ತನ್ನ ಹುಟ್ಟುಹಬ್ಬದ ದಿನವೇ ಅಪ್ಪು ಚಿಕ್ಕ ಮಗಳು ವಂದಿತಾ ರವರು ಎಂತಹ ಕೆಲಸ ಮಾಡಿದ್ದಾರೆ ಗೊತ್ತೇ??

83

ಜನ್ಮದಿನದಂದು ಪುನೀತ್ ರಾಜಕುಮಾರ್ ರವರ ಕಿರಿಯ ಮಗಳು ವಂದಿತ ಮಾಡಿದ್ದೇನು ಗೊತ್ತಾ??
ನಮಸ್ಕಾರ ಸ್ನೇಹಿತರೇ ಅಪ್ಪು ಅವರು ನಮ್ಮನ್ನೆಲ್ಲಾ ಅಗಲಿ ಈಗಾಗಲೇ ಏಳು ತಿಂಗಳಿಗೂ ಅಧಿಕ ಸಮಯ ಕಳೆದಿದ್ದರೂ ಕೂಡ ನಿಜಕ್ಕೂ ಇಂದಿಗೂ ಎಲ್ಲರ ಮನಸ್ಸಿನಲ್ಲಿ ಅಜರಾಮರರಾಗಿ ನವನವೀನವಾಗಿ ಉಳಿದುಕೊಂಡಿದ್ದಾರೆ. ದೇವರು ಅವರಿಗೆ ಸ್ವಲ್ಪವಾದರೂ ಸಮಯ ನೀಡಬೇಕಿತ್ತು ಎನ್ನುವುದಾಗಿ ಎಲ್ಲರೂ ಕೂಡ ಪ್ರತಿದಿನ ಎದ್ದು ಬೇಡಿಕೊಳ್ಳುತ್ತಿದ್ದಾರೆ. ಅಷ್ಟರಮಟ್ಟಿಗೆ ಕನ್ನಡಿಗರ ಮನೆ-ಮನದಲ್ಲಿ ಮನೆ ಮಗನಾಗಿ ಉಳಿದುಕೊಂಡಿದ್ದರು. ಹಣವನ್ನು ಸಂಪಾದಿಸುವುದು ಮುಖ್ಯವಲ್ಲ ಜನರನ್ನು ಸಂಪಾದಿಸುವುದು ಮುಖ್ಯ ಎನ್ನುವುದನ್ನು ನಾಡಿಗೆ ಸಾಬೀತುಪಡಿಸಿ ಹೋದವರು ನಮ್ಮೆಲ್ಲರ ನೆಚ್ಚಿನ ರಾಜರತ್ನ.

ಅಪ್ಪು ರವರನ್ನು ಕೊನೆಯ ಬಾರಿಗೆ ನೋಡು 25 ಲಕ್ಷಕ್ಕೂ ಅಧಿಕ ಜನರು ಕಂಠೀರವ ಸ್ಟುಡಿಯೋಗೆ ಅವರ ಪಾರ್ಥಿವ ಶರೀರವನ್ನು ನೋಡಲು ಬಂದಿದ್ದರು ಎಂಬುದು ನಮಗೆಲ್ಲ ತಿಳಿದಿದೆ. ಇದೇ ಅವರು ಕರ್ನಾಟಕ ರಾಜ್ಯದಲ್ಲಿ ತಮ್ಮ ನಟನೆ ಹಾಗೂ ಸಾಮಾಜಿಕ ಕಾರ್ಯಗಳ ಮೂಲಕ ಪಡೆದಿರುವಂತಹ ಸಂಪಾದನೆ ಎಂದರೆ ತಪ್ಪಾಗಲಾರದು. ಇಲ್ಲಿಗೂ ಕೂಡ ಅವರು ಮಾಡಿರುವಂತಹ ಒಳ್ಳೆಯ ಕೆಲಸಗಳಿಂದಾಗಿ ನಮ್ಮ ಮನಸ್ಸಿನಲ್ಲಿ ಜೀವಂತವಾಗಿ ಉಳಿದುಕೊಂಡಿದ್ದಾರೆ. ಸೂರ್ಯ ಚಂದ್ರ ಇರುವವರೆಗೂ ಕೂಡ ಅವರ ಹೆಸರು ಅಜರಾಮರ.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಹೊಸ ಪ್ರತಿಭೆಗಳಿಗೆ ಒಂದೊಳ್ಳೆ ಉತ್ತಮ ವೇದಿಕೆಯನ್ನು ನೀಡುವ ಸಲುವಾಗಿಯೇ ತಮ್ಮ ಹೋಮ್ ಬ್ಯಾನರ್ ಆಗಿರುವ ಪಿಆರ್ ಕೆ ಪ್ರೊಡಕ್ಷನ್ಸ್ ಸಂಸ್ಥೆಯನ್ನು ನಿರ್ಮಿಸಿದ್ದರು. ಈ ಸಂಸ್ಥೆಯಿಂದ ನಿರ್ಮಾಣ ಮಾಡಿದಂತಹ ಸಿನಿಮಾಗಳೆಲ್ಲವೂ ಕೂಡ ಹೊಸಬರಿಗಾಗಿ ಮಾಡಿದ್ದು. ತಾವೇ ತಮ್ಮ ಹೋಮ್ ಬ್ಯಾನರ್ ಸಿನಿಮಾಗಳಲ್ಲಿ ನಟಿಸಿ ಹಣವನ್ನು ಮಾಡಬಹುದಾಗಿತ್ತು. ಆದರೆ ಹಾಗೆ ಮಾಡದೆ ಹಣ ಹೋದರೂ ಪರವಾಗಿಲ್ಲ ಹೊಸ ಪ್ರತಿಭೆಗಳ ಕ್ರಿಯೇಟಿವಿಟಿ ಎನ್ನುವುದು ಪ್ರೇಕ್ಷಕರಿಗೆ ತಲುಪಬೇಕು ಎನ್ನುವ ದೃಷ್ಟಿಯಲ್ಲಿ ತಮ್ಮ ಹೋಮ್ ಬ್ಯಾನರ್ ನಲ್ಲಿ ಉತ್ತಮ ಸದಭಿರುಚಿಯ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾರೆ. ಈಗ ಪುನೀತ್ ರಾಜಕುಮಾರ್ ರವರ ಈ ಜವಾಬ್ದಾರಿಯನ್ನು ಅವರ ಪತ್ನಿಯಾಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ರವರ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಇಬ್ಬರು ಕೂಡ ಪ್ರೀತಿಸಿ ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾದವರು. ಇವರಿಬ್ಬರ ಪ್ರೀತಿಯ ಫಲವಾಗಿಯೇ ಇಬ್ಬರು ಹೆಣ್ಣುಮಕ್ಕಳು ಜನಿಸುತ್ತಾರೆ. ಹೌದು ಗೆಳೆಯರೇ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಇಬ್ಬರು ಹೆಣ್ಣು ಮಕ್ಕಳ ಹೆಸರು ದೃತಿ ಹಾಗೂ ವಂದಿತ ಎನ್ನುವುದಾಗಿ. ದೃತಿ ರವರು ನಿಮಗೆಲ್ಲರಿಗೂ ತಿಳಿದಿರುವಂತೆ ವಿದೇಶದಲ್ಲಿ ವ್ಯಾಸಂಗವನ್ನು ಮಾಡುತ್ತಿದ್ದಾರೆ. ಇನ್ನು ವಂದಿತ ಅವರು ಇಲ್ಲೇ ಬೆಂಗಳೂರಿನಲ್ಲಿಯೇ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇನ್ನು ಏಪ್ರಿಲ್ 29ರಂದು ವಂದಿತ ತಮ್ಮ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಾರೆ.

