ಎರಡು ಮಕ್ಕಳ ತಾಯಿ ಟಿಕ್ ಟಾಕ್ ನಲ್ಲಿ ಪ್ರೀತಿ ಮಾಡಿ ಮನೆ ಬಿಟ್ಟು ಬಂದು ಮದುವೆಯಾದಳು, ಎಲ್ಲವೂ ತಿಳಿದು ಮದುವೆಯಾಗಿದ್ದ ಹುಡುಗ ಮಾಡಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಇರುವುದನ್ನು ನಂಬಿಕೊಂಡು ಜನರು ಹೇಗೆ ಮೋಸ ಹೋಗುತ್ತಿದ್ದಾರೆ ಎನ್ನುವುದನ್ನು ನೀವು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ನೋಡಿರುತ್ತೀರಿ. ನಾವು ಇಂದಿನ ಲೇಖನಿಯಲ್ಲಿ ಇದೇ ರೀತಿಯ ವಿಚಾರದ ಕುರಿತಂತೆ ನಿಮಗೆ ಸತ್ಯವನ್ನು ಬಿಚ್ಚಿಡಲು ಹೊರಟಿದ್ದೇವೆ ಇದು ನಡೆದಿರುವುದು ಯಾವುದು ಬೇರೆ ದೇಶದಲ್ಲಿ ಎಲ್ಲಾ ಬದಲಾಗಿ ನಮ್ಮದೇ ರಾಜ್ಯದಲ್ಲಿ. ಹಾಗಿದ್ದರೆ ಇದೇನು ವಿಚಾರ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.
ಹೌದು ಗೆಳೆಯರೇ ರೇಷ್ಮಾ ಆಲಿಯಾಸ್ ಸಿಂಧು ಎನ್ನುವ ಹುಡುಗಿ ಅಪ್ರಾಪ್ತ ವಯಸ್ಸಿನಲ್ಲಿಯೇ ಮದುವೆಯಾಗಿ ಎರಡು ಮಕ್ಕಳ ತಾಯಿಯಾಗಿದ್ದಳು. ಮದುವೆಯಾದ ದಿನದಿಂದಲೂ ಕೂಡ ಗಂಡನ ಕುಡಿತ ಹಾಗೂ ಉಪಟಳದಿಂದಾಗಿ ರೋಸಿ ಹೋಗಿದ್ದಳು. ಹೀಗಾಗಿ ಗಂಡನನ್ನು ಬಿಟ್ಟು ಬೆಂಗಳೂರಿನಲ್ಲಿ ಬೇರೆ ಕಡೆ ವಾಸವಾಗಿದ್ದಳು. ನಂತರ ಟಿಕ್ ಟಾಕ್ ನಲ್ಲಿ ಮುಂಡಗೋಡ ತಾಲೂಕಿನ ರಮೇಶನ್ ವಾತನ ಪರಿಚಯವಾಗಿ ಅವರ ಜೊತೆ ಡುಯೆಟ್ ವಿಡಿಯೋವನ್ನು ಮಾಡುತ್ತಿದ್ದಳು. ಇವರಿಬ್ಬರ ನಡುವಿನ ಪರಿಚಯ ಎನ್ನುವುದು ಸ್ನೇಹದ ಮೂಲಕ ಪ್ರೀತಿಯ ಹಾದಿ ಹಿಡೀತು.

ಈ ಮೊದಲೇ ರೇಷ್ಮಾ ತನಗೆ ಇಬ್ಬರು ಮಕ್ಕಳಿದ್ದಾರೆ ಎಂಬುದಾಗಿ ರಮೇಶ್ ಬಳಿ ಹೇಳಿಕೊಂಡಿದ್ದಳು. ಆದರೂ ಕೂಡ ರಮೇಶ್ ನಿನ್ನನ್ನು ಬಿಟ್ಟು ನನಗೆ ಬದುಕಲು ಸಾಧ್ಯವಿಲ್ಲ ನನಗೆ ಯಾರು ಇಲ್ಲ ನೀನು ನನ್ನ ಜೊತೆಗೆ ಬಂದು ಇದ್ದುಬಿಡು ನಿನಗೆ ನಾನು ಜೀವನವನ್ನು ನೀಡುತ್ತೇನೆ ಎಂಬುದಾಗಿ ಹೇಳುತ್ತಾನೆ. ಅವನ ಮಾತನ್ನು ನಂಬಿ ಆತನ ಬಾಡಿಗೆ ಮನೆಗೆ ಆಕೆ ಬಂದು ಬಿಡುತ್ತಾಳೆ. ಇಲ್ಲಿಂದಲೇ ಆರಂಭವಾಗುವುದು ನಿಜವಾದ ವಿಚಾರ. ಪ್ರೀತಿಯ ಮೋಹ ಮಾಯಕ್ಕೆ ಸಿಲುಕಿ ರೇಷ್ಮಾ ರಮೇಶ್ ಬಳಿ ಬಂದುಬಿಟ್ಟಿದ್ದಳು.
ನಂತರ ಮನೆಯವರನ್ನು ಒಪ್ಪಿಸಿ 2021 ರಲ್ಲಿ ಏಪ್ರಿಲ್ ತಿಂಗಳಲ್ಲಿ ಶಿರಸಿಯಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾದರು. ಮದುವೆಯಾದ ನಂತರ ರೇಷ್ಮಾಳ ಹೆಸರನ್ನು ಸಿಂಧು ಎನ್ನುವುದಾಗಿ ಬದಲಾಯಿಸಲಾಯಿತು. ಮದುವೆಯ ಮೊದಲಿನಲ್ಲಿ ಇಬ್ಬರ ನಡುವೆ ಎಲ್ಲವೂ ಕೂಡ ಚೆನ್ನಾಗಿತ್ತು. ಆದರೆ ಬರ ಬರುತ್ತಿದ್ದಂತೆ ರಮೇಶ್ ಸಿಂಧುಗೆ ಕಿರು’ಕುಳ ನೀಡಲು ಆರಂಭಿಸುತ್ತಾನೆ. ಇದು ದಿನೇದಿನೇ ಹೆಚ್ಚಾದಂತೆ ಒಮ್ಮೆ ಸಿಂಧು ತನ್ನ ಜೀವನವನ್ನು ಮುಗಿಸಿಕೊಳ್ಳಲು ಕೂಡ ಪ್ರಯತ್ನಿಸಿ ಅದರಿಂದ ಪಾರಾಗಿದ್ದಳು ಕೂಡ.
