ಶಾರುಖ್, ಸಲ್ಮಾನ್ ಖಾನ್ ಹಾಗೂ ಹೃತಿಕ್ ರೋಷನ್ ಸೇರಿದಂತೆ ಬಾಲಿವುಡ್ ಸೆಲೆಬ್ರಿಟಿಗಳು ಮದುವೆಯಲ್ಲಿ ಡಾನ್ಸ್ ಮಾಡಲು ಪಡೆಯುವ ಸಂಭಾವನೆ ಎಷ್ಟು ಗೊತ್ತೇ??

44

ನಮಸ್ಕಾರ ಸ್ನೇಹಿತರೇ ನಮ್ಮ ಬಾಲಿವುಡ್ ಚಿತ್ರರಂಗದಲ್ಲಿ ಎಷ್ಟೆಲ್ಲಾ ಸೂಪರ್ ಸ್ಟಾರ್ ನಟರ ಇದ್ದಾರೆ ಎನ್ನುವುದು ನಿಮಗೆಲ್ಲ ಗೊತ್ತೇ ಇದೆ. ಇವರು ಒಂದು ಸಿನಿಮಾಗೆ ತೆಗೆದುಕೊಳ್ಳುವ ಸಂಭಾವನೆಯಿಂದ ಎರಡು ಬಿಗ್ ಬಜೆಟ್ ಸಿನಿಮಾ ಮಾಡಬಹುದು ಅಷ್ಟರಮಟ್ಟಿಗೆ ಸಂಭಾವನೆ ಪಡೆದುಕೊಳ್ಳುತ್ತಾರೆ. ಇನ್ನು ಕೇವಲ ಸಂಭಾವನೆ ಮಾತ್ರವಲ್ಲದೆ ಲಾಭದಲ್ಲಿ ಪಾಲನ್ನು ಕೂಡ ಪಡೆದುಕೊಳ್ಳುತ್ತಾರೆ. ಹೀಗಾಗಿ ಇವರು ಒಂದು ಸಿನಿಮಾ ಮಾಡಿದರೆ ಅದರಿಂದ ಇವರಿಗೆ ಬರುವಂತಹ ಹಣ ಯಾವ ಮಟ್ಟದಲ್ಲಿ ಇರಬಹುದೆಂದು ನೀವೇ ಅಂದಾಜಿಸಬಹುದಾಗಿದೆ.

ಇನ್ನು ಕೇವಲ ಬಾಲಿವುಡ್ ಚಿತ್ರರಂಗದ ಸೆಲೆಬ್ರಿಟಿಗಳು ಸಿನಿಮಾದಲ್ಲಿ ಮಾತ್ರವಲ್ಲದೆ ಜಾಹಿರಾತು ಹಾಗೂ ಕೆಲವೊಂದು ಕಾರ್ಯಕ್ರಮಗಳಿಗೆ ಅತಿಥಿಯಾಗಿ ಹೋಗಲು ಕೂಡ ದೊಡ್ಡ ಮಟ್ಟದಲ್ಲಿ ಹಣ ಪಡೆಯುತ್ತಾರೆ. ಏನು ಇಂದು ನಾವು ಮಾತನಾಡಲು ಹೊರಟಿರುವುದು ಬಾಲಿವುಡ್ ಚಿತ್ರರಂಗದ ಯಾವೆಲ್ಲ ಸೆಲೆಬ್ರಿಟಿಗಳು ಮದುವೆಯಲ್ಲಿ ಬಂದು ಡ್ಯಾನ್ಸ್ ಮಾಡೋಕೆ ಎಷ್ಟು ಕೋಟಿ ರೂಪಾಯಿ ಹಣ ಪಡೆಯುತ್ತಾರೆ ಎಂಬುದರ ಕುರಿತಂತೆ ಹೇಳಲು ಹೊರಟಿದ್ದೇವೆ. ಈ ಸಾಲಿನಲ್ಲಿ ಯಾವೆಲ್ಲ ನಟರು ಕಾಣಸಿಗುತ್ತಾರೆ ಹಾಗೂ ಅವರು ಎಷ್ಟು ಹಣವನ್ನು ಪಡೆಯುತ್ತಾರೆ ಎಂಬುದನ್ನು ನೋಡೋಣ ಬನ್ನಿ.

