ಸತತ 8 ವರ್ಷಗಳಿಂದ ಹೈದ್ರಾಬಾದ್ ತಂಡದಲ್ಲಿ ಆಟವಾಡಿದ್ದ ಡೇವಿಡ್ ವಾರ್ನರ್ ಇದೀಗ ಹಳೆಯ ತಂಡ ಹೈದ್ರಾಬಾದ್ ಬಗ್ಗೆ ಹೇಳಿದ್ದು ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವಿದೇಶಿ ಕ್ರಿಕೆಟಿಗರಲ್ಲಿ ಐಪಿಎಲ್ ನಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿರುವ ಆಟಗಾರ ಎಂದರೆ ಅದು ನಿಸ್ಸಂಶಯವಾಗಿ ಡೇವಿಡ್ ವಾರ್ನರ್ ಎಂದು ಹೇಳಬಹುದಾಗಿದೆ. ಹೌದು ಗೆಳೆಯ ಡೇವಿಡ್ ವಾರ್ನರ್ ಅವರಷ್ಟು ಐಪಿಎಲ್ ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿರುವ ಮತ್ತೊಬ್ಬ ವಿದೇಶಿ ಆಟಗಾರನಿಲ್ಲ ಎಂದು ಹೇಳಬಹುದಾಗಿದೆ. ಇನ್ನು ನಿಮಗೆ ತಿಳಿದಿರುವಂತೆ 2015 ರಿಂದ ಕಳೆದ ವರ್ಷದವರೆಗೂ ಕೂಡ ಡೇವಿಡ್ ವಾರ್ನರ್ ರವರು ಸನ್ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಆಟಗಾರನಾಗಿ ಹಾಗೂ ನಾಯಕನಾಗಿ ಕಾಣಿಸಿಕೊಂಡಿದ್ದರು.
ಡೇವಿಡ್ ವಾರ್ನರ್ ಅವರ ನಾಯಕತ್ವದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ 2016 ರಲ್ಲಿ ಫೈನಲ್ ಪಂದ್ಯದಲ್ಲಿ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿ ಕಪ್ ಕೂಡ ಗೆದ್ದಿತ್ತು. ಆದರೆ ಕಳೆದ ಒಂದು ವರ್ಷದ ಕಳಪೆ ಪರ್ಫಾರ್ಮೆನ್ಸ್ ನಿಂದಾಗಿ ಡೇವಿಡ್ ವಾರ್ನರ್ ರವರು ತಂಡಕ್ಕೆ ನೀಡಿರುವ ಕೊಡುಗೆಯನ್ನು ಮರೆತು ಸನ್ರೈಸರ್ಸ್ ಹೈದರಾಬಾದ್ ತಂಡ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ತಂಡದಿಂದ ಹೊರಹಾಕಿ ಬೆಂಚ್ ಮಾಡಿತ್ತು. ಇನ್ನು ಈ ಬಾರಿಯ ಮೆಗಾ ಹರಾಜಿಗೂ ಮುನ್ನ ತಂಡದಿಂದ ಕೈಬಿಟ್ಟಿತ್ತು. ಈ ಬಾರಿ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಡೇವಿಡ್ ವಾರ್ನರ್ ಅವರನ್ನು 6 ಕೋಟಿ ರೂಪಾಯಿ ಖರೀದಿಸಿತ್ತು.

ಐಪಿಎಲ್ ಪ್ರಾರಂಭವಾದಾಗ ಮೊದಲು ಕೂಡ ಡೇವಿಡ್ ವಾರ್ನರ್ ರವರು ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರವಾಗಿ ಹಾಡುತ್ತಿದ್ದರೆ ಹೀಗಾಗಿ ತಮ್ಮ ಮೂಲ ತಂಡಕ್ಕೆ ವಾಪಸಾಗಿದ್ದಾರೆ ಎಂದು ಹೇಳಬಹುದಾಗಿದೆ. ಇಂದಿನ ಪಂದ್ಯದಲ್ಲಿ ಡೇವಿಡ್ ವಾರ್ನರ್ ಅವರು ತಮ್ಮ ಮಾಜಿ ತಂಡವಾಗಿರುವ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಮೊದಲ ಬಾರಿಗೆ ಆಡಲಿದ್ದಾರೆ. ಹೀಗಾಗಿ ಇಂದಿನ ಪಂದ್ಯ ಒಂದು ವಿಚಾರದಲ್ಲಿ ಮಹತ್ವವನ್ನು ಪಡೆದಿದೆ ಎಂದರೆ ತಪ್ಪಾಗಲಾರದು. ಈಗಾಗಲೇ ಡೆಲ್ಲಿಯ ಪರವಾಗಿ ಡೇವಿಡ್ ವಾರ್ನರ್ ಅವರು ಮೂರು ಅರ್ಧಶತಕಗಳನ್ನು ಈ ಬಾರಿಯ ಸೀಸನ್ ನಲ್ಲಿ ದಾಖಲಿಸಿದ್ದಾರೆ. ಇನ್ನು ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಹಾಡುವ ಕುರಿತಂತೆ ಡೇವಿಡ್ ವಾರ್ನರ್ ಅವರನ್ನು ಸಂದರ್ಶಕರು ಕೇಳಿದಾಗ ಬೇರೆ ತಂಡಗಳ ಹಾಗೆ ಇದು ಕೂಡ ನನಗೆ ಮತ್ತೊಂದು ತಂಡ ಅಷ್ಟೇ ಇದರಲ್ಲಿ ಏನು ವಿಶೇಷತೆ ಇಲ್ಲ ಎಂಬುದಾಗಿ ಹೇಳಿದ್ದಾರೆ.