ಅಪ್ಪಿ ತಪ್ಪಿಯೂ ಕೂಡ ಮಹಿಳೆಯರು ಮಲಗುವ ಮುನ್ನ ಮಾಡಬಾರದ ಕೆಲಸಗಳು ಯಾವ್ಯಾವು ಗೊತ್ತೇ? ಮಾಡಿದರೇ ಆರ್ಥಿಕ ಪೆಟ್ಟು ಖಚಿತ.
ನಮಸ್ಕಾರ ಸ್ನೇಹಿತರೇ ನಮ್ಮ ಧರ್ಮದಲ್ಲಿ ಸ್ತ್ರೀಯರಿಗೆ ಅತ್ಯಂತ ಪವಿತ್ರವಾದಂತಹ ಸ್ಥಾನವನ್ನು ನೀಡಲಾಗುತ್ತದೆ. ಮಹಿಳೆಯನ್ನು ಮನೆಯ ಮಹಾಲಕ್ಷ್ಮಿ ಎಂಬುದಾಗಿ ಕೂಡ ಕರೆಯಲಾಗುತ್ತದೆ. ಆದರೆ ಮಹಿಳೆಯ ಆದವಳು ಕೆಲವೊಂದು ವಿಚಾರಗಳನ್ನು ರಾತ್ರಿ ಮಲಗುವ ಮುನ್ನ ಮಾಡಿದರೆ ಕಂಡಿತವಾಗಿಯೂ ಮನೆಗೆ ಆರ್ಥಿಕ ಅದೋಗತಿ ಬರುತ್ತದೆ. ಹಾಗಿದ್ದರೆ ಯಾವೆಲ್ಲ ಕೆಲಸಗಳನ್ನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಮೊದಲನೇದಾಗಿ ಮಲಗುವ ಮುನ್ನ ರಾತ್ರಿ ಸಂದರ್ಭದಲ್ಲಿ ಯಾರಿಗೂ ಕೂಡ ಹಾಲು ಅಥವಾ ಮೊಸರನ್ನು ದಾನ ನೀಡಬಾರದು. ಚಂದ್ರನ ಪ್ರಭಾವದಿಂದಾಗಿ ಆರ್ಥಿಕತೆಯಲ್ಲಿ ಕುಂದುಕೊರತೆ ಉಂಟಾಗುವ ಸಾಧ್ಯತೆ ಇರುತ್ತದೆ. ಎರಡನೇದಾಗಿ ರಾತ್ರಿ ಊಟ ಮುಗಿದ ನಂತರ ಯಾವತ್ತೂ ಕೂಡ ಎಂಜಲು ಪಾತ್ರಗಳನ್ನು ಹಾಗೆ ಇಡಬಾರದು. ಎಲ್ಲವನ್ನು ಶುಚಿಯಾಗಿ ಇಡಬೇಕು ಇಲ್ಲದಿದ್ದರೆ ನಕರಾತ್ಮಕ ಶಕ್ತಿಗಳು ಓಡಾಟ ಮಾಡುತ್ತದೆ. ಮೂರನೇದಾಗಿ ಪ್ರತಿದಿನ ಸಂಜೆ ಮನೆಯ ಮುಂದೆ ಇರುವಂತಹ ತುಳಸಿ ಕಟ್ಟೆಯ ಮುಂದೆ ತುಪ್ಪದ ದೀಪವನ್ನು ಹಚ್ಚಿಡಬೇಕು ಇದರಿಂದಾಗಿ ಮನೆಯಲ್ಲಿ ಆರೋಗ್ಯ ಸ್ಥಿತಿ ಎಲ್ಲರಲ್ಲೂ ಸರಿಯಾಗಿರುತ್ತದೆ. ನಾಲ್ಕನೆಯದಾಗಿ ಪ್ರಮುಖವಾಗಿ ಮಹಿಳೆಯರು ಮಲಗುವಾಗ ತಮ್ಮ ಕೂದಲನ್ನು ಹರಿ ಬಿಡಬಾರದು ಇದರಿಂದಾಗಿ ಲಕ್ಷ್ಮಿ ಮಾತೆಗೆ ಕೋಪ ಬರುತ್ತದೆ ಎಂಬುದಾಗಿ ಪುರಾಣಗಳಲ್ಲಿ ಉಲ್ಲೇಖವಿದೆ.

5ನೇ ದಾಗಿ ಮಲಗುವ ಮುನ್ನ ಪೊರಕೆಯನ್ನು ಮನೆಯ ದಕ್ಷಿಣ ಹಾಗೂ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಇಡಬೇಕು ಇದರಿಂದಾಗಿ ಮನೆಯಲ್ಲಿ ಸಮೃದ್ಧಿಯನ್ನು ವುದು ತುಂಬಿ ತುಳುಕುತ್ತದೆ. 6ನೇ ದಾಗಿ ಮನೆಯಲ್ಲಿ ಯಾವತ್ತೂ ಕೂಡ ಅದರಲ್ಲೂ ಅಡುಗೆಮನೆಯಲ್ಲಿ ಎಂದಿಗೂ ಬಕೆಟ್ ಅನ್ನು ಖಾಲಿ ಇಡಬಾರದು ಬದಲಾಗಿ ಅದನ್ನು ತುಂಬಿರಬೇಕು. ಇಲ್ಲದಿದ್ದರೆ ಮನೆಯಲ್ಲಿ ನಕರಾತ್ಮಕ ಶಕ್ತಿಗಳ ಜೊತೆಗೆ ಅಪೂರ್ಣತೆ ಕಂಡುಬರುತ್ತದೆ. ಈ ಎಲ್ಲಾ ವಿಚಾರಗಳನ್ನು ಕೂಡ ಮಹಿಳೆಯರು ಪಾಲಿಸುವುದರಿಂದಾಗಿ ಮನೆಯಲ್ಲಿ ಆರ್ಥಿಕತೆ ಜೊತೆಗೆ ಸಮೃದ್ಧಿ ತನವು ಕೂಡ ತುಂಬಿತುಳುಕುತ್ತಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.