ಕಿಂಗ್ ಕೊಹ್ಲಿ ದಾಖಲೆಯನ್ನು ಕುಟ್ಟಿ ಪುಡಿ ಪುಡಿ ಮಾಡುವ ಆಟಗಾರನನ್ನು ಹೆಸರಿಸಿದ ಹರ್ಭಜನ್, ಯಾರಂತೆ ಗೊತ್ತೇ ಆ ಆಟಗಾರ??
ನಮಸ್ಕಾರ ಸ್ನೇಹಿತರೇ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಭಾರತದ ಐಪಿಎಲ್ ಹಲವಾರು ಆಟಗಾರರಿಗೆ ಉತ್ತಮ ಫಾರ್ಮಿಗೆ ಮರಳಲು ವೇದಿಕೆಯಾಗಿರುವುದು ಕೂಡ ಇತಿಹಾಸದಲ್ಲಿ ದಾಖಲೆಯಾಗಿದೆ. ಇಲ್ಲಿ ಹಲವಾರು ಜೀವ ಆಟಗಾರರು ಕೂಡ ಭಾರತ ತಂಡಕ್ಕೆ ಆಯ್ಕೆ ಆಗಿರುವುದು ನಿಮ್ಮ ಕಣ್ಣ ಮುಂದೆ ಇದೆ. ಒಟ್ಟಾರೆಯಾಗಿ ಹೇಳುವುದಾದರೆ ನಮ್ಮ ಐಪಿಎಲ್ ಎನ್ನುವುದು ಪ್ರತಿಭೆಗಳಿಗೆ ಒಂದೊಳ್ಳೆ ಅವಕಾಶವನ್ನು ಕೊಡುವಂತಹ ವೇದಿಕೆಯಾಗಿದೆ ಎಂದರೇ ತಪ್ಪಾಗಲಾರದು. ಇನ್ನು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಒಂದು ಸೀಸನ್ ನಲ್ಲಿ ಅತ್ಯಂತ ಹೆಚ್ಚು ರನ್ ಬಾರಿಸಿರುವ ದಾಖಲೆ ಭಾರತದ ರನ್ ಮಷೀನ್ ಆಗಿರುವ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿದೆ.
ಹೌದು ಗೆಳೆಯರೇ 2016 ರಲ್ಲಿ ವಿರಾಟ್ ಕೊಹ್ಲಿ ರವರು 973 ರನ್ನುಗಳನ್ನು ಬಾರಿಸಿದ್ದರು. 2016 ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿ ರವರ ನಾಯಕತ್ವದಲ್ಲಿ ಫೈನಲ್ ಕೂಡ ತಲುಪಿತ್ತು. ಇನ್ನು ವಿರಾಟ್ ಕೊಹ್ಲಿ ಅವರು ನಿರ್ಮಿಸಿರುವಂತಹ ದಾಖಲೆಯನ್ನು ಮತ್ತೊಬ್ಬ ಆಟಗಾರ ಮುರಿಯಲಿದ್ದಾನೆ ಎನ್ನುವುದಾಗಿ ಮಾಜಿ ಭಾರತೀಯ ಆಟಗಾರ ಹರ್ಭಜನ್ ಸಿಂಗ್ ಅವರು ಹೇಳಿದ್ದಾರೆ. ಹೌದು ಗೆಳೆಯರೇ ಹರ್ಭಜನ್ ಸಿಂಗ್ ರವರು ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿಯುವಂತಹ ಆಟಗಾರ ಎಂದು ಹೆಸರನ್ನು ಸೂಚಿಸಿರುವುದು ಜಾಸ್ ಬಟ್ಲರ್ ಅವರ ಹೆಸರನ್ನು. ಹೌದು ಗೆಳೆಯರೇ ಹರ್ಭಜನ್ ಸಿಂಗ್ ರವರ ಹೇಳಿರುವ ಹೆಸರು ಕೂಡ ನ್ಯಾಯವಾಗಿಯೇ ಇದೆ ಎಂದು ಹೇಳಬಹುದಾಗಿದೆ.

ಯಾಕೆಂದರೆ ಈ ಬಾರಿಯ ಐಪಿಎಲ್ ನಲ್ಲಿ ಅತ್ಯಂತ ಹೆಚ್ಚು ರನ್ ಬಾರಿಸಿರುವ ಆಟಗಾರ ಜಾಸ್ ಬಟ್ಲರ್ ಆಗಿದ್ದಾರೆ. ರಾಜಸ್ತಾನ ರಾಯಲ್ಸ್ ತಂಡದ ಪರವಾಗಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಜಾಸ್ ಬಟ್ಲರ್ ಅವರು ಈಗಾಗಲೇ ತಂಡದ ಪರವಾಗಿ 61.8 ರ ಸರಾಸರಿಯಂತೆ ಬರೋಬ್ಬರಿ 618 ರನ್ನುಗಳನ್ನು ಬಾರಿಸಿದ್ದಾರೆ. ಒಂದು ವೇಳೆ ಇವರು ಫೈನಲ್ ಕೂಡ ಆಡಿದರೆ ಖಂಡಿತವಾಗಿ ವಿರಾಟ್ ಕೊಹ್ಲಿ ರವರ ಒಂದು ಸೀಸನ್ನಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿರುವ ಆಟಗಾರನ ಪಟ್ಟವನ್ನು ಜಾಸ್ ಬಟ್ಲರ್ ಅಲಂಕರಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನುವುದಾಗಿ ಹರ್ಭಜನ್ ಸಿಂಗ್ ರವರು ಜಾಸ್ ಬಟ್ಲರ್ ಅವರ ಪರವಾಗಿ ಬ್ಯಾಟ್ ಬೀಸಿದ್ದಾರೆ. ಹರ್ಭಜನ್ ಸಿಂಗ್ ರವರ ಈ ಹೇಳಿಕೆಯ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.