ತನ್ನ ಸ್ಥಾನ ಬದಲಾವಣೆ ಮಾಡುತ್ತಿರುವ ರಾಹು, ಈ ಸ್ಥಾನಪಲ್ಲಟದಿಂದ ಒಂದೂವರೆ ವರ್ಷ, ಅದೃಷ್ಟವೋ ಅದೃಷ್ಟ. ಯಾವ್ಯಾವ ರಾಶಿಗಳಿಗೆ ಗೊತ್ತೇ?
ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳ ರಾಶಿ ಬದಲಾವಣೆಗಳಿಂದಾಗಿ ಸಾಕಷ್ಟು ಪರಿಣಾಮಗಳು ಕೂಡ ಉಂಟಾಗುತ್ತದೆ. ಆಯಾಯ ಗ್ರಹಗಳ ರಾಶಿಗಳ ಸಂಬಂಧಿತ ಜನರು ಈ ಬದಲಾವಣೆಗಳಿಂದಾಗಿ ಸಾಕಷ್ಟು ಒಳ್ಳೆಯ ಹಾಗೂ ಕೆಟ್ಟ ಪರಿಣಾಮಗಳನ್ನು ಕೂಡ ಪಡೆದುಕೊಳ್ಳುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿಗ್ರಹದ ನಂತರ ಅತ್ಯಂತ ನಿಧಾನಗತಿಯಲ್ಲಿ ಚಲಿಸುವ ಗ್ರಹಗಳೆಂದರೆ ಅದು ರಾಹು ಹಾಗೂ ಕೇತು. ರಾಹು ಹಾಗೂ ಕೇತು ಗ್ರಹಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸರಿಸಲು ಬರೋಬ್ಬರಿ ಒಂದೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತವೆ.

ಇದಕ್ಕಿಂತ ಹೆಚ್ಚಾಗಿ ರಾಶಿಗಳ ವಿಶೇಷತೆ ಏನೆಂದರೆ ಅವುಗಳು ಹಿಮ್ಮುಖವಾಗಿ ಚಲಿಸುತ್ತವೆ. ರಾಹು ಹಾಗೂ ಕೇತುಗಳು ಒಬ್ಬರ ಮೇಲೆ ಕೆಟ್ಟ ಪರಿಣಾಮವನ್ನು ಬೀರಲು ಪ್ರಾರಂಭಿಸಿದ ಅತ್ಯಂತ ಕೆಟ್ಟ ಪರಿಣಾಮವನ್ನು ಬೀರುತ್ತವೆ. ಆದರೆ ಒಂದು ವೇಳೆ ಒಳ್ಳೆಯ ಪರಿಣಾಮವನ್ನು ಬೀರಿದರೆ ಎಲ್ಲರಿಗಿಂತ ಅತ್ಯಂತ ಹೆಚ್ಚಾಗಿ ಒಳ್ಳೆಯ ಪರಿಣಾಮವನ್ನು ಆಯಾಯ ರಾಶಿಯವರ ಜೀವನದಲ್ಲಿ ಬೀರುತ್ತದೆ.
ಇನ್ನು ಏಪ್ರಿಲ್ ತಿಂಗಳ ಕೊನೆಯಲ್ಲಿ ರಾಹು ಗ್ರಹವು ಮೇಷ ರಾಶಿಯನ್ನು ಪ್ರವೇಶಿಸಿದೆ. ಈ ಕಾರಣದಿಂದಾಗಿಯೇ ರಾಹು ಗ್ರಹದ ಈ ರಾಶಿ ಸಂಕ್ರಮಣ ಸಂದರ್ಭದಲ್ಲಿ ಒಂದುವರೆ ವರ್ಷಗಳ ಕಾಲ ಈ 3 ರಾಶಿಯವರಿಗೆ ರಾಜಯೋಗ ಸಿಗಲಿದೆ ಎಂಬುದಾಗಿ ಜ್ಯೋತಿಷ್ಯಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ಹಾಗಿದ್ದರೆ ಆ ಮೂರು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ.
ಮಿಥುನ ರಾಶಿ; ರಾಹುವಿನ ರಾಶಿ ಪಲ್ಲಟದಿಂದಾಗಿ ಮಿಥುನ ರಾಶಿಯವರಿಗೆ ಆರ್ಥಿಕವಾಗಿ ಹಾಗೂ ಆರೋಗ್ಯದಲ್ಲಿ ಕೂಡ ಸಾಕಷ್ಟು ಲಾಭಗಳು ಹಾಗೂ ಉತ್ತಮ ಬದಲಾವಣೆಗಳು ಕಂಡುಬರಲಿವೆ. ಕೆಲಸದಲ್ಲಿ ಸಂಭಾವನೆಯ ಹೆಚ್ಚಳ ನಡೆಯಲಿದ್ದು ವ್ಯಾಪಾರದಲ್ಲಿ ಉತ್ತಮವಾದ ಲಾಭ ಹರಿದುಬರಲಿದೆ. ಆರ್ಥಿಕವಾಗಿ ಯಾವುದೇ ಸಮಸ್ಯೆ ಕೂಡ ಇವರನ್ನು ಕಾಡುವುದಿಲ್ಲ. ರಾಜಕೀಯದಲ್ಲಿ ಇರುವವರಿಗೆ ಉತ್ತಮ ಹುದ್ದೆ ದೊರೆಯಲಿದ್ದು ಹಣಗಳಿಸಲು ಮಿಥುನ ರಾಶಿಯವರಿಗೆ ಸಾಕಷ್ಟು ಮಾರ್ಗಗಳು ಕಂಡುಬರಲಿದೆ ಯಾವುದೇ ಮಾರ್ಗದಲ್ಲಿ ಕೂಡ ಕೈ ತುಂಬಾ ಹಣ ಮಾಡಬಲ್ಲಂತಹ ಅವಕಾಶವಿದೆ.
