ಪತ್ನಿಯ ಸಹೋದರಿಯನ್ನು ಕೂಡ ಪ್ರೀತಿಮಾಡಿ ಸಂಬಂಧ ಇಟ್ಟುಕೊಂಡಿದ್ದ, ಪತ್ನಿಗೆ ವಿಷಯ ತಿಳಿದಾಗ ಏನು ಮಾಡಿದ ಗೊತ್ತೇ??

675

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಿಜಕ್ಕೂ ಕೂಡ ಪರಸ್ಪರ ಜನರು ಯಾವುದೇ ಪ್ರೀತಿ ಬಾಂಧವ್ಯಗಳನ್ನು ಹೊಂದದೆ ಕೇವಲ ಸ್ವಾರ್ಥಕ್ಕಾಗಿ ಬದುಕುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಇತ್ತೀಚಿಗೆ ಸುದ್ದಿಮಾಧ್ಯಮಗಳಲ್ಲಿ ಕೇಳಿ ಬರುವಂತಹ ಕೆಲವೊಂದು ಪ್ರಕರಣಗಳನ್ನು ನೋಡಿದರೆ ಹಾಗೂ ಕೇಳಿದರೆ ಕೂಡ ಇಂದಿನ ಜನರ ಮನಸ್ಥಿತಿಯ ಕುರಿತಂತೆ ಅಸಹ್ಯ ಮೂಡಿಬರುತ್ತದೆ. ಹೌದು ಗೆಳೆಯರೇ ಈ ಕಥೆಯನ್ನು ಕೇಳಿದರೆ ನೀವು ಕೋಪಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಗೆಳೆಯರೇ ಒಂಬತ್ತು ವರ್ಷಗಳ ಹಿಂದೆ ಚೌಡೇಶ್ ಎನ್ನುವಾತ ಶ್ವೇತಾ ಎಂಬಾಕೆಯನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನು ಕೂಡ ಹೊಂದಿದ್ದ.

ನಾಲ್ಕೈದು ವರ್ಷಗಳ ಹಿಂದೆ ಕೆಲಸವನ್ನು ಹುಡುಕಿಕೊಂಡು ನೆಲಮಂಗಲಕ್ಕೆ ಬಂದು ಅಲ್ಲಿ ಒಂದು ಬಾಡಿಗೆ ಮನೆಯನ್ನು ಪಡೆದುಕೊಂಡಿದ್ದ. ನಂತರ ಅಲ್ಲಿಯೇ ಬಾರೊಂದರಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡಿಕೊಂಡಿದ್ದ. ಕೆಲವು ವರ್ಷಗಳ ಹಿಂದಷ್ಟೇ ಹಣವನ್ನು ಸಂಪಾದಿಸಿದ ನಂತರ ಸ್ವಂತ ಮನೆಯನ್ನು ಖರೀದಿಸಿದ್ದ. ಇನ್ನು ಈಗಿನ ವಿಚಾರಕ್ಕೆ ಬರುವುದಾದರೆ ಮಂಗಳವಾರ ರಾತ್ರಿಯಷ್ಟೇ ಶ್ವೇತಾ ಕಡಿಮೆ ಬಿಪಿ ಇಂದಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಎನ್ನುವ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ವೈದ್ಯರು ಆಕೆ ಮರಣ ಹೊಂದಿರುವುದನ್ನು ಖಚಿತಪಡಿಸಿದರು. ಕೂಡಲೇ ಶ್ವೇತಾಳ ಮನೆಯವರಿಗೆ ಈ ಮೊದಲೇ ಆಕೆ ಪ್ರಜ್ಞೆ ತಪ್ಪಿರುವ ಕುರಿತಂತೆ ಸುದ್ದಿಯನ್ನು ನೀಡಿರುತ್ತಾನೆ. 10 ಗಂಟೆಗೆ ಆಕೆಯ ಕಳೆಬರಹ ನೆಲಮಂಗಲಕ್ಕೆ ತೆಗೆದುಕೊಂಡು ಬಂದಾಗ ಆಕೆಯ ಪೋಷಕರಿಗೆ ಮಗಳು ಮರಣವನ್ನು ಹೊಂದಿರುವ ವಿಚಾರ ಗೊತ್ತಾಗುತ್ತದೆ.

ಆದರೆ ಮಗಳ ಶ’ವವನ್ನು ಸರಿಯಾಗಿ ಗಮನಿಸಿದಾಗ ಆಕೆಗೆ ಥಳಿಸಿರುವ ಹಾಗೂ ಗುತ್ತಿಗೆ ಬಿಗಿದಿರುವ ಕಲೆಗಳು ಅವರಿಗೆ ಕಂಡು ಬಂದು ಪೊಲೀಸರಿಗೆ ದೂರು ನೀಡುತ್ತಾರೆ. ಪೋಲಿಸರ ವಶಕ್ಕೆ ಬಂದಾಗ ಪೊಲೀಸರ ಸ್ಟೈಲಲ್ಲಿ ವಿಚಾರಣೆ ನಡೆಸಿದಾಗ ಚೌಡೇಶ್ ಇರುವ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಹೌದು ಗೆಳೆಯರೇ ಶ್ವೇತಾ ತಂಗಿಯ ಜೊತೆಗೆ ಚೌಡೇಶ್ ಸಂಬಂಧವನ್ನು ಹೊಂದಿರುವುದು ಆಕೆಗೆ ತಿಳಿದುಬಂದಿದೆ. ಈ ಕಾರಣಕ್ಕಾಗಿಯೇ ಮಂಗಳವಾರ ದಿನದ ರಾತ್ರಿ ಆಕೆ ಮೇಲೆ ಕೋಪ ಬಂದು ಹಲ್ಲೆ ಮಾಡಿ ಕುತ್ತಿಗೆ ಬಿಗಿದು ಮುಗಿಸಿದ್ದಾನೆ. ಇನ್ನು ಕೆಲವು ವರ್ಷಗಳ ಹಿಂದೆ ಮನೆ ಕಟ್ಟಿಸುವ ಸಂದರ್ಭದಲ್ಲಿ ಕೂಡ ಚೌಡೇಶ್ ಶ್ವೇತಾಳಿಗೆ ದುಡ್ಡು ತರುವಂತೆ ವರದಕ್ಷಿಣೆಯ ಸಲುವಾಗಿ ಕಿರುಕುಳ ನೀಡಿದ್ದ ಎಂಬುದಾಗಿ ಕೂಡ ಈ ಸಂದರ್ಭದಲ್ಲಿ ಉಲ್ಲೇಖವಾಗಿದೆ. ಕೇವಲ ಕ್ಷಣಿಕ ಸುಖಕ್ಕಾಗಿ ಹಾಗೂ ಹಣದಾಸೆಗಾಗಿ ಬಾಳಿ ಬದುಕಬೇಕಾಗಿದೆ ಹೆಣ್ಣುಮಗಳ ಜೀವನಕ್ಕೆ ಕಂಟಕವಾಗಿ ಪರಿಣಮಿಸಿದ್ದಾನೆ ಈ ಪಾಪಿಷ್ಟ. ಇವನ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.