ಯಶಸ್ವಿ ಚಿತ್ರಗಳ ಮೂಲಕ ಭರ್ಜರಿ ಯಶಸ್ಸು ಕಾಣುತ್ತಿರುವ ಸಮಯದಲ್ಲಿ ಕನ್ನಡತಿ ಕೃತಿ ಶೆಟ್ಟಿ ರವರಿಗೆ ಶಾಕ್ ಮೇಲೆ ಶಾಕ್. ಮುಗಿಯಿತೇ ಇವರ ಹವಾ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ತೆಲುಗು ಚಿತ್ರರಂಗದಲ್ಲಿ ಕನ್ನಡಿಗರ ಹವಾ ಜೋರಾಗಿದೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯ ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗ್ಡೆ ನಂತರ ಈಗ ಕೃತಿ ಶೆಟ್ಟಿ ಅವರ ಬೇಡಿಕೆಯನ್ನು ತೆಲುಗು ಚಿತ್ರರಂಗದಲ್ಲಿ ಜೋರಾಗಿದೆ. ಹೌದು ಗೆಳೆಯರೇ ಕರಾವಳಿ ಮೂಲದವರಾಗಿರುವ ಕೃತಿ ಶೆಟ್ಟಿಯವರು ಉಪ್ಪೇನ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಮೊದಲ ಚಿತ್ರದ ಮೂಲಕವೇ ತೆಲುಗು ಮಂದಿಯ ಮನೆಮಾತಾಗಿದ್ದರು ಕೃತಿ ಶೆಟ್ಟಿ ರವರು. ಮೊದಲ ಚಿತ್ರದಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿ ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿದ್ದರು.
ಇನ್ನು ಈ ಚಿತ್ರದ ನಂತರ ಕೃತಿ ಶೆಟ್ಟಿ ರವರು ನಾನಿ ರವರ ಜೊತೆಗೆ ಶ್ಯಾಮ ಸಿಂಗರಾಯ ಸಿನಿಮಾ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಸತತವಾಗಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಒಂದೊಂದೇ ಸಿನಿಮಾಗಳು ಕೃತಿ ಶೆಟ್ಟಿಯವರ ಕೈಸೇರುತ್ತಿದೆ. ಇನ್ನು ತೆಲುಗು ಚಿತ್ರರಂಗದಲ್ಲಿ ನಟ ಆಗಿರುವ ಬಾಲಯ್ಯ ರವರ ಸಿನಿಮಾವನ್ನು ಕೂಡ ಕೃತಿ ಶೆಟ್ಟಿ ರವರು ರಿಜೆಕ್ಟ್ ಮಾಡುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಇದಕ್ಕೆ ಅವರು ವಯಸ್ಸಿನ ಅಂತರ ಸಾಕಷ್ಟು ದೊಡ್ಡ ಮಟ್ಟದಲ್ಲಿ ಇರುವುದರಿಂದ ಸರಿಯಾಗುವುದಿಲ್ಲ ಎನ್ನುವುದಾಗಿ ಕಾರಣವನ್ನು ನೀಡಿದ್ದರು. ತಮ್ಮ ಮ್ಯಾನೇಜರ್ಗೆ ಸ್ಟಾರ್ ನಟರ ಸಿನಿಮಾಗಳ ಅವಕಾಶವನ್ನು ಕಂಡು ಹುಡುಕುವ ಕೆಲಸವನ್ನು ನೀಡಿದ್ದಾರೆ.

ಆದರೆ ಕೇಳಿ ಬಂದಿರುವ ಸುದ್ದಿಯ ಪ್ರಕಾರ ಬಾಲಿವುಡ್ ಚಿತ್ರರಂಗದ ಸ್ಟಾರ್ ನಟರು ಕೃತಿ ಶೆಟ್ಟಿ ಅವರನ್ನು ತಮ್ಮ ಸಿನಿಮಾಗಳಿಗೆ ಆಯ್ಕೆ ಮಾಡುತ್ತಿಲ್ಲವಂತೆ. ಹೌದು ಗೆಳೆಯರೇ ಅದಕ್ಕೆ ಕಾರಣವನ್ನು ಕೂಡ ನೀಡಿದ್ದಾರೆ. ಕೃತಿ ಶೆಟ್ಟಿಯವರು ಪೂಜಾ ಹೆಗ್ಡೆ ಅವರಂತೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿಲ್ಲ. ಅಥವಾ ಕೀರ್ತಿ ಸುರೇಶ ರವರ ಹಾಗೆ ಅದ್ಭುತ ನಟನೆಯನ್ನು ಹೊಂದಿರುವ ನಟಿ ಕೂಡ ಅಲ್ಲ. ಅಥವಾ ಸಮಂತ ಹಾಗೂ ರಶ್ಮಿಕ ಮಂದಣ್ಣ ನವರಂತೆ ಇವೆರಡರ ಸಮ್ಮಿಶ್ರಣವನ್ನು ಹೊಂದಿರುವಂತಹ ನಟಿ ಕೂಡ ಅಲ್ಲ. ಹೀಗಾಗಿಯೇ ಸ್ಟಾರ್ ನಟರ ಕೃತಿ ಶೆಟ್ಟಿಯವರನ್ನು ಸಿನಿಮಾಗಳಲ್ಲಿ ಹಾಕಿಕೊಳ್ಳಲು ರಿಜೆಕ್ಟ್ ಮಾಡುತ್ತಿದ್ದಾರೆ ಎಂಬುದಾಗಿ ಕೇಳಿಬಂದಿದೆ. ಹೀಗೆಂದ ಮಾತ್ರಕ್ಕೆ ಕೃತಿ ಶೆಟ್ಟಿ ಅವರ ಬಳಿ ಸಿನಿಮಾಗಳಿಲ್ಲ ಎಂದಲ್ಲ. ಈಗ ಹಲವಾರು ಸಿನಿಮಾಗಳಿಗೆ ಸಹಿ ಹಾಕಿದ್ದು ಕೇವಲ 18 ವರ್ಷ ವಯಸ್ಸಿನಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ನಟಿಯಾಗಿ ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ಕೂಡ ಎಲ್ಲರೂ ಹೆಮ್ಮೆಪಡಬೇಕಾದ ವಿಚಾರ.