ಶಿವರಾಜ್ ಕುಮಾರ್ ರವರಿಗೆ ಪರಭಾಷೆಯಿಂದ ಹುಡುಕಿಕೊಂಡು ಬಂದ ಆಫರ್, ಸ್ಟಾರ್ ನಟನ ಜೊತೆ ಸಿನೆಮಾ ಒಪ್ಪಿಕೊಳ್ಳುತ್ತಾರೆ ಶಿವಣ್ಣ, ಯಾರು ಗೊತ್ತೇ ಆ ಸ್ಟಾರ್ ನಟ??

124

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಶಿವಣ್ಣ ವಯಸ್ಸು ಐವತ್ತು ದಾಟಿದ್ದರು ಕೂಡ 25ರ ಹರೆಯದ ಯುವಕನಂತೆ ಕಾಣಿಸಿಕೊಳ್ಳುತ್ತಿದ್ದಾರೆ. ನಿಜಕ್ಕೂ ಕೂಡ ಅವರು ಕನ್ನಡ ಚಿತ್ರರಂಗದ ಆಸ್ತಿ ಎಂದರೆ ತಪ್ಪಾಗಲಾರದು. ಇನ್ನು ಶಿವಣ್ಣ ಇಷ್ಟೊಂದು ಜನಪ್ರಿಯತೆ ಇದ್ದರೂ ಕೂಡ ಪರಭಾಷೆಗಳಲ್ಲಿ ಸಾಕಷ್ಟು ಸ್ನೇಹಿತರು ಇದ್ದರೂ ಕೂಡ ಪರಭಾಷೆಯ ಅಷ್ಟೊಂದು ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಕಳೆದ 35 ವರ್ಷಗಳಿಂದಲೂ ಕೂಡ ಶಿವಣ್ಣನವರು ಕನ್ನಡ ಚಿತ್ರರಂಗದಲ್ಲಿ ಹಲವಾರು ವಿಭಿನ್ನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಕಲಾದೇವಿಯ ಆರಾಧನೆ ಮಾಡಿದ್ದಾರೆ ಎಂದರೆ ತಪ್ಪಾಗಲಾರದು.

ಇನ್ನು ಚಿತ್ರರಂಗದಲ್ಲಿ ಇಡಲಾಗಿ ಕೂಡ ಕನ್ನಡ ಚಿತ್ರರಂಗವನ್ನು ಮುನ್ನಡೆಸುತ್ತಿದ್ದಾರೆ. ಇನ್ನು ಸದ್ಯಕ್ಕೆ ಶಿವಣ್ಣ ನಟನೆಯ ಬೈರಾಗಿ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಮಾಡುತ್ತಿದೆ. ಆದರೆ ಶಿವಣ್ಣನವರ ಕುರಿತಂತೆ ಇನ್ನೊಂದು ವಿಚಾರ ಈಗ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದೆ. ಅದೇನೆಂದರೆ ಶಿವಣ್ಣನವರು ಸೂಪರ್ ಸ್ಟಾರ್ ರಜನಿಕಾಂತ್ ರವರ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ. ಈ ಕುರಿತಂತೆ ನಿಮಗೆ ಇನ್ನಷ್ಟು ವಿವರವಾಗಿ ಹೇಳುತ್ತೇವೆ ಬನ್ನಿ ಗೆಳೆಯರೇ.

ಹೌದು ಗೆಳೆಯರೇ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಹಾಗೂ ಶಿವಣ್ಣನವರ ಆತ್ಮೀಯರಾಗಿರುವ ಸೂಪರ್ ಸ್ಟಾರ್ ರಜನಿಕಾಂತ್ ರವರ 169ನೇ ಸಿನಿಮಾಗಾಗಿ ಶಿವಣ್ಣನವರನ್ನು ಪ್ರಮುಖ ಪಾತ್ರ ನಿರ್ವಹಿಸಲು ಚಿತ್ರತಂಡ ಅಪ್ರೋಚ್ ಮಾಡಲು ಸಿದ್ಧವಾಗಿದೆ ಎಂಬುದಾಗಿ ತಿಳಿದುಬಂದಿದೆ. ಈ ಚಿತ್ರವನ್ನು ಇತ್ತೀಚಿಗಷ್ಟೇ ತಲಪತಿ ವಿಜಯ್ ನಟನೆಯ ಬೀಸ್ಟ್ ಸಿನಿಮಾವನ್ನು ನಿರ್ದೇಶಿಸಿರುವ ನೆಲ್ಸನ್ ರವರು ನಿರ್ದೇಶಿಸುತ್ತಿದ್ದಾರೆ. ಅತಿಶೀಘ್ರದಲ್ಲೇ ಬೆಂಗಳೂರಿಗೆ ಶಿವಣ್ಣನವರನ್ನು ಭೇಟಿಯಾಗಿ ಈ ಚಿತ್ರದ ಕುರಿತಂತೆ ಸಂಪೂರ್ಣ ಮಾತುಕತೆ ನಡೆಸಲು ನಿರ್ದೇಶಕರು ಅತಿ ಶೀಘ್ರದಲ್ಲೇ ಬೆಂಗಳೂರಿಗೆ ಬರಲಿದ್ದಾರೆ ಎಂಬ ಸುದ್ದಿಗಳು ಕೂಡ ಈಗಾಗಲೇ ಅಧಿಕೃತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಶಿವಣ್ಣ ಹಾಗೂ ರಜನಿಕಾಂತ್ ಅವರು ಒಂದೇ ಪ್ರೇಮ್ ನಲ್ಲಿ ಕಾಣಿಸಿಕೊಳ್ಳುತ್ತಾರಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.