ಶಾರುಖ್ ಪುತ್ರಿ ಸುಹಾನಾ ಕೂಡ ಕೋಟಿ ಕೋಟಿ ಸಂಪತ್ತಿನ ಒಡತಿ, ನ್ಯೂಯಾರ್ಕ್ ನಲ್ಲಿ ಸ್ವಂತ ಮನೆ, ಕೋಟಿಗಟ್ಟಲೆ ಸಂಪಾದನೆ, ಹೇಗಿದೆ ಗೊತ್ತೇ ಲೈಫ್ ಸ್ಟೈಲ್?

1,032

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದ ನಟರಲ್ಲಿ ಅತ್ಯಂತ ಹೆಚ್ಚು ಶ್ರೀಮಂತ ನಟ ಯಾರು ಎಂದು ಕೇಳಿದರೆ ಕೇಳಿ ಬರುವಂತಹ ಏಕೈಕ ಹೆಸರು ಎಂದರೆ ಅದು ಬಾಲಿವುಡ್ ನ ಕಿಂಗ್ ಖಾನ್ ಆಗಿರುವ ಶಾರುಖ್ ಖಾನ್ ಅವರ ಹೆಸರು. ಹೌದು ನಾವು ಮಾತನಾಡಲು ಹೊರಟಿರುವುದು ಶಾರುಖ್ ಖಾನ ರವರ ಮಗಳಾಗಿರುವ ಸುಹಾನಾ ಖಾನ್ ಅವರ ಕುರಿತಂತೆ. ಶಾರುಖ್ ಖಾನ್ ಅವರು ಬಾಲಿವುಡ್ ಚಿತ್ರರಂಗದಲ್ಲಿ ಯಾರ ಸಹಾಯವಿಲ್ಲದೆ ಅಮಿತಾ ಬಚ್ಚನ್ ರವರಂತೆ ಘಟಾನುಘಟಿಗಳು ಇದ್ದ ಸಂದರ್ಭದಲ್ಲಿ ತಮ್ಮ ಸ್ವಂತ ಪ್ರತಿಭೆಯ ಪರಿಶ್ರಮದ ಮೂಲಕ ಕಷ್ಟಪಟ್ಟು ಚಿತ್ರರಂಗದಲ್ಲಿ ತಮ್ಮದೇ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡವರು.

ಇನ್ನು ಸುಹಾನಾ ಖಾನ್ ರವರು ಸುದ್ದಿಯಾಗುತ್ತಿರುವುದು ಅವರ ತಂದೆ ಶಾರುಖ್ ಖಾನ್ ಎನ್ನುವ ಕಾರಣಕ್ಕಾಗಿ ಎಂದರೆ ಅತಿಶಯೋಕ್ತಿಯಲ್ಲ. ಆಗಾಗ ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸಪೋರ್ಟ್ ಮಾಡುತ್ತಾ ಕಾಣುವ ಸುಹಾನ ಖಾನ್ ಸಿನಿಮಾಗೆ ಸಂಬಂಧಿತ ಕೋರ್ಸನ್ನು ನ್ಯೂಯಾರ್ಕ್ನಲ್ಲಿ ಮಾಡುತ್ತಿದ್ದಾರೆ. ಸುಹಾನ ಖಾನ್ ಬೇರೆಯವರ ತರಹ ಹಾಸ್ಟೆಲ್ ನಲ್ಲಿ ವಾಸ ಮಾಡುತ್ತಿಲ್ಲ. ಬದಲಾಗಿ ಅಮೆರಿಕಾದ ನ್ಯೂಯಾರ್ಕ್ ನಲ್ಲಿ ಇರುವಂತಹ ತಮ್ಮದೇ ಆದಂತಹ 35 ಕೋಟಿ ರೂಪಾಯಿ ಬೆಲೆಬಾಳುವ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದಾರೆ.

ಇನ್ನು ಒಬ್ಬಳೇ ಮಗಳಾಗಿರುವ ಕಾರಣದಿಂದಾಗಿ ಶಾರುಖ್ ಖಾನ್ ಹಾಗೂ ಗೌರಿ ಖಾನ್ ದಂಪತಿಗಳು ತಮ್ಮ ಮಗಳಿಗೆ ಐಷಾರಾಮಿ ಜೀವನವನ್ನು ನಡೆಸುವ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದಾರೆ. ಇನ್ನು ಅಮೆರಿಕದಲ್ಲಿ ಓಡಾಡಲು ಕೂಡ ಲಕ್ಸುರಿಯಸ್ ಕಾರುಗಳನ್ನೇ ಸುಹಾನಾ ಖಾನ್ ರವರು ಬಳಸುತ್ತಾರೆ. ಹೌದು ಗೆಳೆಯರೇ ಅಮೆರಿಕಾದ ನ್ಯೂಯಾರ್ಕ್ ನಲ್ಲಿ ಓಡಾಡಲು ಅಮೇರಿಕಾದ ಐಷರಾಮಿ ಕಾರುಗಳ ಆಗಿರುವ ರೇಂಜ್ ರೋವರ್ ಹಾಗೂ ಲ್ಯಾಂಬೋರ್ಗಿನಿ ಕಾರುಗಳನ್ನು ಉಪಯೋಗಿಸುತ್ತಾರೆ. ಒಟ್ಟಾರೆಯಾಗಿ ವಿದೇಶದಲ್ಲಿ ಕೂಡ ಶಾರುಖ್ ಖಾನ ರವರು ತಮ್ಮ ಮಗಳನ್ನು ರಾಜಕುಮಾರಿಯಾಗಿ ಬಾಳುವಂತೆ ನೋಡಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಆದರೆ ಇದು ಸುಹಾನ ಖಾನ್ ಸಂಪಾದಿಸಿದ್ದಲ್ಲ ಬದಲಾಗಿ ಶಾರುಖ್ ಖಾನ್ ಸಂಪಾದಿಸಿದ್ದು ಎನ್ನುವುದು ಇಲ್ಲಿ ನಾವು ಗಮನಿಸಬೇಕು.