ಮೊದಲ ಬಾರಿಗೆ ತಮ್ಮ ಮಗುವಿನ ಕುರಿತು ಷಾಕಿಂಗ್ ವಿಚಾರ ತಿಳಿಸಿದ ಪ್ರಿಯಾಂಕಾ, ಜಗತ್ತೇ ಶಾಕ್ ಆದರೂ ನಿಜಕ್ಕೂ ನೀವು ಗ್ರೇಟ್ ಅಂದಿದ್ದು ಯಾಕೆ ಗೊತ್ತೇ??

48

ನಮಸ್ಕಾರ ಸ್ನೇಹಿತರೇ ಪ್ರಿಯಾಂಕ ಚೋಪ್ರಾ ಅವರು ಈಗಾಗಲೇ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಹಾಲಿವುಡ್ನಲ್ಲಿ ಕೂಡ ತಮ್ಮದೇ ಆದಂತಹ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವಂತಹ ಇಂಟರ್ನ್ಯಾಷನಲ್ ನಟಿ ಎಂದರೆ ತಪ್ಪಾಗಲಾರದು. ಇನ್ನು ಅವರು ತಮಗಿಂತ ಹತ್ತು ವರ್ಷ ಚಿಕ್ಕವರಾಗಿರುವ ಅಮೆರಿಕದ ಪಾಪ್ ಗಾಯಕ ಹಾಗೂ ನಟ ಆಗಿರುವ ನಿಕ್ ಜೋನಸ್ ಅವರನ್ನು ಮದುವೆಯಾಗಿದ್ದಾರೆ.

ಆದರೆ ಇವರ ಪ್ರೀತಿಗೆ ವಯಸ್ಸಿನ ಅಡ್ಡಿ ಇಲ್ಲ ಎನ್ನುವಂತೆ ಹಲವು ಸಮಯಗಳಿಂದ ಸಂತೋಷವಾಗಿ ಸಂಸಾರವನ್ನು ನಡೆಸಿಕೊಂಡು ಬಂದಿದ್ದಾರೆ. ನಿಕ್ ಜೋನಸ್ ಕೂಡ ಭಾರತೀಯ ಸಂಸ್ಕೃತಿಗೆ ಒಗ್ಗಿಕೊಂಡಂತೆ ಕಾಣುತ್ತಿದ್ದಾರೆ. ಇನ್ನು ಈ ವರ್ಷದ ಪ್ರಾರಂಭದಲ್ಲಿ ಪ್ರಿಯಾಂಕ ಚೋಪ್ರಾ ಹಾಗೂ ಜೋನಸ್ ಇಬ್ಬರು ಕೂಡ ಬಾಡಿಗೆ ತಾಯ್ತನದ ಮೂಲಕ ಹೆಣ್ಣುಮಗುವನ್ನು ಹೊಂದಿರುವುದಾಗಿ ಸಂತೋಷದಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ಸಂತೋಷದ ವಿಚಾರವನ್ನು ಹಂಚಿಕೊಂಡಿದ್ದರು. ಆದರೆ ಎಲ್ಲಿಯೂ ಕೂಡ ಮಗುವಿನ ಫೋಟೋವನ್ನು ಆಗಲಿ ಅಥವ ಮಗುವನ್ನಾಗಲಿ ತೋರಿಸಲು ಹೋಗಲಿಲ್ಲ. ಆದರೆ ನಿನ್ನೆ ತಾಯಂದಿರ ದಿನದ ವಿಶೇಷದ ಹಿನ್ನೆಲೆಯಲ್ಲಿ ತಮ್ಮ ಮಗಳಾಗಿರುವ ಮಾಲ್ತಿ ಮೇರಿ ಚೋಪ್ರಾ ಜನಸ್ ರವರ ಫೋಟೋವನ್ನು ರಿವಿಲ್ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಕೆಲವೊಂದು ಗೊತ್ತಿಲ್ಲದೇ ಇರುವ ವಿಚಾರವನ್ನು ಕೂಡ ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ಹೌದು ಗೆಳೆಯರೇ ಅದೇನೆಂದರೆ ಮಗು ಅವಧಿಗೂ ಮುನ್ನ ಎಂದರೆ ಆರು ತಿಂಗಳಿಗೆ ಜನಿಸಿತ್ತು ಈ ಕಾರಣದಿಂದಾಗಿಯೇ ಹಲವಾರು ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗಿ ಬಂತು. ಕೇವಲ ಇಷ್ಟು ಮಾತ್ರವಲ್ಲದೆ ಮಗು 100 ದಿನಕ್ಕೂ ಅಧಿಕ ಕಾಲ ಐಸಿಯುನಲ್ಲಿ ಇರಬೇಕಾಗಿ ಬಂತು. ಇತ್ತೀಚಿಗಷ್ಟೇ ಮಗುವನ್ನು ಡಿಸ್ಚಾರ್ಜ್ ಮಾಡಿಸಿಕೊಂಡು ಬಂದಿದ್ದಾರೆ. ಇದನ್ನು ಕೂಡ ಪ್ರಿಯಾಂಕ ಚೋಪ್ರಾ ಫೋಟೋ ಹಂಚಿಕೊಳ್ಳುವ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಕೊನೆಗೂ ಕೂಡ ಮಗು ಆರೋಗ್ಯಯುತವಾಗಿ ಮರಳಿ ಬಂದಿರುವುದು ನಿಜಕ್ಕೂ ಕೂಡ ಎಲ್ಲರಿಗೂ ಖುಷಿ ತಂದಿದೆ.