ಜೀವನದಲ್ಲಿ ಅಷ್ಟೇ ಅಲ್ಲಾ, ಸಿನಿಮಾ ಜೀವನದಲ್ಲಿ ಕೂಡ ನಾಗಚೈತನ್ಯಗೆ ಶಾಕ್ ನೀಡಿದ ಸಮಂತಾ, ಮಾಡಲು ಹೊರಟಿರುವುದಾದರೂ ಏನು ಗೊತ್ತೆ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಸಮಂತ ಹಾಗೂ ನಾಗಚೈತನ್ಯ ಇಬ್ಬರು ಕೂಡ ತಮ್ಮ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ವಿವಾಹ ವಿಚ್ಛೇದನದ ಮೂಲಕ ಅಂತ್ಯ ಹಾಡಿದ್ದರು. ಇನ್ನು ವಿವಾಹ ವಿಚ್ಛೇದನವನ್ನು ಪಡೆದ ನಂತರ ಇಬ್ಬರೂ ಕೂಡ ತಮ್ಮ ವೃತ್ತಿಜೀವನದಲ್ಲಿ ನಿರತರಾಗಿದ್ದಾರೆ ಎಂದು ಹೇಳಬಹುದಾಗಿದೆ. ಅದರಲ್ಲೂ ನಟಿ ಸಮಂತಾ ರವರು ದಿನದಿಂದ ದಿನಕ್ಕೆ ಸಿನಿಮಾ ಕ್ಷೇತ್ರದಲ್ಲಿ ಬೆಳವಣಿಗೆಯನ್ನು ಕಾಣುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಅವರ ಬೇಡಿಕೆಯನ್ನು ಇದು ಕೇವಲ ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆ.
ವೆಬ್ ಸರಣಿಗಳು ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅವರನ್ನು ಬಂದು ನಟಿಸಿ ಎನ್ನುವುದಾಗಿ ಕೇಳಲು ಹಲವಾರು ನಿರ್ಮಾಪಕರು ನಿರ್ದೇಶಕರು ಸಾಲುಗಟ್ಟಿ ನಿಂತಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಇತ್ತಕಡೆ ನಾಗಚೈತನ್ಯ ರವರು ಅಷ್ಟೊಂದು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಪಡೆದುಕೊಂಡಿಲ್ಲ ಎಂದು ಹೇಳಬಹುದಾಗಿದೆ. ಕೆಲವು ಸಮಯಗಳ ಹಿಂದೆ ಬಿಡುಗಡೆಯಾದ ಲವ್ ಸ್ಟೋರಿ ಸಿನಿಮಾ ಒಂದು ಲೆಕ್ಕದಲ್ಲಿ ಸೂಪರ್ ಹಿಟ್ ಆಗಿತ್ತು. ಇದನ್ನು ಬಿಟ್ಟರೆ ಹೇಳಿಕೊಳ್ಳುವಷ್ಟು ಯಾವುದೇ ಸಿನಿಮಾಗಳು ಕೂಡ ಯಶಸ್ಸನ್ನು ಸಾಧಿಸಿಲ್ಲ. ಆಗಸ್ಟ್ ತಿಂಗಳಿನಲ್ಲಿ ಗಂಡ ಹಾಗೂ ಹೆಂಡತಿ ಇಬ್ಬರೂ ಬಾಕ್ಸ್ ಆಫೀಸ್ ನಲ್ಲಿ ಮುಖಾಮುಖಿಯಾಗಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಹೌದು ಗೆಳೆಯರೇ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಾಗಚೈತನ್ಯ ರವರು ಕೂಡ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಇನ್ನು ಈ ಸಿನಿಮಾ ಆಗಸ್ಟ್ 11ರಂದು ಬಿಡುಗಡೆಯಾಗಲಿದೆ. ಆಗಸ್ಟ್ 12ರಂದು ಸಮಂತ ನಟನೆಯ ಯಶೋಧ ಸಿನಿಮಾ ಬಿಡುಗಡೆಯಾಗಲಿದೆ. ಹೀಗಾಗಿ ಬಾಕ್ಸಾಫೀಸ್ ನಲ್ಲಿ ಒಂದು ದಿನಗಳ ಅಂತರದಲ್ಲಿ ಇಬ್ಬರೂ ಕೂಡ ಮುಖಾಮುಖಿಯಾಗಲಿದ್ದಾರೆ ಎಂಬುದಾಗಿ ಹೇಳಬಹುದಾಗಿದೆ. ಖಂಡಿತವಾಗಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಈ ಮುಖಾಮುಖಿಯಲ್ಲಿ ಗೆಲ್ಲುವುದು ಸಮಂತಾ ರವರೆ ಎಂದು ಹೇಳಬಹುದಾಗಿದೆ. ಈ ಮುಖಾಮುಖಿಯನ್ನು ನಾವು ಮುಂದೆ ದಿನಗಳಲ್ಲಷ್ಟೇ ಕಾದುನೋಡಬೇಕಾಗಿದೆ.