ಮದುವೆಯಾಗುವುದಕ್ಕಿಂತ ಮುಂಚೆ ವಿರಾಟ್ ಕೊಹ್ಲಿ ಡೇಟಿಂಗ್ ಮಾಡುತ್ತಿದ್ದ ನಟಿ ಯಾರು ಗೊತ್ತೆ?? ಪ್ರೀತಿಯಲ್ಲಿ ಬಿದ್ದಿದ್ದ ಕೊಹ್ಲಿ ಯಾರ ಜೊತೆ ಗೊತ್ತೇ??

712

ನಮಸ್ಕಾರ ಸ್ನೇಹಿತರೇ ವಿರಾಟ್ ಕೊಹ್ಲಿ ರವರನ್ನು ಇಡೀ ವಿಶ್ವದಲ್ಲಿ ಅತ್ಯಂತ ಸಾರ್ವಕಾಲಿಕ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರನ್ನಾಗಿ ಗುರುತಿಸಲಾಗುತ್ತದೆ. ಅದರಲ್ಲೂ ಭಾರತೀಯ ಕ್ರಿಕೆಟ್ ಕೇತ್ರದಲ್ಲಿ ಅವರನ್ನು ಕಿಂಗ್ ಎನ್ನುವುದಾಗಿ ಎಲ್ಲರೂ ಕರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಅವರು ಕಳಪೆ ಫಾರ್ಮ್ ನಲ್ಲಿ ಇರಬಹುದು ಆದರೆ ಅವರ ವ್ಯಾಲ್ಯೂ ಎಂದಿಗೂ ಕೂಡ ಕಡಿಮೆ ಆಗುವುದಿಲ್ಲ. ವಿರಾಟ್ ಕೊಹ್ಲಿ ರವರು ಭಾರತೀಯ ಕ್ರೀಡಾ ಕ್ಷೇತ್ರದ ಅತ್ಯಂತ ಶ್ರೀಮಂತ ಕ್ರೀಡಾಪಟು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತ ತಂಡವನ್ನು ಹಾಗೂ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನಾಯಕನಾಗಿ ಮುನ್ನಡೆಸಿದ ಶ್ರೇಯ ಕೂಡ ವಿರಾಟ್ ಕೊಹ್ಲಿ ರವರಿಗೆ ಸಲ್ಲುತ್ತದೆ.

ಸದ್ಯಕ್ಕೆ ಅನುಷ್ಕಾ ಶರ್ಮಾ ರವರನ್ನು ಮದುವೆಯಾಗಿ ವಮಿಕಾ ಎನ್ನುವ ಮಗಳೊಂದಿಗೆ ನೆಮ್ಮದಿಯಿಂದ ಜೀವನವನ್ನು ಸಾಗಿಸುತ್ತಿದ್ದಾರೆ. ಇದು ನಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಸೆಲೆಬ್ರಿಟಿಗಳು ಎಂದ ಮೇಲೆ ಅವರ ಹಳೆಯ ವಿಚಾರಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹೊರಬರುತ್ತವೆ. ಈ ರೀತಿ ಹೊರ ಬಂದಾಗಲೆಲ್ಲ ಅದರ ಕುರಿತಂತೆ ದೊಡ್ಡ ಮಟ್ಟದಲ್ಲಿ ಚರ್ಚೆ ಹಾಗೂ ಆ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತದೆ.

ವಿರಾಟ್ ಕೊಹ್ಲಿ ಅವರ ವೈಯಕ್ತಿಕ ಜೀವನದ ಕುರಿತಂತೆ ಒಂದು ವಿಚಾರ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದ ಚರ್ಚೆಗೊಳಗಾಗುತ್ತಿದೆ. ಹೌದು ಗೆಳೆಯರೇ ವಿರಾಟ್ ಕೊಹ್ಲಿ ರವರು ಅನುಷ್ಕ ಶರ್ಮ ರವರನ್ನು ಮದುವೆಯಾಗುವುದಕ್ಕಿಂತ ಮುಂಚೆ ಮತ್ತೊಬ್ಬ ಹುಡುಗಿಯ ಜೊತೆಗೆ ಪ್ರೀತಿಯಲ್ಲಿ ಇದ್ದರು. ಹೌದು ಗೆಳೆಯ ಆ ನಟಿಯ ಹೆಸರು ಇಸಬೆಲ್ಲ ಎನ್ನುವುದಾಗಿ. ನಟಿ ಹಾಗೂ ಮಾಡೆಲ್ ಇಸಬೆಲ್ಲ ರವರ ಜೊತೆಗೆ ಹಲವಾರು ವರ್ಷಗಳ ಕಾಲ ವಿರಾಟ್ ಕೊಹ್ಲಿ ರವರು ಪ್ರೀತಿಯಲ್ಲಿ ಇದ್ದರು. ನಂತರ ಇವರಿಬ್ಬರ ನಡುವೆ ಮೂಡಿಬಂದ ವೈಮನಸ್ಸಿನಿಂದ ಇಬ್ಬರೂ ಕೂಡ ಬೇರೆಯಾಗುತ್ತಾರೆ. ನಂತರ ಅನುಷ್ಕಾ ಶರ್ಮಾ ರವರ ಪ್ರೀತಿಯಲ್ಲಿ ಬಿದ್ದ ವಿರಾಟ್ ಕೊಹ್ಲಿ ರವರು 2018 ರಲ್ಲಿ ಮದುವೆಯಾಗುತ್ತಾರೆ. ಇಂದು ಅವರಿಬ್ಬರು ಬೆಸ್ಟ್ ಜೋಡಿಗಳಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.