ಮೊದಲಿಗೆ ನೋಡುವುದಾದರೆ ಶಾರುಖ್ ಖಾನ್. ಶಾರುಖ್ ಖಾನ್ ರವರು ಸಿನಿಮಾಗಳು ಕಳೆದ ಕೆಲವು ವರ್ಷಗಳಿಂದ ಬಾಕ್ಸಾಫೀಸ್ ನಲ್ಲಿ ದೊಡ್ಡಮಟ್ಟದ ಸೋಲನ್ನು ಕಂಡಿದೆ ಆದರೆ ಇದು ಅವರ ಜನಪ್ರಿಯತೆ ಹಾಗೂ ವ್ಯಾಲ್ಯೂ ಕಡಿಮೆ ಮಾಡಿಲ್ಲ. ಹೌದು ಗೆಳೆಯರೇ ಶಾರುಖ್ ಖಾನ್ ಅವರು ಭಾರತೀಯ ಚಿತ್ರರಂಗದ ಅತ್ಯಂತ ಶ್ರೀಮಂತ ಸೆಲೆಬ್ರಿಟಿ ಆಗಿದ್ದಾರೆ. ಇನ್ನು ಇತ್ತೀಚಿಗೆ ತಮ್ಮ ಹೊಸ ಹೊಸ ಚಿತ್ರಗಳ ಘೋಷಣೆ ಕೂಡ ಮಾಡಿದ್ದಾರೆ. ದುಡ್ಡು ಕೊಟ್ಟರೆ ಶಾರುಖ್ ಖಾನ್ ಕೂಡ ಮದುವೆಗೆ ಬಂದು ಡ್ಯಾನ್ಸ್ ಮಾಡುತ್ತಾರೆ. ಆದರೆ ನಿಮ್ಮ ಮದುವೆಗೆ ಶಾರುಖ್ ಖಾನ್ ಬಂದು ಡ್ಯಾನ್ಸ್ ಮಾಡುವುದಕ್ಕೆ ಬರೋಬ್ಬರಿ ಮೂರು ಕೊಟ್ಟಿರುವ ಹಣವನ್ನು ನೀವು ಅವರಿಗೆ ನೀಡಬೇಕಾಗುತ್ತದೆ.

ಇನ್ನು ಸಲ್ಮಾನ್ ಖಾನ್ ರವರು ಕೂಡ ಈ ಸಾಲಿಗೆ ಸೇರುತ್ತಾರೆ. ಯಾವುದೇ ಸಮಯವಿರಲಿ ಸಲ್ಮಾನ್ ಖಾನ್ ಅವರ ಸಿನಿಮಾದ ಎದುರುಗಡೆ ಯಾವುದಾದರೂ ಸಿನಿಮಾ ಬಿಡುಗಡೆಯಾಗುತ್ತದೆ ಎಂದರೆ ಖಂಡಿತವಾಗಿ ಅದು ಸೋಲಿನಲ್ಲಿ ಕೊನೆ ಕಾಣುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ಸಲ್ಮಾನ್ ಖಾನ್ ರವರ ಸ್ಟಾರ್ ಡಮ್ ಭಾರತ ದೇಶದಲ್ಲಿ ಅಷ್ಟೊಂದು ದೊಡ್ಡ ಮಟ್ಟಿಗೆ ಇದೆ. ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳುವುದು ವಿರಳಾತಿವಿರಳ ಆದರೂ ಕೂಡ ಸಲ್ಮಾನ್ ಖಾನ್ ಕೆಲವೊಂದು ಗಣ್ಯಾತಿಗಣ್ಯರ ಮದುವೆ ಅತಿಥಿಯಾಗಿ ಬಂದು ಡ್ಯಾನ್ಸ್ ಮಾಡಿ ಹೋಗುವುದಕ್ಕೆ ಬರೋಬ್ಬರಿ ಮೂರು ಕೋಟಿ ರೂಪಾಯಿ ಪಡೆದುಕೊಳ್ಳುತ್ತಾರಂತೆ.

