ನಟನೆಗೆ ಗುಡ್ ಬೈ ಹೇಳಲು ಮುಂದಾದರೇ ಸೌತ್ ಚೆಲುವೆ ಸಾಯಿ ಪಲ್ಲವಿ, ಅದಕ್ಕೆ ಕಾರಣವೇನಂತೆ ಗೊತ್ತೇ?? ಅಭಿಮಾನಿಗಳಿಗೆ ಕೊಂಚ ಸಿಹಿ ಕೊಂಚ ಕಹಿ. ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಯಾವುದೇ ವಿವಾದಗಳಿಲ್ಲ ಅಥವಾ ಅತಿಯಾದ ಹೈಡ್ರಾಮಾ ಗಳಿಲ್ಲದೆ ಈಗಾಗಲೇ ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ತನ್ನ ದೊಡ್ಡಮಟ್ಟದ ಅಭಿಮಾನಿಗಳನ್ನು ಹೊಂದಿರುವ ಅತ್ಯಂತ ಬಹುಬೇಡಿಕೆ ನಟಿಯೆಂದರೆ ಅದು ಸಾಯಿಪಲ್ಲವಿ ಎಂದರೆ ತಪ್ಪಾಗಲಾರದು. ಸಾಯಿ ಪಲ್ಲವಿ ಅವರು ಈಗಾಗಲೇ ಮಲಯಾಳಂ ಸಿನಿಮಾರಂಗದಿಂದ ತಮ್ಮ ನಟನೆಯನ್ನು ಪ್ರಾರಂಭಿಸಿ ತಮಿಳು ಹಾಗೂ ತೆಲುಗು ಚಿತ್ರರಂಗಗಳಲ್ಲಿ ಕೂಡ ದೊಡ್ಡ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಯಾವುದೇ ಅತಿಯಾದ ಮೇಕಪ್ ಇಲ್ಲದೆ ನ್ಯಾಚುರಲ್ ನಟನೆಯ ಮೂಲಕ ಈಗಾಗಲೇ ಕೋಟ್ಯಂತರ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ರಾಣಿಯಂತೆ ಮರೆಯುತ್ತಿದ್ದಾರೆ ಎಂದು ಹೇಳಬಹುದಾಗಿದೆ.
ಅದರಲ್ಲೂ ಸಾಯಿ ಪಲ್ಲವಿ ಅವರ ನೃತ್ಯವನ್ನು ನೋಡಲು ಒಂದು ದೊಡ್ಡ ಅಭಿಮಾನಿ ಬಳಗವೇ ಇದೆ ಎಂದು ಹೇಳಬಹುದಾಗಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಸಾಯಿ ಪಲ್ಲವಿ ಅವರು ಯಾವ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ ಯಾವ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಕೂಡ ಆಗುತ್ತಿಲ್ಲ. ತೆಲುಗು ನಟ ನಾನಿ ರವರ ಜೊತೆಗೆ ನಟಿಸಿರುವ ಶಾಮ ಸಿಂಗರಾಯ ಅವರ ಕೊನೆಯ ಸಿನಿಮಾವಾಗಿತ್ತು. ಇದಕ್ಕೆ ನಿಜವಾದ ಕಾರಣ ಏನು ಎಂಬುದು ಇದು ತಿಳಿದುಬಂದಿದೆ. ಹೌದು ಗೆಳೆಯರೇ ಕೋಟ್ಯಾಂತರ ಹುಡುಗರ ಮನಸ್ಸಿನ ರಾಣಿ ಯಾಗಿರುವ ಸಾಯಿ ಪಲ್ಲವಿ ಅವರು ಮದುವೆ ಆಗಲು ಹೊರಟಿದ್ದಾರೆ.

ಈ ಹಿಂದೆ ಸಾಯಿಪಲ್ಲವಿ ಅವರು ಮದುವೆಯಾಗಲು ನನಗೆ ಇಷ್ಟವಿಲ್ಲ ಮದುವೆಯಾದ ನಂತರ ನನ್ನ ಪೋಷಕರನ್ನು ಬಿಟ್ಟು ಹೋಗಲು ಇಷ್ಟವಿಲ್ಲ ಎಂಬುದಾಗಿ ಹೇಳಿಕೊಂಡಿದ್ದರು. ಆದರೆ ಈಗ ಅವರು ಪ್ರೀತಿಸಿ ಮದುವೆಯಾಗುತ್ತಿರುವುದನ್ನು ಬದಲಾಗಿ ಮನೆಯವರೇ ಹುಡುಗನನ್ನು ಹುಡುಕಿ ಮದುವೆ ಮಾಡಿಸುತ್ತಿರುವುದು. ಇದುವರೆಗೂ ಹುಡುಗ ಯಾರು ಎನ್ನುವುದನ್ನು ಘೋಷಿಸಿಲ್ಲ. ಒಟ್ಟಾರೆಯಾಗಿ ತೆರೆಮರೆಯಲ್ಲಿ ಸಾಯಿಪಲ್ಲವಿ ಅವರ ಮದುವೆಗೆ ಎಲ್ಲಾ ತಯಾರಿಗಳು ನಡೆಯುತ್ತಿರುವುದಂತೂ ನಿಜ. ಮುಂದಿನ ದಿನಗಳಲ್ಲಿ ಸಾಯಿ ಪಲ್ಲವಿ ಅವರನ್ನು ಕೈಹಿಡಿಯುತ್ತಿರುವ ಆ ಅದೃಷ್ಟವಂತ ಯಾರು ಎಂಬುದನ್ನು ಕಾದುನೋಡಬೇಕಾಗಿದೆ.