ಅಂದು ರೆಬೆಲ್ ಸ್ಟಾರ್ ಅಂಬರೀಶ್ ಅವರಿಂದ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ದೂರವಾಗಿದ್ದು ಯಾಕೆ ಗೊತ್ತಾ, ಅಂತರ ಕಾಯ್ದುಕೊಂಡದ್ದು ಯಾಕೆ ಗೊತ್ತೇ??

42

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವಾರು ದಿಗ್ಗಜ ನಟರು ಬಂದು ಹೋಗಿದ್ದಾರೆ. ಅವರಲ್ಲಿ ಇಂದು ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟರಲ್ಲಿ ಇಬ್ಬರಾಗಿರುವ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಕಲಿಯುಗದ ಕರ್ಣ ಎಂದು ಬಿರುದಾಂಕಿತ ರೆಬಲ್ ಸ್ಟಾರ್ ಅಂಬರೀಶ್ ಅವರ ಕುರಿತಂತೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕ್ರೇಜಿಸ್ಟಾರ್ ರವಿಚಂದ್ರನ್ ರವರ ತಂದೆಯಾಗಿರುವ ವೀರಸ್ವಾಮಿ ಅವರ ಪ್ರೊಡಕ್ಷನ್ ಹೌಸ್ ನಲ್ಲಿ ಅಂದರೆ ನಾಗರಹಾವು ಚಿತ್ರದ ಮೂಲಕವೇ ರೆಬೆಲ್ ಸ್ಟಾರ್ ಅಂಬರೀಶ್ ರವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು.

ಹೀಗಾಗಿ ಮೊದಲಿನಿಂದಲೂ ಕೂಡ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಅಂಬರೀಶರವರ ನಡುವೆ ಅವಿನಾಭಾವ ಸ್ನೇಹ ಸಂಬಂಧವಿತ್ತು. ರವಿಚಂದ್ರನ್ ರವರನ್ನು ಎಲ್ಲಿ ಕಂಡರೂ ಕೂಡ ಅಂಬರೀಶ್ ರವರು ಒಟ್ಟಿಗೆ ಕೂತು ಮಾತನಾಡಿಸಿ ಊಟ ಮಾಡಿಕೊಂಡು ಬರುತ್ತಿದ್ದರು. ಇಬ್ಬರ ನಡುವೆ ಸ್ನೇಹ ಸಂಬಂಧ ಎನ್ನುವುದು ನಿಜಕ್ಕೂ ಕೂಡ ಸಹೋದರತ್ವದ ಪ್ರತೀಕವೆಂಬಂತೆ ಇತ್ತು ಎಂದರೆ ತಪ್ಪಾಗಲಾರದು. ಇದಕ್ಕಾಗಿಯೇ ಅಂದರೆ ಇಂತಹ ಸಹೋದರತ್ವದ ಸಂಬಂಧವನ್ನು ಪರಸ್ಪರ ಕನ್ನಡ ಚಿತ್ರರಂಗದ ನಟರು ಹೊಂದಿರುವುದಕ್ಕಾಗಿಯೇ ಕನ್ನಡ ಚಿತ್ರರಂಗವನ್ನು ಚಿತ್ರರಂಗ ಎಂದು ಹೇಳುವುದಕ್ಕಿಂತ ಹೆಚ್ಚಾಗಿ ಒಂದು ಕುಟುಂಬ ಎನ್ನುವುದಾಗಿ ಹೇಳಲಾಗುತ್ತಿತ್ತು.

ಆದರೆ ಇಷ್ಟೊಂದು ಚೆನ್ನಾಗಿ ಸಹೋದರರಂತೆ ಇದ್ದಂತಹ ರೆಬೆಲ್ ಸ್ಟಾರ್ ಅಂಬರೀಶ್ ಅವರಿಂದಲೂ ಕೂಡ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಒಮ್ಮೆ ದೂರವನ್ನು ಕಾಯ್ದುಕೊಂಡಿದ್ದರು. ಯಾಕೆ ಇವರಿಬ್ಬರ ನಡುವೆ ಏನಾದರೂ ಮನಸ್ತಾಪ ಮೂಡಿಬಂದಿತ್ತಾ ಎನ್ನುವುದಾಗಿ ನೀವು ಕೇಳಬಹುದು. ಅದಕ್ಕೆ ಕೂಡ ಸರಿಯಾದ ಕಾರಣವಿದೆ ಬನ್ನಿ ನಾವು ನಿಮಗೆ ಹೇಳುತ್ತೇವೆ. ಹೌದು ಗೆಳೆಯರೆ ಕ್ರೇಜಿಸ್ಟಾರ್ ರವಿಚಂದ್ರನ್ ರವರು ರೆಬೆಲ್ ಸ್ಟಾರ್ ಅಂಬರೀಶ್ ರವರಿಂದ ಅಂತರವನ್ನು ಕಾಯ್ದುಕೊಂಡಿದ್ದು ಅವರು ಮಂತ್ರಿಯಾಗಿದ್ದ ಸಂದರ್ಭದಲ್ಲಿ. ಹೌದು ಗೆಳೆಯರೇ ಅಂಬರೀಶ್ ಅವರು ರಾಜಕೀಯ ಕ್ಷೇತ್ರದಲ್ಲಿ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಅವರಿಂದ ದೂರವನ್ನು ಕಾಯ್ದುಕೊಂಡಿದ್ದರು ಕ್ರೇಜಿಸ್ಟಾರ್ ರವಿಚಂದ್ರನ್ ರವರು. ಯಾಕೆಂದರೆ ಕ್ರೇಜಿಸ್ಟಾರ್ ರವಿಚಂದ್ರನ್ ರವರಿಗೆ ರಾಜಕೀಯ ಎಂದರೆ ಆಗಿಬರುವುದಿಲ್ಲ. ಇದೇ ಕಾರಣಕ್ಕಾಗಿಯೇ ಹೊರತು ಬೇರೇನೂ ಇಲ್ಲ. ಇವರಿಬ್ಬರ ನಡುವೆ ಕೊನೆಯವರೆಗೂ ಕೂಡ ಉತ್ತಮವಾದ ಸ್ನೇಹಸಂಬಂಧ ಹಾಗೆಯೇ ಇತ್ತು.