ಹೃತಿಕ್ ರೋಷನ್ ರವರು ಕೂಡ ಬಾಲಿವುಡ್ ಚಿತ್ರರಂಗದ ಸ್ಟಾರ್ ನಟರಲ್ಲಿ ಅಗ್ರಗಣ್ಯನಾಗಿ ಕಾಣಿಸಿಕೊಳ್ಳುವಂತ‌ಹ ನಟ. ಇವರನ್ನು ಬಾಲಿವುಡ್ ಚಿತ್ರರಂಗದ ಗ್ರೀಕ್ ಗಾಡ್ ಎನ್ನುವುದಾಗಿ ಕರೆಯುತ್ತಾರೆ. ಈ ವಯಸ್ಸಿನಲ್ಲಿ ಒಕ್ಕೂಟ 25ರ ಹರೆಯದ ಯುವಕನಂತೆ ಸ್ಟೈಲಿಶ್ ಹಾಗೂ ಸುಂದರವಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಇವರು ಕೂಡ ಸೆಲೆಬ್ರಿಟಿಗಳ ಮದುವೆಗೆ ಡ್ಯಾನ್ಸ್ ಮಾಡಲು ಬರೋಬ್ಬರಿ 2 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ.

ಕೇವಲ ಇವರಷ್ಟೇ ಮಾತ್ರವಲ್ಲದೆ ಮತ್ತೊಬ್ಬ ಸ್ಟಾರ್ ನಟ ಆಗಿರುವ ರಣವೀರ್ ಸಿಂಗ್ ಅವರು ಕೂಡ ತಮ್ಮ ಚಿತ್ರವಿಚಿತ್ರ ಫ್ಯಾಶನ್ ಗಳಿಂದಾಗಿ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇನ್ನು ಇವರು ಮದುವೆಯನ್ನು ಅಟೆಂಡ್ ಮಾಡಲು ಬರೋಬ್ಬರಿ 2 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಾರೆ. ಇನ್ನು ಈ ಸಾಲಿನಲ್ಲಿ ಇವರ ಪತ್ನಿ ಕೂಡ ಕಾಣಸಿಗುತ್ತಾರೆ. ಹೌದು ಗೆಳೆಯರೇ ದೀಪಿಕಾ ಪಡುಕೋಣೆ ಅವರು ಕೂಡ ಮದುವೆಯಲ್ಲಿ ನೃತ್ಯ ಮಾಡಲು ಬರೋಬ್ಬರಿ ಒಂದು ಕೋಟಿ ರೂಪಾಯಿ ಪಡೆದುಕೊಳ್ಳುತ್ತಾರೆ. ಇನ್ನು ಇಡೀ ಭಾರತ ದೇಶದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿ ಕೂಡ ದೀಪಿಕಾ ಪಡುಕೋಣೆ ಆಗಿದ್ದಾರೆ.

ಇನ್ನು ಮತ್ತೊಬ್ಬ ಭಾರತೀಯ ಚಿತ್ರರಂಗದ ಅತ್ಯಂತ ಹೆಚ್ಚು ಬಹುಬೇಡಿಕೆ ಹಾಗೂ ಬಹು ಸಂಭಾವನೆ ಪಡೆದುಕೊಳ್ಳುವ ನಟಿಯಾಗಿರುವ ಇತ್ತೀಚಿಗಷ್ಟೇ ವಿಕ್ಕಿ ಕೌಶಲ್ ರವರನ್ನು ಮದುವೆಯಾಗುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯ ಕೇಂದ್ರ ಬಿಂದು ಆಗಿದ್ದ ಕತ್ರಿನಾ ಕೈಫ್ ರವರು ಕೂಡ ಮದುವೆಗೆ ಕುಣಿಯಲು ಬರೋಬ್ಬರಿ ಒಂದು ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಈ ಎಲ್ಲಾ ನಟರು ಮದುವೆಯಲ್ಲಿ ಡ್ಯಾನ್ಸ್ ಮಾಡಲು ಪಡೆಯುವ ಸಂಭಾವನೆ ಇಷ್ಟರಮಟ್ಟಿಗೆ ಇದೆ ಎಂದರೆ ಅವರು ಸಿನಿಮಾಗೆ ತೆಗೆದುಕೊಳ್ಳುವ ಸಂಭಾವನೆ ಯಾವ ಮಟ್ಟದಲ್ಲಿ ಇರಬಹುದು ಎಂಬುದನ್ನು ನೀವೇ ಊಹಿಸಿ.