ಕರ್ಕ ರಾಶಿ; ಪ್ರಮುಖವಾಗಿ ಕರ್ಕ ರಾಶಿಯವರು ಉದ್ಯೋಗದಲ್ಲಿದ್ದರೆ ಖಂಡಿತವಾಗಿ ಸಂಬಳದಲ್ಲಿ ಕೂಡ ಉತ್ತಮ ಪ್ರಗತಿ ಕಂಡುಬರಲಿದೆ ಹಾಗೂ ಮೇಲ್ವರ್ಗದ ಹುದ್ದೆ ಕೂಡ ಸಿಗಲಿದೆ. ಹೊಸ ಕೆಲಸವನ್ನು ಹುಡುಕುತ್ತಿದ್ದರೆ ಕೂಡ ಅತಿಶೀಘ್ರದಲ್ಲಿ ಸಿಗಲಿದೆ ಅದರಲ್ಲೂ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ದೊಡ್ಡಮಟ್ಟದ ಲಾಭಗಳು ಕಾಯ್ದುಕೊಂಡಿವೆ. ಅತಿಶೀಘ್ರದಲ್ಲೇ ಕರ್ಕ ರಾಶಿಯವರು ಹಲವಾರು ವರ್ಷಗಳಿಂದ ಕನಸು ಕಾಣುತ್ತಿರುವ ಹೊಸಮನೆ ಹಾಗೂ ಕಾರುಗಳನ್ನು ಖರೀದಿಸುವ ಸುವರ್ಣಾವಕಾಶ ಸದ್ಯದಲ್ಲೇ ಪ್ರಾಪ್ತಿಯಾಗಲಿದೆ ಎನ್ನುವುದಾಗಿ ಉಲ್ಲೇಖವಾಗಿದೆ.

ಮೀನ ರಾಶಿ; ಮೀನ ರಾಶಿಯವರು ಯಾವುದೇ ಕೆಲಸವನ್ನು ಮಾಡಿದರು ಕೂಡ ಅವರಿಗೆ ಆದಾಯದಲ್ಲಿ ಹರಿವು ನಿಲ್ಲದೆ ಸರಾಗವಾಗಿ ಹರಿದು ಬರಲಿದೆ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೂ ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡು ಬರಲಿದೆ. ರಾಜಕೀಯ ಉದ್ಯೋಗ ವ್ಯಾಪಾರ ಯಾವುದೇ ಕ್ಷೇತ್ರವಿರಲಿ ಮೀನ ರಾಶಿಯವರು ಕೈಹಾಕಿದಾಗ ಖಂಡಿತವಾಗಿ ಅವರಿಗೆ ಕೇವಲ ಚಿನ್ನವೇ ಸಿಗುತ್ತದೆ ಅಂದರೆ ಯಶಸ್ಸು ಮಾತ್ರ ಸಿಗುತ್ತದೆ ಎಂಬುದಾಗಿ ಹೇಳಬಹುದಾಗಿದೆ.
ಒಟ್ಟಾರೆಯಾಗಿ ಒಂದು ವರ್ಷಗಳಿಗೂ ಅಧಿಕ ಕಾಲ ಈ ರಾಹುವಿನ ಸಂಕ್ರಮಣ ಕಾಲ ಮುಗಿಯುವವರೆಗೂ ಕೂಡ ಈ ಮೂರು ರಾಶಿಯವರಿಗೆ ಪ್ರಪಂಚದ ಸರ್ವ ಸಂಪತ್ತಿನ ಸುಖಭೋಗಗಳನ್ನು ಕೂಡ ಅನುಭವಿಸುವಂತಹ ಅವಕಾಶವಿದೆ. ಹೀಗಾಗಿ ಇಷ್ಟೊಂದು ಸಮಯಗಳ ಕಾಲ ಪಡುತ್ತಿದ್ದ ಕಷ್ಟ ನೀರಿನಂತೆ ಮಾಯವಾಗಿ ಸುವರ್ಣ ದಿನಗಳು ಮೂಡಿಬರಲಿವೆ. ನಿಮ್ಮ ರಾಶಿ ಕೂಡ ಈ ರಾಶಿಗಳಲ್ಲಿದ್ದರೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