ಬಾಲಿವುಡ್ ನಟಿಯರನ್ನು ಕೂಡ ಹಿಂದಿಕ್ಕುವ ಹಾಗೆ ಕಾಣಿಸಿಕೊಳ್ಳುವ ಟಾಪ್ ಐಪಿಎಲ್ ನಿರೂಪಕಿಯರು ಯಾರ್ಯಾರು ಗೊತ್ತೇ??

54

ನಮಸ್ಕಾರ ಸ್ನೇಹಿತರೇ ಇಡೀ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಯಾವುದು ಎಂದು ಕೇಳಿದರೆ ಖಂಡಿತವಾಗಿ ಯಾವುದೇ ಅನುಮಾನವಿಲ್ಲದೆ ನಮ್ಮ ಭಾರತದ ಐಪಿಎಲ್ ಎಂದು ಹೇಳಬಹುದಾಗಿದೆ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಐಪಿಎಲ್ ನಲ್ಲಿ ಆಡುವ ಕ್ರಿಕೆಟಿಗರ ಕುರಿತಂತೆ ಅಲ್ಲ ಬದಲಾಗಿ ಸಿನಿಮಾ ಹೀರೋಯಿನ್ ಗಿಂತಲೂ ಕೂಡ ಸುಂದರಿಯರಾಗಿರುವ ಕ್ರಿಕೆಟ್ ನಿರೂಪಕಿಯರ ಕುರಿತಂತೆ. ಹಾಗಿದ್ದರೆ ಈ ಸುಂದರ ನಿರೂಪಕಿಯರ ಕುರಿತಂತೆ ನಿಮಗೆ ಇನ್ನಷ್ಟು ಮಾಹಿತಿಯನ್ನು ವಿವರವಾಗಿ ನೀಡುತ್ತೇವೆ ಬನ್ನಿ.

ತಾನ್ಯ ಪುರೋಹಿತ್; ಅನುಷ್ಕಾ ಶರ್ಮಾ ರವರ ಎಂ ಹೆಚ್ 10 ಸಿನಿಮಾದ ಮೂಲಕ ಜನಪ್ರಿಯತೆ ಗಳಿಸಿರುವ ತಾನ್ಯ ಪುರೋಹಿತ್ ರವರು ಈ ಬಾರಿ ಐಪಿಎಲ್ ನಲ್ಲಿ ನಿರೂಪಕಿಯಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಹಲವಾರು ಬಾಲಿವುಡ್ ಹಾಗೂ ಕ್ರಿಕೆಟ್ ಕಾರ್ಯಕ್ರಮಗಳನ್ನು ಈಗಾಗಲೇ ಹೋಸ್ಟ್ ಮಾಡಿರುವಂತಹ ಅನುಭವ ಇವರಿಗಿದೆ. ನೋಡಲು ಯಾವ ಸ್ಟಾರ್ ಹೀರೋಯಿನ್ ಗಿಂತಲೂ ಕಡಿಮೆ ಇಲ್ಲದಂತೆ ಸೌಂದರ್ಯವತಿ ಯಾಗಿದ್ದಾರೆ.

