ಫಾರ್ಮ್ ಕಳೆದುಕೊಂಡಿರುವ ವಿರಾಟ್ ಕೊಹ್ಲಿ ರವರಿಗೆ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುವಂತೆ ಸಲಹೆ ನೀಡಿದ ವಾರ್ನರ್, ಕಾರಣವೇನಂತೆ ಗೊತ್ತೇ??

178

ನಮಸ್ಕಾರ ಸ್ನೇಹಿತರೇ ಈಗಾಗಲೇ ನಿಮಗೆ ತಿಳಿದಿರುವಂತೆ ನಮ್ಮೆಲ್ಲರ ನೆಚ್ಚಿನ ತಂಡವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡಿರುವ 11 ಪಂದ್ಯಗಳಲ್ಲಿ 6ರಲ್ಲಿ ಗೆದ್ದು ಐದರಲ್ಲಿ ಸೋತು 12 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ ನಲ್ಲಿ ನಾಲ್ಕನೇ ಸ್ಥಾನದಲ್ಲಿ. ಈ ಮೂಲಕ ತಮ್ಮ ಈ ಬಾರಿಯ ಪ್ಲೇಆಫ್ ಹಂತಕ್ಕೆ ತೇರ್ಗಡೆ ಆಗುವಂತಹ ಕನಸನ್ನು ಇನ್ನೂ ಜೀವಂತವಾಗಿಟ್ಟು ಕೊಂಡಿದೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರನಾಗಿರುವ ರನ್ ಮಿಷನ್ ಎಂದೇ ಬಿರುದಾಂಕಿತರಾಗಿ ರುವ ವಿರಾಟ್ ಕೊಹ್ಲಿ ರವರು ಈ ಸೀಸನ್ ನಲ್ಲಿ ಕೂಡ ನಿರೀಕ್ಷಿತ ಪ್ರದರ್ಶನವನ್ನು ನೀಡುತ್ತಿಲ್ಲ.

ಕೇವಲ ಆವರೇಜ್ 20ರ ಆಸುಪಾಸಿನಲ್ಲಿ ರನ್ಗಳನ್ನು ಗಳಿಸುತ್ತಿದ್ದಾರೆ. ನಿಜಕ್ಕೂ ಕೂಡ ರನ್ ಮಷೀನ್ ಎಂದು ಕರೆಸಿಕೊಳ್ಳುವ ವಿರಾಟ್ ಕೊಹ್ಲಿ ರವರ ಆಟ ಇದೆಲ್ಲ ಎನ್ನುವುದನ್ನು ಚಿಕ್ಕಮಕ್ಕಳು ಕೂಡ ಹೇಳುತ್ತಾರೆ. ಕೆಲವರು ವಿರಾಟ್ ಕೊಹ್ಲಿ ರವರ ಫಾರ್ಮ್ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಸೇರಿದಂತೆ ಸುದ್ದಿಮಾಧ್ಯಮಗಳಲ್ಲಿ ಟೀಕಾಪ್ರಹಾರವನ್ನು ಮಾಡುತ್ತಿದ್ದಾರೆ. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ಆಟಗಾರನ ಕಳಪೆ ಫಾರ್ಮ್ ಅನ್ನು ನೋಡಲಾರದೆ ದುಃಖಿಸುತ್ತಿದ್ದರು. ವಿಶ್ವಕಪ್ ಗು ಮುನ್ನ ವಿರಾಟ್ ಕೊಹ್ಲಿ ಅವರು ಫಾರ್ಮ್ ಗೆ ಮರಳ ಬೇಕಾಗಿರುವ ಅವಶ್ಯಕತೆ ತುಂಬಾನೇ ಇದೆ ಎಂದು ಹೇಳಬಹುದಾಗಿದೆ.

ಕಳೆದ ಎರಡರಿಂದ ಎರಡುವರೆ ವರ್ಷಗಳ ಅವಧಿಯಲ್ಲಿ ವಿರಾಟ್ ಕೊಹ್ಲಿ ಅವರು ಒಂದೇ ಒಂದು ಶತಕವನ್ನು ಕೂಡ ದಾಖಲಿಸಿಲ್ಲ ಎನ್ನುವುದು ಕೂಡ ಇಲ್ಲಿ ನಾವು ಗಮನಿಸಬೇಕಾಗಿದೆ. ವಿರಾಟ್ ಕೊಹ್ಲಿ ರವರ ಕುರಿತಂತೆ ವಿದೇಶಿ ಆಟಗಾರ ಆಗಿರುವ ಡೇವಿಡ್ ವಾರ್ನರ್ ಅವರು ಕೂಡ ಮಾತನಾಡಿದ್ದಾರೆ. ಪ್ರತಿಯೊಬ್ಬ ಕ್ರಿಕೆಟಿಗನ ಜೀವನದಲ್ಲಿ ಕೂಡ ಇಂತಹ ಕಳಪೆ ಫಾರ್ಮ್ ಫೇಸ್ ಬರುತ್ತದೆ ಆದರೆ ಅದನ್ನು ನಾವು ಎದುರಿಸಿ ನಿಲ್ಲಬೇಕು, ಇನ್ನು ಒಂದೆರಡು ಮಕ್ಕಳನ್ನು ಹೊಂದಿ ಜೀವನವನ್ನು ಆನಂದಿಸಿ ಎಂಬುದಾಗಿ ಹೇಳಿದ್ದಾರೆ. ಫಾರ್ಮ್ ಇಸ್ ಟೆಂಪರ್ವರಿ ಕ್ಲಾಸ್ ಇಸ್ ಪರ್ಮನೆಂಟ್ ಎಂಬುದಾಗಿ ವಿರಾಟ್ ಕೊಹ್ಲಿ ರವರಿಗೆ ಧೈರ್ಯವನ್ನು ತುಂಬಿ ಹೊಗಳಿದ್ದಾರೆ. ಹೀಗೆ ಹೇಳುತ್ತ ಡೇವಿಡ್ ವಾರ್ನರ್ ರವರು ವಿರಾಟ್ ಕೊಹ್ಲಿ ರವರಿಗೆ ಆಟದ ಮೂಲಭೂತ ಅಂಶಗಳಿಗೆ ಅಂಟಿಕೊಳ್ಳಿ ಖಂಡಿತವಾಗಿ ನೀವು ಮತ್ತೆ ಫಾರ್ಮಿಗೆ ವಾಪಸ್ ಆಗುತ್ತೀರಿ ಎಂದು ಟಿಪ್ಸ್ ನೀಡಿದ್ದಾರೆ.