೂಡ ನಡೆದಿರುವುದು ತಮಿಳುನಾಡು ಹಾಗೂ ತಮಿಳು ಚಿತ್ರರಂಗದಲ್ಲಿಯೇ. ಅವರು ಇಂದಿನ ದಿನಗಳಲ್ಲಿ ಅತ್ಯಂತ ಹೆಚ್ಚು ಡಿಮ್ಯಾಂಡ್ ನಲ್ಲಿರುವ ಹಾಗೂ ಅತ್ಯಂತ ಹೆಚ್ಚು ಸಂಭಾವನೆ ಹೊಂದಿರುವ ನಟಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ನಟಿ ನಯನತಾರ ರವರ ಜನಪ್ರಿಯತೆ ಹಾಗೂ ಯಶಸ್ಸಿನ ಕುರಿತಂತೆ ಪ್ರತಿಯೊಬ್ಬರಿಗೂ ತಿಳಿದಿದೆ ಹಾಗೂ ಅದರ ಕುರಿತಂತೆ ತಿಳಿಯಲು ಆಸಕ್ತಿ ಇದೆ ಆದರೆ ಅವರು ಇಂದು ಈ ಮಟ್ಟಕ್ಕೆ ಬೆಳೆದು ನಿಲ್ಲಲು ಅವರು ಪಟ್ಟಂತಹ ಪರಿಶ್ರಮ ಹಾಗೂ ಕಷ್ಟದ ಕುರಿತಂತೆ ಯಾರಿಗೂ ತಿಳಿದಿಲ್ಲ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ನಯನತಾರ ರವರು ಈಗಾಗಲೇ ಕನ್ನಡ ತಮಿಳು ತೆಲುಗು ಹಾಗೂ. ಮಲಯಾಳಂ ಅಂದರೆ ಪೂರ್ಣ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಬೇಡಿಕೆಯನ್ನು ಹೊಂದಿದ್ದಾರೆ. ಆದರೆ ಇಷ್ಟೊಂದು ಯಶಸ್ವಿ ಜೀವನವನ್ನು ಹೊಂದಿದ್ದರೂ ಕೂಡ ಅವರ ವೈಯಕ್ತಿಕ ಜೀವನ ಎನ್ನುವುದು ಸಾಕಷ್ಟು ಕಷ್ಟ ಸುಖಗಳ ಏರಿಳಿತಗಳಿಂದ ಕೂಡಿದೆ.

ತಮಿಳು ಚಿತ್ರರಂಗದ ಖ್ಯಾತ ನಟಿ ನಿಂಬುರವರು ವಲ್ಲವನ್ ಸಿನಿಮಾದ ಚಿತ್ರೀಕರಣದಲ್ಲಿ ನಟಿ ನಯನತಾರಾ ರವರಿಗೆ ಸಾಕಷ್ಟು ಹತ್ತಿರವಾಗುತ್ತಾರೆ. ಈ ಸಂದರ್ಭದಲ್ಲಿ ಇಬ್ಬರೂ ಕೂಡ ಸಾಕಷ್ಟು ಕಡೆಗಳಲ್ಲಿ ಜೊತೆಯಲ್ಲಿ ಕಾಣಿಸಿಕೊಳ್ಳುವ ಕಾರಣದಿಂದಾಗಿ ಇಡೀ ತಮಿಳು ಚಿತ್ರರಂಗ ಇವರಿಬ್ಬರ ಕುರಿತಂತೆ ತರಹೇವಾರಿ ಮಾತುಗಳನ್ನು ಮಾತನಾಡಲು ಆರಂಭಿಸುತ್ತಾರೆ. ಆದರೆ ಮುಂದೆ ಇವರಿಬ್ಬರೂ ಬೇರೆ ಆಗುತ್ತಾರೆ. ನಂತರ ಇವರಿಬ್ಬರ ಕೆಲವೊಂದು ಫೋಟೋ ಗಳು ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಕೂಡ ಆಗಿದ್ದವು.

ಈ ಘಟನೆಯ ನಂತರ ನಯನತಾರ ರವರ ಹೆಸರು ನಟ ನಿರ್ದೇಶಕ ಹಾಗೂ ಡ್ಯಾನ್ಸ್ ಐಕಾನ್ ಆಗಿರುವ ಪ್ರಭುದೇವ ರವರ ಜೊತೆಗೆ ತಳುಕು ಹಾಕಿಕೊಂಡಿತ್ತು. ಇವರಿಬ್ಬರೂ ತಮ್ಮ ಲಿವಿನ್ ಸಂಬಂಧವನ್ನು ಬಹಿರಂಗವಾಗಿಯೇ ತೋರಿಸಿಕೊಂಡಿದ್ದರು. ಆದರೆ ಈ ಸಂದರ್ಭದಲ್ಲಿ ಪ್ರಭುದೇವ ರವರಿಗೆ ಮದುವೆಯಾಗಿ 15 ವರ್ಷಗಳು ಕಳೆದಿತ್ತು. ಇಬ್ಬರು ಮಕ್ಕಳು ಕೂಡ ಇದ್ದರು. ಈ ಸಂದರ್ಭದಲ್ಲಿ ಪ್ರಭುದೇವ ರವರ ಪತ್ನಿ ಇವರಿಬ್ಬರ ಸಂಬಂಧದ ಕುರಿತಂತೆ ಸಾರ್ವಜನಿಕವಾಗಿ ಸಾಕಷ್ಟು ಗಲಾಟೆ ಗದ್ದಲಗಳನ್ನು ಮಾಡಿದ್ದ ಕಾರಣದಿಂದಾಗಿ ಕೆಲವೇ ದಿನಗಳಲ್ಲಿ ನಟಿ ನಯನತಾರಾ ರವರು ಪ್ರಭುದೇವ ರವರ ಸಂಬಂಧದಿಂದ ಹೊರಗೆ ಬರುತ್ತಾರೆ.

