ಖ್ಯಾತ ನಟ ಸಿಂಬು ರವರ ಜೊತೆಗೆ ಪ್ರೀತಿ ಮಾಡಿಕೊಂಡಿದ್ದ ಟಾಪ್ 5 ನಟಿಯರು ಯಾರ್ಯಾರು ಗೊತ್ತೇ?? ಮದುವೆವರೆಗೂ ಹೋಗಿ ಕೊನೆಗೆ ಯಾರು ಮದುವೆಯಾಗಲಿಲ್ಲ.

2,533

ನಮಸ್ಕಾರ ಸ್ನೇಹಿತರೇ ಸಿಲಂಬರಸನ್ ರವರು ತಮಿಳು ಚಿತ್ರರಂಗದ ಭರವಸೆ ನಟರಾಗಿದ್ದಾರೆ. ಅವರನ್ನು ಎಲ್ಲರೂ ಪ್ರೀತಿಯಿಂದ ಸಿಂಬು ಎನ್ನುವುದಾಗಿ ಕರೆಯುತ್ತಾರೆ. ಇನ್ನು ನಟ ಸಿಂಬು ರವರು ಈಗಾಗಲೇ ಹಲವಾರು ಯಶಸ್ವಿ ಸಿನಿಮಾಗಳನ್ನು ತಮಿಳು ಚಿತ್ರರಂಗದ ನೀಡಿದ್ದಾರೆ. ಅವರು ಕೇವಲ ಸಿನಿಮಾ ವಿಚಾರದಲ್ಲಿ ಮಾತ್ರವಲ್ಲದೆ ಡೇಟಿಂಗ್ ವಿಚಾರದಲ್ಲಿ ಕೂಡ ಸಾಕಷ್ಟು ಸುದ್ದಿಯಾಗಿದ್ದಾರೆ. ನಾವು ಇಂದಿನ ವಿಚಾರದಲ್ಲಿ ಇದುವರೆಗೂ ಸಿಂಬು ರವರು ಜೊತೆಯಾಗಿ ಕಾಣಿಸಿಕೊಂಡಿರುವ ಗರ್ಲ್ಫ್ರೆಂಡ್ಸ್ ಗಳ ಪಟ್ಟಿಯನ್ನು ನಿಮಗೆ ಹೇಳಲು ಹೊರಟಿದ್ದೇವೆ. ತಪದೇ ಲೇಖನಿಯನ್ನು ಕೊನೆವರೆಗೂ ಓದಿ.

ಆಂಡ್ರಿಯಾ ಜೆರೆಮಿಯಾ; ಭಾರತೀಯ ಚಿತ್ರರಂಗದಲ್ಲಿ ನಟಿ ಗಾಯಕಿಯಾಗಿ ಕಾಣಿಸಿಕೊಂಡಿರುವ ಆಂಡ್ರಿಯಾ ತಮಿಳು ಚಿತ್ರರಂಗದಲ್ಲಿ ಕೂಡ ನಟಿಸಿರುವಂತಹ ನಟಿ. ಇತ್ತೀಚಿಗಷ್ಟೇ ವಿಜಯ್ ನಟನೆಯ ಮಾಸ್ಟರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಸಿಂಬು ನಟನೆಯ ಇಂಗ ಎನ್ನ ಸೊಲ್ಲುದ ಎಂಬ ಸಿನಿಮಾದಲ್ಲಿ ಅವರ ಜೊತೆಗೆ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಇವರಿಬ್ಬರ ನಡುವೆ ಪ್ರೇಮ ಪಕ್ಷಿ ಸಂಚಾರವಾಗುತ್ತಿತ್ತು ಎಂಬುದಾಗಿ ಸುದ್ದಿ ಇದೆ. ಆದರೆ ಕೆಲವು ಸಂದರ್ಶನದಲ್ಲಿ ಅವರ ಫೋನ್ ನಂಬರ್ ಕೂಡ ನನ್ನ ಬಳಿ ಇಲ್ಲ ಎಂಬುದಾಗಿ ತಮಾಷೆಯಾಗಿ ಹೇಳಿದ್ದು ಕೂಡ ಇದೆ.

ಹಂಸಿಕ ಮೋಟ್ವಾನಿ; ಹಂಸಿಕ ಹಲಗುರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಒಂದುಕಾಲದಲ್ಲಿ ಟಾಪ್ ನಟಿಯಾಗಿ ಕಾಣಿಸಿಕೊಂಡಂತ ನಟಿ. ಇನ್ನು ಸಿಂಬು ರವರ ಜೊತೆಗೆ ವಾಲು ವೆಟ್ಟೈ ಮನ್ನನ್ ಎನ್ನುವ ಎರಡು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನೂ ಒಂದು ವರ್ಷಗಳ ಕಾಲ ಇದಾದ ನಂತರ ಒಟ್ಟಿಗೆ ಹಲವಾರು ಬಾರಿ ಸಮಾರಂಭಗಳಲ್ಲಿ ಕ್ಯಾಮರ ಕಣ್ಣಿಗೆ ಕಾಣಿಸಿಕೊಳ್ಳುತ್ತಾರೆ. ತಮ್ಮ ಸಂಬಂಧವನ್ನು ಸಾರ್ವಜನಿಕ ಗೊಳಿಸಿದ ನಂತರ ಆರು ತಿಂಗಳ ಅವಧಿಯ ಒಳಗಡೆ ಇವರಿಬ್ಬರು ಬೇರೆಯಾದದ್ದು ಮಾತ್ರ ವಿಷಾದನೀಯ ವಿಚಾರ.