ಮಯಂತಿ ಲ್ಯಾಂಗರ್; ಐಪಿಎಲ್ ಎಂದ ತಕ್ಷಣ ಎಲ್ಲರಿಗೂ ಕೂಡ ನೆನಪಿಗೆ ಬರುವಂತಹ ಏಕೈಕ ಮಹಿಳಾ ಕ್ರಿಕೆಟ್ ನಿರೂಪಕಿ ಎಂದರೆ ಅದು ಖಂಡಿತವಾಗಿ ಮಯಾಂತಿ ಲ್ಯಾಂಗರ್. ಶುಭದಿನ ರವರ ಪತ್ನಿ ಆಗಿದ್ದರೂ ಕೂಡ ಅವರ ಜನಪ್ರಿಯತೆಯು ಪಡೆದುಕೊಂಡಿದ್ದು ಇದೆ ಐಪಿಎಲ್ ನಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುವ ಮೂಲಕ. ಹಲವಾರು ವರ್ಷಗಳನ್ನು ವಿರಾಮದ ನಂತರ ಈಗ ಮತ್ತೊಮ್ಮೆ ಈ ಬಾರಿಯ ಐಪಿಎಲ್ ನಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ನಸ್ಪ್ರೀತ್ ಕೌರ್; ಭಾರತೀಯ ಮೂಲದ ಇವರು ಆಸ್ಟ್ರೇಲಿಯಾದಲ್ಲಿ ಜನಿಸಿ ಬೆಳೆದಂತಹ ಇವರು ನಂತರದ ದಿನಗಳಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ಕ್ರಿಕೆಟ್ ನಿರೂಪಕಿಯಾಗಿ ಈಗ ಕಾಣಿಸಿಕೊಳ್ಳುತ್ತಿದ್ದಾರೆ. ಸಂಜನ ಗಣೇಶನ್; ಪುಣೆಯ ಮೂಲದವರಾಗಿದ್ದ ಇವರು ಮೊದಲಿನಿಂದಲೂ ಕೂಡ ಫುಟ್ಬಾಲ್ ಹಾಗೂ ಕ್ರಿಕೆಟ್ ಪಂದ್ಯಾಟಗಳನ್ನು ಕ್ರೀಡಾ ನಿರೂಪಕಿಯಾಗಿ ನಡೆಸಿಕೊಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಟೆಲಿವಿಷನ್ ನಲ್ಲಿ ಅತ್ಯಂತ ಜನಪ್ರಿಯ ಕ್ರೀಡಾ ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಇವರು ಇತ್ತೀಚೆಗಷ್ಟೇ ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ವೇಗಿಯಾಗಿರುವ ಜಸ್ಪ್ರೀತ್ ಬುಮ್ರಾ ರವರನ್ನು ಮದುವೆಯಾಗಿದ್ದಾರೆ.

ನೇರೋಲಿ ಮೆಡೋಸ್; ಆಸ್ಟ್ರೇಲಿಯ ಮೂಲದ ಕ್ರೀಡಾ ಪತ್ರಕರ್ತೆ ಹಾಗೂ ಕ್ರೀಡಾ ನಿರೂಪಕಿ ಆಗಿರುವ ನೇರೋಲಿ ಮೆಡೋಸ್ ರವರು ಕೇವಲ ಕ್ರಿಕೆಟ್ ಮಾತ್ರವಲ್ಲದೆ ಫುಟ್ಬಾಲ್ ಸೇರಿದಂತೆ ಹಲವಾರು ಕ್ರೀಡೆಗಳು ನಿರೂಪಕಿ ಹಾಗೂ ವಕ್ತಾರೆಯಾಗಿ ಕಾರ್ಯನಿರ್ವಹಿಸಿದ್ದಾರೆ ಇವರಿಗೆ ಕ್ರೀಡಾ ನಿರೂಪಣೆ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಇದೆ ಎಂದು ಹೇಳಬಹುದು.

ಒಟ್ಟಾರೆಯಾಗಿ ಈ ಎಲ್ಲಾ ಪರಿಣಿತ ಕ್ರೀಡಾ ನಿರೂಪಕಿಯರು ಈ ಬಾರಿಯ ಐಪಿಎಲ್ ನಲ್ಲಿ ಆಟದ ವಿವರಣೆ ನೀಡುವ ಮೂಲಕ ಪ್ರೇಕ್ಷಕರಿಗೆ ಇನ್ನಷ್ಟು ಮನರಂಜನೆ ನೀಡುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಕೇವಲ ಐಪಿಎಲ್ ಎಂದರೆ ಕ್ರಿಕೆಟಿಗರಿಗೆ ಮಾತ್ರ ಅಭಿಮಾನಿಗಳು ಹುಟ್ಟಿಕೊಳ್ಳುತ್ತಾರೆ ಎಂಬುದಾಗಿ ಹೇಳುತ್ತಿದ್ದರು. ಆದರೆ ಈ ಮಹಿಳಾ ನಿರೂಪಕಿಯರು ಐಪಿಎಲ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಇವರು ಕೂಡ ಈಗಾಗಲೇ ಮಿಂಚುತ್ತಿದ್ದಾರೆ ಹಾಗೂ ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ನಿಮ್ಮ ನೆಚ್ಚಿನ ಕ್ರೀಡಾ ನಿರೂಪಕಿ ಯಾರು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ. ಒಂದು ವೇಳೆ ಈ ಲೇಖನಿ ನಿಮಗೂ ಕೂಡ ಇಷ್ಟವಾಗಿದ್ದರೆ ತಪ್ಪದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.