ಈ ಸಂದರ್ಭದಲ್ಲಿ ಸಿನಿಮಾಗಳಲ್ಲಿ ನಟಿಸುವುದನ್ನು ಕೂಡ ನಟಿ ನಯನತಾರಾ ರವರು ನಿಲ್ಲಿಸಿದ್ದರು. ನಂತರ ಹಲವಾರು ವರ್ಷಗಳ ನಂತರ ಕೃಷ್ಣಂ ವಂದೇ ಜಗದ್ಗುರುಂ ಎನ್ನುವ ತೆಲುಗು ಸಿನಿಮಾದಲ್ಲಿ ನಟಿಸುವ ಮೂಲಕ ನಟಿ ನಯನತಾರಾ ರವರು ಮತ್ತೊಮ್ಮೆ ನಟನೆಗೆ ವಾಪಸಾಗಿದ್ದರು. 2009 ರ ಸಂದರ್ಭದಲ್ಲಿ ನಟಿ ನಯನತಾರಾ ರವರು ವಿಶು ಹಬ್ಬದ ಸಲುವಾಗಿ ಕೇರಳದ ಕಲ್ಲೇ ಕುಲಂಗರ ಎನ್ನುವ ದೇವಸ್ಥಾನಕ್ಕೆ ಸಲ್ವರ್ ಸೂಟ್ ಹಾಕಿಕೊಂಡು ಹೋಗಿದ್ದಕ್ಕಾಗಿ ಅವರಿಗೆ ಪ್ರವೇಶದ ಅನುಮತಿಯನ್ನು ದೇವಸ್ಥಾನದ ಆಡಳಿತ ಮಂಡಳಿಯವರು ನಿರಾಕರಿಸಿದ್ದರು ಇದೇ ಕಾರಣಕ್ಕಾಗಿ ನಟಿ ನಯನತಾರಾ ರವರು ಆಡಳಿತ ಮಂಡಳಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದರು.

ಮಾಸು ಎಂಗಿರ ಮಸಿಲಾಮನಿ ಎನ್ನುವ ತಮಿಳು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಸಂದರ್ಭದಲ್ಲಿ ನಯನತಾರ ರವರ ಸಹ ಕಲಾವಿದ ಆಗಿದ್ದ ಪ್ರೇಮ್ ಗಿ ಅಮರನ್ ರವರು ನಯನತಾರಾ ರವರಿಗೆ ಆಂಟಿ ಎಂದು ರೇಗಿಸಿದ್ದಕ್ಕಾಗಿ ಪರಿಣಾಮ ಚೆನ್ನಾಗಿರೋದಿಲ್ಲಾ ಎನ್ನೋದಾಗಿ ವಾರ್ನಿಂಗ್ ಕೊಟ್ಟಿದ್ದರು. 2013 ರ ಸಂದರ್ಭದಲ್ಲಿ ಆರ್ಯ ಹಾಗೂ ನಟಿ ನಯನತಾರಾ ರವರ ಮದುವೆ ಫೋಟೋ ದೊಡ್ಡಮಟ್ಟದಲ್ಲಿ ವೈರಲ್ ಆಗಿದೆ. ನಂತರ ಇದನ್ನು ರಾಜ ರಾಣಿ ಚಿತ್ರದ ಪ್ರಮೋಷನ್ ಫೋಟೋ ಎಂಬುದಾಗಿ ಹೇಳಲಾಗಿತ್ತು. ಇವೆಲ್ಲ ಘಟನೆಗಳು ನಡೆದ ನಂತರ ಈಗ ಸದ್ಯಕ್ಕೆ ನಟಿ ನಯನತಾರಾ ರವರು ನಿರ್ದೇಶಕ ವಿಘ್ನೇಶನ್ ರವರ ಜೊತೆಗೆ ಇದ್ದಾರೆ. ಹಲವಾರು ವರ್ಷಗಳಿಂದ ಜೊತೆಯಾಗಿ ಇರುವ ಇವರು ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ಹರಿದಾಡುತ್ತಿದೆ. ನಟಿ ನಯನತಾರಾ ರವರ ಕುರಿತಂತೆ ನಿಮಗಿರುವ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.