ಗಂಡನನ್ನು ಅನುಮಾನ ಪಟ್ಟು ಹಿಂಬಾಲಿಸಿಕೊಂಡು ಹೋದ ಹೆಂಡತಿ, ನಂತರ ಆತನ ಹೆಂಡತಿಗೆ ಯಾವ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡ ಗೊತ್ತಾ??

174

ನಮಸ್ಕಾರ ಸ್ನೇಹಿತರೇ ಮದುವೆಯಾದಮೇಲೆ ದಂಪತಿಗಳ ನಡುವೆ ಪರಸ್ಪರ ಇರಬೇಕಾಗಿದ್ದು ಮೊದಲಿಗೆ ನಂಬಿಕೆ ಎಂದರೆ ತಪ್ಪಾಗಲಾರದು. ನಂಬಿಕೆ ಇಟ್ಟು ಕೊಳ್ಳಬೇಕು ಎನ್ನುವ ಮಾತ್ರಕ್ಕೆ ಗಂಡನಾದವನು ಹೆಂಡತಿಗೆ ಮೋಸ ಮಾಡೋದು ನಿಜಕ್ಕೂ ಕೂಡ ಅಕ್ಷಮ್ಯ ಅಪರಾಧ. ಇಂದಿನ ಲೇಖನಿಯಲ್ಲಿ ಕೂಡ ನಾವು ಇದರ ವಿಚಾರವಾಗಿ ಹೇಳಲು ಹೊರಟಿದ್ದೇವೆ. ಒಂದು ವೇಳೆ ಗಂಡ ಹೆಂಡತಿಗೆ ತಿಳಿಯದಂತೆ ಬೇರೊಂದು ಕಡೆ ಸಂಬಂಧವನ್ನು ಇಟ್ಟುಕೊಂಡಿದ್ದಾರೆ ಖಂಡಿತವಾಗಿ ಈ ಕಥೆಯಲ್ಲಿ ನಡೆದಂತಹ ಶಿಕ್ಷೆಯೇ ಪ್ರತಿಯೊಬ್ಬರಿಗೆ ಕೂಡ ಆಗುತ್ತದೆ. ಹೀಗಾಗಿ ಪ್ರತಿಯೊಬ್ಬರು ಕೂಡ ಈ ಘಟನೆಯನ್ನು ಕೊನೆಯವರೆಗೂ ಓದಲೇಬೇಕು.

ನಾವು ಇಂದು ಹೇಳಹೊರಟಿರುವ ನೈಜ ಘಟನೆ ಯಲ್ಲಿ ಕೂಡ ಇದೇ ರೀತಿಯ ಕೆಲಸ ನಡೆದಿದೆ‌. ಹೈದರಾಬಾದ್ ನಿವಾಸಿಯಾಗಿರುವ ಅನಿಲ್ ಕೆಲವು ವರ್ಷಗಳ ಹಿಂದಷ್ಟೇ ರಾಜೇಶ್ವರಿ ಎನ್ನುವಾಕೆಯನ್ನು ಮದುವೆಯಾಗಿದ್ದ. ಮದುವೆಯಾದ ಮೇಲೆ ಹೆಂಡತಿಗೆ ಪ್ರಾಮಾಣಿಕರಾಗಿ ಉಳಿದುಕೊಳ್ಳುವುದು ಗಂಡನ ಆದ್ಯ ಕರ್ತವ್ಯವಾಗಿದೆ. ಆದರೆ ಈತ ಮದುವೆಯಾದಮೇಲೆ ಬೇರೆ ಕಡೆ ಮೇಯಲು ಹೋಗಿದ್ದ. ಒಬ್ಬರು ನಿಮ್ಮನ್ನು ನನ್ನ ಸರ್ವಸ್ವವೆಂದು ಮನೆ ಬಿಟ್ಟು ನಿಮ್ಮ ಬಳಿ ಬಂದ ಮೇಲೆ ಆಕೆಯನ್ನು ನೀವು ಜೀವನಪರ್ಯಂತ ಚೆನ್ನಾಗಿ ನೋಡಿಕೊಳ್ಳುವುದು ಹಾಗೂ ಆಕೆಗೆ ನಿಷ್ಟರಾಗಿರುವುದು ಗಂಡನಾದವನು ಕರ್ತವ್ಯವಾಗಿರುತ್ತದೆ.

