ಗಂಡನ ಬಳಿ ದುಡ್ಡಿಲ್ಲ, ಶ್ರೀಮಂತನಲ್ಲ ಎಂದು ಹೇಳಿ ಈಗೆ ಸೌಂದರ್ಯದಿಂದ ದುಡ್ಡು ಮಾಡಲು ಹಿಡಿದ ವಿಚಿತ್ರ ದಾರಿ ಯಾವುದು ಗೊತ್ತೇ? ಮುಂದೇನಾಯಿತು ಗೊತ್ತೇ?

869

ನಮಸ್ಕಾರ ಸ್ನೇಹಿತರೇ ಮಹಿಳೆಯನ್ನು ಒಲಿದರೆ ನಾರಿ ಮುನಿದರೆ ಮಾರಿ ಎನ್ನುವುದಾಗಿ ಕರೆಯುತ್ತಾರೆ. ಒಂದು ಮನೆ ಬೆಳಗಬೇಕಾದರೆ ಆಗಬೇಕಾದರೆ ಎರಡು ಕೂಡ ಹೆಣ್ಣೆ ಕಾರಣವಾಗಿರುತ್ತಾಳೆ. ಹಿಂದಿನ ವಿಚಾರದಲ್ಲಿ ಕೂಡ ಒಬ್ಬ ಮಹಿಳೆ ಕುರಿತಂತೆ ನಾವು ಹೇಳಲು ಹೊರಟಿದ್ದೇವೆ ಆದರೆ ಆಕೆ ಮಾಡಿರುವ ಕೆಲಸ ಖಂಡಿತವಾಗಿ ಕೂಡ ಸ್ತ್ರೀ ಕುಲಕ್ಕೆ ಕಳಂಕ ಎಂದರೆ ತಪ್ಪಾಗಲಾರದು. ಹಾಗಿದ್ದರೆ ಅಷ್ಟಕ್ಕೂ ಆಕೆ ಮಾಡಿರುವುದಾದರೂ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಹೌದು ಗೆಳೆಯರೇ ತನ್ನ ಶ್ರೀಮಂತ ಅಲ್ಲ ಎಂದು ತಿಳಿದ ನಂತರ ಆಕೆ ತನ್ನ ಸೌಂದರ್ಯವನ್ನು ಬಳಸಿಕೊಂಡು ಅಡ್ಡದಾರಿಯನ್ನು ಹಿಡಿದು ದುಡ್ಡು ಮಾಡಿಕೊಳ್ಳುವ ಪ್ರಕ್ರಿಯೆ ಹೇಳಿದ್ದು ನಿಜಕ್ಕೂ ಕೂಡ ದುರ್ದೈವ ಎಂದು ಹೇಳಬಹುದಾಗಿದೆ.

ಹೌದು ಗೆಳೆಯರೇ 25 ವರ್ಷದ ಹುಡುಗಿ ವಿಕ್ರಮ್ ಸಿಂಗ್ ಎಂಬಾತನನ್ನು ಮೂರು ವರ್ಷದ ಹಿಂದೆ ಮದುವೆಯಾಗಿರುತ್ತಾಳೆ. ಮದುವೆಯಾದಾಗ ಆಕೆ ಆಡಂಬರದ ಜೀವನದ ಕನಸನ್ನು ಕಂಡಿರುತ್ತಾಳೆ. ಆದರೆ ಗಂಡನ ಆದಾಯ ಅದಕ್ಕೆ ಸಾಲುವುದಿಲ್ಲ ಎಂಬುದಾಗಿ ತಿಳಿದು ತಾನೆ ಏನಾದರೂ ಮಾಡಿ ದುಡ್ಡನ್ನು ಗಳಿಸುವಂತಹ ದಾರಿಯನ್ನು ಕಂಡು ಹುಡುಕಬೇಕು ಎನ್ನುವುದಾಗಿ ಪ್ರಯತ್ನವನ್ನು ಪಡುತ್ತಾಳೆ. ನಂತರ ತನ್ನ ಗಂಡ ಕೆಲಸ ಮಾಡುವಂತಹ ಮಾರ್ಬಲ್ ಕಂಪನಿಯಲ್ಲಿ ಇರುವಂತಹ ಆತನ ಸ್ನೇಹಿತ ಶೈತಾನ್ ಸಿಂಗ್ ನ ಪರಿಚಯ ಆಗಿ ಅವರಿಬ್ಬರು ಒಂದು ಪ್ಲಾನ್ ಮಾಡುತ್ತಾರೆ. ಹೌದು ಗೆಳೆಯರೇ ಅವರಿಬ್ಬರು ಪ್ಲಾನ್ ಮಾಡಿ ಮಾರ್ಬಲ್ ಕಂಪನಿಯ ವ್ಯಾಪಾರಿಯ ಸಂಪರ್ಕವನ್ನು ಪಡೆದುಕೊಂಡು ಈ ಹುಡುಗಿ ಆತನ ಜೊತೆಗೆ ಸೇರಿ ಅಶ್ಲೀಲ ಕಾರ್ಯ ಮಾಡಿರುವಂತಹ ವಿಡಿಯೋವನ್ನು ರೆಕಾರ್ಡ್ ಮಾಡುತ್ತಾರೆ. ಹನಿಟ್ರ್ಯಾಪಿಂಗ್ ಮಾಡಿದನಂತರ ಇಬ್ಬರೂ ಸೇರಿಕೊಂಡು ಆತನನ್ನು ಬ್ಲಾಕ್ಮೇಲ್ ಮಾಡಿ ಇದುವರೆಗೂ 23 ಲಕ್ಷ ರೂಪಾಯಿಯನ್ನು ಪಡೆದುಕೊಳ್ಳುತ್ತಾರೆ.

ಕೊನೆಗೆ ಆತ ತನ್ನ ಬಳಿ ಹಣ ಇಲ್ಲ ಎಂದು ಮನೆಯಿಂದ ನಾಪತ್ತೆಯಾಗುತ್ತಾನೆ. ಈತ ಕಾಣೆಯಾಗಿರುವ ಹಿನ್ನೆಲೆಯಲ್ಲಿ ಈತನನ್ನು ಹುಡುಕಿ ದಂತಹ ಪೊಲೀಸರಿಗೆ ಈತ ನನ್ನ ಬಳಿ ಹಣ ಇಲ್ಲ ನನ್ನ ಜೊತೆಗೆ ಹೀಗೆ ನಡೆದಿದೆ ಎಂಬುದಾಗಿ ಅವರಿಬ್ಬರ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡುತ್ತಾನೆ. ನಂತರ ಕೂಡಲೇ ಅವರಿಬ್ಬರನ್ನು ಬಂಧಿಸಿದ ಪೊಲೀಸರು ಅವರಿಂದ 23 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಂಡು ಆತನಿಗೆ ನೀಡುತ್ತಾರೆ. ಇದ್ದಿದ್ದರಲ್ಲಿ ಸುಖವಾಗಿರಬೇಕು ಎಂದು ಯೋಚಿಸುವ ಬದಲು ಹಾಸಿಗೆ ಗಿಂತ ಕಾಲನ್ನು ಉದ್ದ ಚಾಚುವ ಯೋಚನೆಗೆ ಹೋಗಿ ಈಗ ಕಾಲನ್ನೇ ಕಳೆದುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ದುರಾಸೆ ಎನ್ನುವುದು ಆಕೆಯ ಸಂಸಾರವನ್ನು ಹಾಳು ಮಾಡಿತು ಎಂದರೆ ತಪ್ಪಾಗಲಾರದು.