ಪ್ರತಿವರ್ಷ ಅವರ ಅಪ್ಪ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ ಮಗಳ ಜನ್ಮ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸುತ್ತಿದ್ದರು ಆದರೆ ಈ ವರ್ಷ ಮಗಳ ಹುಟ್ಟು ಹಬ್ಬವನ್ನು ಆಚರಿಸಲು ತಂದೆಯೇ ಇಲ್ಲ. ನಿಜಕ್ಕೂ ಕೂಡ ಇದು ವಿಷಾದನೀಯ ವಿಚಾರವಾಗಿದೆ. ಅಭಿಮಾನಿಗಳಾದ ನಮಗೆ ಇಷ್ಟೊಂದು ದುಃಖವಾಗುತ್ತಿದೆ ಎಂದರೆ ಇನ್ನೂ ವಂದಿತ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ರವರು ಯಾವ ಮಟ್ಟಿಗೆ ದುಃಖವನ್ನು ಪಡುತ್ತಿರಬಹುದು ನೀವು ಅಂದಾಜು ಮಾಡಿಕೊಳ್ಳಿ.

ಇನ್ನು ಏಪ್ರಿಲ್ 29ರಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಆರನೇ ತಿಂಗಳಿನ ಪುಣ್ಯಸ್ಮರಣೆ ಇದ್ದ ಕಾರಣದಿಂದಾಗಿ ವಂದಿತ ಪುನೀತ್ ರಾಜಕುಮಾರ್ ಅವರು ತಮ್ಮ ದೊಡ್ಡಪ್ಪ ರಾಘವೇಂದ್ರ ರಾಜಕುಮಾರ್ ಹಾಗೂ ತಾಯಿ ಅಶ್ವಿನಿ ಪುನೀತ್ ರಾಜಕುಮಾರ್ ರವರ ಜೊತೆಗೆ ಬಂದು ತಂದೆಯ ಸಮಾಧಿಗೆ ಪೂಜೆ ಸಲ್ಲಿಸಿ ಅರ್ಥಪೂರ್ಣವಾಗಿ ತಮ್ಮ ತಂದೆ ಸಮಾಧಿ ಬಳಿ ದಿನವನ್ನು ಕಳೆಯುತ್ತಾರೆ. ಆದರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ತಮ್ಮ ತಂದೆ ಇಲ್ಲದೆ ಜನ್ಮ ದಿನವನ್ನು ಆಚರಿಸಿ ಕೊಳ್ಳಬೇಕಾಗುತ್ತದೆ ಎನ್ನುವುದನ್ನು ಅವರು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದಾಗಿ ನಾವು ಹೇಳಬಹುದಾಗಿದೆ.