ಆದರೆ ಅನಿಲ್ ಇಲ್ಲಿ ಕೆಲವೇ ವರ್ಷಗಳಲ್ಲಿ ಇದರಿಂದ ವಿಮುಖನಾಗಿ ಬೇರೆ ಕಡೆ ತನ್ನ ಆಸಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾನೆ. ನಿಜವಾಗಿಯೂ ಕೂಡ ಇದು ಆತ ಮಾಡಿರುವಂತಹ ದೊಡ್ಡ ತಪ್ಪಾಗಿದೆ. ಬರಬರುತ್ತ ಹೆಂಡತಿಯೊಂದಿಗೆ ಸುಖಾಸುಮ್ಮನೆ ಸಿಟ್ಟು ಮಾಡಿಕೊಳ್ಳುವುದು ಜಗಳ ಆಡಿಕೊಳ್ಳುವುದನ್ನು ಪ್ರಾರಂಭಿಸಿರುತ್ತಾರೆ. ಮೊದಮೊದಲಿಗೆ ರಾಜೇಶ್ವರಿ ಕೂಡ ಇದು ಮೂರರಲ್ಲಿ ಮತ್ತೊಂದು ಜಗಳ ಎನ್ನುವ ಹಾಗೆ ನಿರ್ಲಕ್ಷದಿಂದ ಸುಮ್ಮನೆ ಇದ್ದಳು. ಆದರೆ ಅನಿಲ್ ಸುಖಾಸುಮ್ಮನೆ ಯಾವುದೇ ಕಾರಣಗಳಿಲ್ಲದೇ ಇದ್ದರೂ ಕೂಡ ರಾಜೇಶ್ವರಿಯ ಮೇಲೆ ಸಿಡುಕುತ್ತಿದ್ದ.

ಇದು ಆಕೆ ಅನಿಲ್ ಮೇಲೆ ಒಲ್ಲದ ಗಂಡ ಮೊಸರಿನಲ್ಲಿ ಕಲ್ಲನ್ನು ಹುಡುಕುತ್ತಿದ್ದಾನೆ ಎನ್ನುವ ಅನುಮಾನವನ್ನು ಮೂಡಿಸುವಂತೆ ಮಾಡುತ್ತದೆ. ಒಮ್ಮೆ ಅನಿಲ್ ಮನೆಯಿಂದ ಹೊರ ನಡೆದು ಎಲ್ಲಿಗೆ ಹೋಗುತ್ತಿದ್ದಾನೆ ಎನ್ನುವುದನ್ನು ಅನುಮಾನ ದೃಷ್ಟಿಯಿಂದ ಆತನ ಹಿಂದೆ ಹೋಗಿ ನೋಡುತ್ತಾಳೆ. ಅನಿಲ್ ತನ್ನ ಪತ್ನಿ ರಾಜೇಶ್ವರಿ ಕೈಗೆ ಸಿಕ್ಕಿಹಾಕಿಕೊಳ್ಳಬಾರದ ಪರಿಸ್ಥಿತಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾನೆ.

