ಕೆಜಿಎಫ್ ಇಡೀ ಭಾರತದಲ್ಲಿ ಯಶಸ್ಸು ಕಂಡು ದಾಖಲೆ ಮಾಡಲು ಫೌಂಡೇಷನ್ ಹಾಕಿದ್ದು ನಾನೇ ಎಂದ ರವಿಚಂದ್ರನ್, ಹೀಗೆ ಹೇಳಿದ್ದು ಯಾಕೆ ಗೊತ್ತೇ??

109

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರ ಇರುವಂತಹ ಎಲ್ಲಾ ದಾಖಲೆಗಳನ್ನು ಮುರಿದು ಹೊಸ ಇತಿಹಾಸವನ್ನು ನಿರ್ಮಾಣ ಮಾಡಿದೆ ಎಂದರೆ ಅತಿಶಯೋಕ್ತಿಯಲ್ಲ. ನಿಜಕ್ಕೂ ಕೂಡ ಹತ್ತಾರು ವರ್ಷಗಳ ಕನ್ನಡಿಗರ ಕನಸು ಈಗ ನನಸಾಗಿದೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಕೆಜಿಎಫ್ ಹಾಗೂ ಕೆಜಿಎಫ್ ಚಾಪ್ಟರ್ 2 ಸರಣಿ ಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ ಕನ್ನಡ ಚಿತ್ರರಂಗದ ಸ್ಥಾನಮಾನವನ್ನು ಹತ್ತುಪಟ್ಟು ಹೆಚ್ಚು ಮಾಡಿದೆ ಎಂದರೆ ನಿಜಕ್ಕೂ ಕೂಡ ತಪ್ಪಾಗಲಾರದು.

ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ರವರ ದೂರದೃಷ್ಟಿಯನ್ನು ವುದು ಕನ್ನಡ ಚಿತ್ರರಂಗದ ಬೆಳವಣಿಗೆಗೆ ಸಾಕಾರವಾಯಿತು ಎಂದರೆ ತಪ್ಪಾಗಲಾರದು. ಇನ್ನು ಈಗಾಗಲೇ ವರ್ಲ್ಡ್ ವೈಡ್ ಕಲೆಕ್ಷನ್ ನಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರ ಈಗಾಗಲೇ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ 1500 ಕೋಟಿ ಯತ್ತ ಮುನ್ನುಗ್ಗುತ್ತಿದ್ದು ಖಂಡಿತವಾಗಿ ಅತಿಶೀಘ್ರದಲ್ಲೇ ಈ ದಾಖಲೆಯನ್ನು ಕೂಡ ಮುರಿಯಲಿದೆ. ಇನ್ನು ಕನ್ನಡ ಚಿತ್ರರಂಗದಲ್ಲಿ ಹಲವಾರು ಪ್ಯಾನ್ ಇಂಡಿಯಾ ಸಿನಿಮಾಗಳು ಬಂದರೂ ಕೂಡ ಕೆಜಿಎಫ್ ಸರಣಿ ಚಿತ್ರಗಳು ಎಷ್ಟು ದೊಡ್ಡಮಟ್ಟದಲ್ಲಿ ವಿಜಯ ಸಾಧಿಸಿದ ಚಿತ್ರಗಳು ಇದುವರೆಗೂ ಕೂಡ ಯಾವುದು ಬಂದಿಲ್ಲ.

ಇನ್ನು ಇತ್ತೀಚಿಗಷ್ಟೇ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರವಿಚಂದ್ರನ್ ರವರು ಕೆಜಿಎಫ್ ಗೆಲುವಿಗೆ ಫೌಂಡೇಶನ್ ಹಾಕಿದ್ದು ನಾನೇ ಎಂಬುದಾಗಿ ಮಾತನಾಡಿದ್ದಾರೆ. ಅಷ್ಟಕ್ಕೂ ಈ ಒಗಟಿನ ಮಾತಿನ ಅರ್ಥವೇನು ಎಂಬುದನ್ನು ತಿಳಿದುಕೊಳ್ಳೋಣ. ಹೌದು ಗೆಳೆಯರೇ ಆ ಫೌಂಡೇಶನ್ ಬೇರೆ ಏನು ಅಲ್ಲ ಅವರ 1991 ರಲ್ಲಿ ಬಿಡುಗಡೆಯಾದ ಶಾಂತಿಕ್ರಾಂತಿ ಸಿನಿಮಾ. ಹೌದು ಗೆಳೆಯರೆ ಶಾಂತಿಕ್ರಾಂತಿ ಸಿನಿಮಾ ಕೂಡ ಕನ್ನಡ ತಮಿಳು ತೆಲುಗು ಹಿಂದಿ ಭಾಷೆಗಳಲ್ಲಿ ಡಬ್ ಆಗಿ ಏಕಕಾಲದಲ್ಲಿ ಬಿಡುಗಡೆಯಾಗಿತ್ತು ಆದರೆ ಕೂಡ ನಿರೀಕ್ಷಿತ ಮಟ್ಟದಲ್ಲಿ ಬಾಕ್ಸಾಫೀಸ್ ನಲ್ಲಿ ಗೆಲುವನ್ನು ಕಾಣಲಿಲ್ಲ. ಆದರೆ ಅಂದಿನ ಕಾಲದಲ್ಲಿ ಶಾಂತಿಕ್ರಾಂತಿ ಸಿನಿಮಾ ಕ್ರೇಜಿಸ್ಟಾರ್ ರವಿಚಂದ್ರನ್ ರವರಿಗೆ ದೊಡ್ಡಮಟ್ಟದ ಹೆಸರನ್ನಂತೂ ಸಂಪಾದಿಸಿಕೊಟ್ಟಿತ್ತು. ಇದನ್ನೇ ಕಾರ್ಯಕ್ರಮದಲ್ಲಿ ರವಿಚಂದ್ರನ್ ರವರು ಹೇಳಿದ್ದು. ಇದೇ ದಾರಿಯಲ್ಲಿ ಬಂದಂತಹ ಕೆಜಿಎಫ್ ಸರಣಿ ಚಿತ್ರಗಳು ದೊಡ್ಡಮಟ್ಟದಲ್ಲಿ ಈಗ ಯಶಸ್ಸನ್ನು ಸಂಪಾದಿಸಿವೆ.