ಇವರಿಬ್ಬರ ಈ ಸಾಂಸಾರಿಕ ಜಗಳವನ್ನು ನೋಡಿದಂತಹ ಮುಂಡಗೋಡಿನ ಪೊಲೀಸ್ ಠಾಣೆ ಯವರು ಕೂಡ ಇವರಿಬ್ಬರನ್ನು ಕರೆಸಿ ಊರ ಮುಖ್ಯಸ್ಥರ ಎದುರಿಗೆ ರಾಜ ಪಂಚಾಯಿತಿಯನ್ನು ಕೂಡ ಮಾಡಿ ಇಬ್ಬರಿಗೂ ಬುದ್ಧಿ ಹೇಳಿ ಜೊತೆಯಾಗಿ ಸುಖ ಶಾಂತಿಯಿಂದ ಸಂಸಾರ ನಡೆಸುವಂತೆ ರಮೇಶ್ ಹಾಗೂ ಸಿಂಧು ಇಬ್ಬರಿಗೂ ಕೂಡ ಬುದ್ಧಿವಾದವನ್ನು ಹೇಳಲಾಯಿತು. ನಂತರ ರಮೇಶ್ ಹಾಗೂ ಸಿಂಧೂ ಇಬ್ಬರು ಕೂಡ ಬೆಂಗಳೂರಿಗೆ ಹೋಗಿ ಸಂಸಾರ ನಡೆಸಿಕೊಂಡಿದ್ದರು. ಆದರೆ ಈಗ ರಮೇಶ್ ಮನೆಯಿಂದ ಸಿಂಧುವನ್ನು ಬಿಟ್ಟು ಓಡಿ ಹೋಗಿದ್ದಾನೆ.
ಹೌದು ಗೆಳೆಯರೆ ಗಂಡ ರಮೇಶನನ್ನು ನಂಬಿಕೊಂಡು ಬಂದಂತಹ ರೇಷ್ಮಾ ಅಲಿಯಾಸ್ ಸಿಂಧು ಈಗ ಗಂಡ ತನ್ನನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ನನ್ನನ್ನು ಈಗ ಒಬ್ಬಂಟಿಯಾಗಿ ಬಿಟ್ಟು ಹೋಗಿದ್ದಾನೆ ಎಂಬುದಾಗಿ ಕೆಆರ್ ಪುರಂ ಪೊಲೀಸ್ ಸ್ಟೇಷನ್ ನಲ್ಲಿ ಆತನ ವಿರುದ್ಧ ದೂರು ದಾಖಲಿಸಿದ್ದಾಳೆ. ಮನೆಯಲ್ಲಿರುವ ಹಣ ಚಿನ್ನಾಭರಣವನ್ನು ಹಾಗೂ ನನ್ನ ಹೆಸರಿನಲ್ಲಿ ಲೋನ್ ಮಾಡಿ ಈಗ ನನ್ನನ್ನು ಒಬ್ಬಳನ್ನೇ ಬಿಟ್ಟು ಓಡಿ ಹೋಗಿದ್ದಾನೆ ಎಂಬುದಾಗಿ ವಿಡಿಯೋ ಮೂಲಕವೂ ಕೂಡ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾಳೆ.

ಈ ಹಿಂದೆ ಗಂಡನ ಹಾಗೂ ಗಂಡನ ಕುಟುಂಬಸ್ಥರ ಕಾರಣದಿಂದಾಗಿ ನಾನು ಜೀವನವನ್ನು ಕಳೆದುಕೊಳ್ಳಲು ಕೂಡ ಹೋಗಿದ್ದೆ ಆದರೆ ಆತನೊಂದಿಗೆ ಜೀವನ ಮಾಡಬೇಕು ಎನ್ನುವ ಕಾರಣಕ್ಕಾಗಿ ಸುಮ್ಮನಿದ್ದೆ. ಈಗ ಆತ ನನ್ನನ್ನು ಬಿಟ್ಟು ಓಡಿ ಹೋಗಿದ್ದಾನೆ ಎಂಬುದಾಗಿ ಕೆಆರ್ ಪುರಂ ಪೊಲೀಸ್ ಸ್ಟೇಷನ್ ನಲ್ಲಿ ದೂರು ನೀಡಿದ್ದು ಎಷ್ಟೇ ಕಷ್ಟ ಆದರೂ ಕೂಡ ನಾನು ಆತನ ಜೊತೆ ಬಾಳುತ್ತೇನೆ ಎಂಬುದಾಗಿ ಪಟ್ಟುಹಿಡಿದು ಕುಳಿತಿದ್ದಾಳೆ. ಪೊಲೀಸ್ ತನಿಖೆಯ ಪ್ರಕಾರ ರಮೇಶ್ ಮತ್ತೊಮ್ಮೆ ತನ್ನ ದೂರಾಗಿರುವ ಮುಂಡಗೋಡಿಗೆ ಬಂದು ಕುಳಿತಿದ್ದಾನೆ ಎಂಬುದಾಗಿ ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.