ಇನ್ನು ಮದುವೆಯಾಗದೆ ಉಳಿದು ಒಂದು ಮಗುವಿನ ತಂದೆಯಾಗಿರುವ ಕೇನ್ ವಿಲಿಯಂಸನ್ ಪ್ರೇಮಕಥೆ ಬಗ್ಗೆ ನಿಮಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಮಹೇಂದ್ರ ಸಿಂಗ್ ಧೋನಿ ಬಿಟ್ಟರೆ ಶಾಂತತೆ ಹಾಗೂ ಕೂಲ್ ಸ್ವಭಾವಕ್ಕೆ ಹೆಸರಾದವರು ಎಂದರೇ ನ್ಯೂಜಿಲೆಂಡ್ ಮೂಲದ ಕ್ರಿಕೆಟ್ ಆಟಗಾರ ಕೇನ್ ವಿಲಿಯಮ್ಸನ್. ಹೌದು ಗೆಳೆಯರೇ ಅತ್ಯಂತ ಯಶಸ್ವಿ ನಾಯಕರಲ್ಲಿ ಕೂಡ ಇವರು ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಈ ಬಾರಿಯ ಐಪಿಎಲ್ ನಲ್ಲಿ ಕೇನ್ ವಿಲಿಯಂಸನ್ ನಾಯಕತ್ವದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ತುಂಬಾ ಚೆನ್ನಾಗಿ ಪ್ರದರ್ಶನ ನೀಡುತ್ತಿದೆ. ತಂಡದಲ್ಲಿ ಹೊಸಬರೇ ತುಂಬಿಕೊಂಡಿದ್ದರು ಕೂಡ ಇಷ್ಟೊಂದು ಚೆನ್ನಾಗಿ ಪ್ರದರ್ಶನ ನೀಡುತ್ತಿರು ಎಂದರೆ ನಿಜಕ್ಕೂ ಕೂಡ ಅದು ಕೇನ್ ವಿಲಿಯಂಸನ್ ರವರ ನಾಯಕತ್ವದ ಝಲಕ್ ಎಂದು ಎಲ್ಲರೂ ಹೇಳುತ್ತಿದ್ದಾರೆ.
ಸಾಕಷ್ಟು ನಾಚಿಕೆ ಸ್ವಭಾವದವರು ಆಗಿರುವ ವಿಲಿಯಂಸನ್ ರವರು ಗ್ರೌಂಡ್ನಲ್ಲಿ ಶಾಂತಮೂರ್ತಿಯಂತೆ ಕಾಣಿಸಿಕೊಳ್ಳುತ್ತಾರೆ. ಅವರ ಕ್ರಿಕೆಟಿಂಗ್ ಜೀವನದ ಕುರಿತಂತೆ ಬಹುತೇಕ ಎಲ್ಲರಿಗೂ ಕೂಡ ತಿಳಿದಿದೆ. ಆದರೆ ಅವರ ವೈಯಕ್ತಿಕ ಜೀವನದ ಕುರಿತಂತೆ ಹಾಗೂ ಅವರ ಪತ್ನಿಯ ಕುರಿತಂತೆ ಯಾರಿಗೂ ಕೂಡ ತಿಳಿದಿರುವುದು ಕಡಿಮೆಯೇ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಅವರ ಪತ್ನಿ ಕೂಡ ಕೇನ್ ವಿಲಿಯಂಸನ್ ರವರ ಹಾಗೆ ಸಾಕಷ್ಟು ನಾಚಿಕೆ ಸ್ವಭಾವದವರು ಎಂದು ಹೇಳಬಹುದಾಗಿದೆ. ಕೇನ್ ವಿಲಿಯಂಸನ್ ರವರ ಪತ್ನಿ ಹೆಸರು ಸಾರ ಎನ್ನುವುದಾಗಿ.

ಇವರು ವೃತ್ತಿಯಲ್ಲಿ ನರ್ಸ್ ಆಗಿದ್ದಾರೆ. ಆಶ್ಚರ್ಯಕರ ವಿಚಾರವೇನೆಂದರೆ ಗೆಳೆಯರೇ ಇವರಿಬ್ಬರೂ ಇನ್ನೂ ಕೂಡ ಮದುವೆಯಾಗಿಲ್ಲ. ಹೌದು ಗೆಳೆಯರೆ ಕೇನ್ ವಿಲಿಯಂಸನ್ ಹಾಗೂ ಸಾರ ಐದು ವರ್ಷಗಳ ಲಿವಿಂಗ್ ಟುಗೆದರ್ ಸಂಬಂಧದ ನಂತರ ಹೆಣ್ಣುಮಗುವಿಗೆ 2020 ರಲ್ಲಿ ಜನ್ಮವನ್ನು ನೀಡಿದ್ದಾರೆ. ನ್ಯೂಜಿಲೆಂಡ್ ನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಇಬ್ಬರ ಭೇಟಿ ಮೊದಲ ಬಾರಿಗೆ ನಡೆಯುತ್ತದೆ. ಈ ಸಂದರ್ಭದಲ್ಲಿ ಇಬ್ಬರೂ ಕೂಡ ಫೋನ್ ನಂಬರನ್ನು ಪರಸ್ಪರ ಬದಲಾಯಿಸಿಕೊಂಡು ನಂತರ ಪ್ರೇಮ ಸಂಬಂಧಕ್ಕೆ ಇಳಿಯುತ್ತಾರೆ. ಕೇನ್ ವಿಲಿಯಂಸನ್ ರವರ ವೈಯಕ್ತಿಕ ಜೀವನದಲ್ಲಿ ಇಂಟರೆಸ್ಟಿಂಗ್ ಕಹಾನಿಯ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.