ಹೌದು ಗೆಳೆಯರೇ ಅನಿಲ್ ಮನೆಯಿಂದ ಹೊರಬಿದ್ದ ತಾನೆ ಹೋಗಿದ್ದು ಬ್ಯಾಂಕ್ ಕಾಲೋನಿ ಏರಿಯಾದಲ್ಲಿರುವ ಒಂದು ಮನೆಗೆ. ತುಂಬಾ ಹೊತ್ತು ಕಳೆದರೂ ಕೂಡ ಅನಿಲ್ ಮನೆಯಿಂದ ಹೊರ ಬರಲಿಲ್ಲ. ಅದುವರೆಗೂ ಕೂಡ ರಾಜೇಶ್ವರಿ ಮನಸ್ಸಿನಲ್ಲಿ ನೆನಸಿಕೊಂಡಿದ್ದು ಯೋಚನೆಗಳು ಸುಳ್ಳಾಗಲಿ ಎಂಬುದಾಗಿ ಬೇಡಿಕೊಳ್ಳುತ್ತಿದ್ದಳು. ತದನಂತರ ಸ್ವಲ್ಪ ಹೊತ್ತಾದನಂತರ ಮನೆಗೆ ಹೋಗಿ ಬಾಗಿಲು ತಟ್ಟಿದಾಗ ಒಬ್ಬ ಮಹಿಳೆ ಬಾಗಿಲು ತೆಗೆಯುತ್ತಾಳೆ. ಆಕೆಯೊಂದಿಗೆ ಜಗಳ ಮಾಡಿಕೊಂಡು ರಾಜೇಶ್ವರಿ ಒಳಗೆ ಹೋದಾಗ ಗಂಡನನ್ನು ಕಾಣಬಾರದ ಸ್ಥಿತಿಯಲ್ಲಿ ಕಾಣುತ್ತಾಳೆ.

ಆತನನ್ನು ಕೂಡಲೇ ರಾಜೇಶ್ವರಿ ಹತ್ತಿರದಲ್ಲಿರುವ ಪೋಲಿಸ್ ಸ್ಟೇಷನ್ ಗೆ ದೂರನ್ನು ನೀಡಿ ಕಂಬಿಯ ಹಿಂದೆ ಹೋಗುವಂತೆ ಮಾಡುತ್ತಾಳೆ‌. ಮೂರು ನಿಮಿಷದ ಸುಖಕ್ಕಾಗಿ ತನ್ನ ನಂಬಿಕೊಂಡು ಮದುವೆಯಾಗಿದ್ದ ಹೆಂಡತಿಗೆ ಮೋಸ ಮಾಡಿದ್ದ ಅನಿಲ್ ಈಗ ತನ್ನ ಜೀವನವನ್ನೇ ಹಾಳು ಮಾಡಿಕೊಂಡು ಜೈಲಿನಲ್ಲಿದ್ದಾನೆ. ಕೇವಲ ಕ್ಷಣಿಕ ಸುಖಕ್ಕಾಗಿ ಬೇಡದ ಹಾದಿಯನ್ನು ಹಿಡಿಯುವ ಪುರುಷರಿಗೆ ಇದೊಂದು ಪಾಠವಾಗಿರಲಿದೆ.

ಇನ್ನು ಕೇವಲ ಅನಿಲ್ ಜೀವನ ಮಾತ್ರವಲ್ಲದೆ ಆ ಹೆಂಗಸಿನ ಜೀವನವು ಕೂಡ ಸಮಾಜದಲ್ಲಿ ಹಾಳಾಗಿ ಹೋಗಿರುತ್ತದೆ ಯಾಕೆಂದರೆ ಪರಪುರುಷನೊಂದಿಗೆ ಸಂಬಂಧವನ್ನು ಹೊಂದಿರುವ ಮಹಿಳೆಗೆ ಸಮಾಜದಲ್ಲಿ ಯಾವ ರೀತಿಯ ಬೆಲೆ ಇರುತ್ತದೆ ಎಂಬುದಾಗಿ ನಿಮಗೆ ತಿಳಿದಿರುತ್ತದೆ. ಈಗ ಸಿಕ್ಕಿಹಾಕಿಕೊಳ್ಳುವ ಮೂಲಕ ಸಮಾಜದಲ್ಲಿ ಆಕೆ ಕುರಿತಂತೆ ಇರುವಂತಹ ದೃಷ್ಟಿಕೋನ ಎಲ್ಲರಲ್ಲಿ ಬದಲಾಗಿರುತ್ತದೆ. ಹೀಗಾಗಿ ಇಂತಹ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೊದಲು ಇದರಿಂದ ಆಗುವ ಕೆಟ್ಟ ಪರಿಣಾಮಗಳನ್ನು ಕೂಡ ಯೋಚಿಸಿ ಈ ಕುರಿತಂತೆ ಯೋಚಿಸದೆ ಇರುವುದೇ ಒಳ್ಳೆಯದು. ಈ ವಿಚಾರದ ಕುರಿತು ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.