ನಯನತಾರ; ದಕ್ಷಿಣ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿರುವ ನಯನತಾರ ರವರ ಜೊತೆಗೆ ಕೂಡ ಸಿಂಬು ರವರ ಲವ್ವಿಡವ್ವಿ ನಡೆದಿತ್ತು. ಹೌದು ಗೆಳೆಯರೆ ವಲ್ಲವನ್ ಎನ್ನುವ ಸಿನಿಮಾದಲ್ಲಿ ಇವರು ಜೊತೆಯಾಗಿ ನಟಿಸಿದ ನಂತರ ಈ ಪ್ರೀತಿ ಪ್ರಾರಂಭವಾಗಿ ಇವರು ಸಾರ್ವಜನಿಕವಾಗಿ ಘೋಷಿಸಿಕೊಂಡಿದ್ದರು. ಆದರೆ ನಂತರ ಇವರಿಬ್ಬರ ನಡುವೆ ಉದ್ಭವ ವಾದಂತಹ ಸಮಸ್ಯೆ ಕಾರಣದಿಂದಾಗಿ ಬೇರೆ ಆಗುವುದನ್ನು ಕೂಡ ಸಾರ್ವಜನಿಕವಾಗಿಯೇ ಘೋಷಿಸಿಕೊಂಡರು. ಇನ್ನು ನಯನತಾರಾ ಈಗ ವಿಘ್ನೇಶನ್ ಎನ್ನುವ ತಮಿಳು ಚಿತ್ರರಂಗದಲ್ಲಿ ನಿರ್ದೇಶಕರೊಬ್ಬರ ಜೊತೆಯಲ್ಲಿ ಲಿವ್-ಇನ್ ಸಂಬಂಧ ದಲ್ಲಿದ್ದಾರೆ.

ಐಶ್ವರ್ಯ ರಜನಿಕಾಂತ್; ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ರಜನಿಕಾಂತ್ ರವರ ಮಗಳಾಗಿರುವ ಐಶ್ವರ್ಯ ರಜನಿಕಾಂತ್ ಹಾಗೂ ಸಿಂಬು ರವರು ಜೊತೆಯಾಗಿಯೇ ವಾಸಿಸುತ್ತಿದ್ದಾರೆ ಎನ್ನುವುದಾಗಿ ಇಡೀ ತಮಿಳು ಚಿತ್ರರಂಗ ಮಾತನಾಡಿಕೊಳ್ಳಲು ಆರಂಭಿಸಿತ್ತು. ಈ ಸಂದರ್ಭದಲ್ಲಿಯೇ ರಾಜಿ ಮಾಡಿಕೊಳ್ಳಲು ರಜನಿಕಾಂತ್ ಹಲವರು ಸಿಂಬು ರವರನ್ನು ಹುಡುಕಲು ಶುರುಮಾಡಿದಾಗ ಧನುಶ್ ರವರು ತಾನು ಮದುವೆಯಾಗುತ್ತೇನೆ ಎಂದು ಮುಂದೆ ಬಂದು ಐಶ್ವರ್ಯ ರಜನಿಕಾಂತ್ ರವರನ್ನು ಮದುವೆಯಾಗುತ್ತಾರೆ.

ತ್ರಿಷ; ದಕ್ಷಿಣ ಭಾರತ ಚಿತ್ರರಂಗದ ಮತ್ತೊಬ್ಬ ಸ್ಟಾರ್ ನಟಿಯಾಗಿರುವ ತ್ರಿಷಾ ರವರು ಕೂಡ ಈ ಲಿಸ್ಟಿನಲ್ಲಿ ಕಾಣಸಿಗುತ್ತಾರೆ. ವಿನ್ನೈತಂಡಿ ವರುವಾಯ ಎನ್ನುವ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಂದರ್ಭದಲ್ಲಿ ಇವರ ಜೊತೆಯಾಗಿ ಓಡಾಡಿಕೊಂಡಿದ್ದನ್ನೀ ಎಲ್ಲರೂ ಕೂಡ ನೋಡಿ ಇವರಿಬ್ಬರ ನಡುವೆ ಪ್ರೀತಿ ಇದೆ ಎಂಬುದಾಗಿ ಪುಕಾರನ್ನು ಎಬ್ಬಿಸಿದ್ದರು. ಆದರೆ ನಂತರ ನಟಿ ತ್ರಿಷಾ ರವರೆ ಮುಂದೆ ಬಂದು ನಮ್ಮಿಬ್ಬರ ನಡುವೆ ಕೇವಲ ಸ್ನೇಹ ಸಂಬಂಧ ಮಾತ್ರ ಇದೆ ಎಂಬುದಾಗಿ ಸ್ಪಷ್ಟೀಕರಣ ನೀಡಿದ್ದಾರೆ. ಈ 5 ನಟಿಯರ ಹೆಸರು ನಟ ಸಿಂಬು ರವರ ಜೊತೆಗೆ ತಳುಕು ಹಾಕಿಕೊಂಡಿದ್ದು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.