ಚಿರು ಸರ್ಜಾ ರವರ ಕೊನೆಯ ಸಿನಿಮಾದಲ್ಲಿ ಧ್ವನಿ ನೀಡಿರುವುದು ಕೇವಲ ಧ್ರುವ ಸರ್ಜಾ ಅಲ್ಲಾ, ಮತ್ಯಾರು ಗೊತ್ತೇ?? ಆ ಟಾಪ್ ನಟ ಯಾರು ಗೊತ್ತೇ??

21

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮೊದಲಾದ ಸಂದರ್ಭದಲ್ಲಿ ಕೇಳಿ ಬಂದಂತಹ ಅತ್ಯಂತ ಕಹಿ ಘಟನೆಯ ಸುದ್ದಿ ಎಂದರೆ ಅದು ಚಿರುಸರ್ಜ ರವರ ಅಕಾಲಿಕ ಮರಣದ ಸುದ್ದಿ. ಈ ಸುದ್ದಿಯನ್ನು ಮೊದಲು ಯಾರು ಕೂಡ ನಂಬಲಾರದಷ್ಟು ಆಶ್ಚರ್ಯವನ್ನು ತಂದಿತ್ತು. ಆದರೆ ದೈಹಿಕವಾಗಿ ಚಿರುಸರ್ಜ ಇನ್ನು ನಮ್ಮೊಂದಿಗೆ ಇಲ್ಲ ಎನ್ನುವುದನ್ನು ನಾವೆಲ್ಲರೂ ಕೂಡ ಒಪ್ಪಿಕೊಳ್ಳಲೇಬೇಕಾಗಿರುವಂತಹ ಕಟು ಸತ್ಯವಾಗಿದೆ. ಪ್ರೀತಿಸಿ ಮದುವೆಯಾದ ಕೆಲವೇ ವರ್ಷಗಳಲ್ಲಿ ತಮ್ಮ ಮುದ್ದಿನ ಪತಿಯನ್ನು ಮೇಘನರಾಜ್ ರವರು ಕಳೆದುಕೊಳ್ಳ ಬೇಕಾದಂತಹ ಪರಿಸ್ಥಿತಿ ಒದಗಿ ಬಂದಿತ್ತು. ಆ ಸಂದರ್ಭದಲ್ಲಿ ಅವರಿಗೆ ಆಸರೆಯಾಗಿದ್ದು ಜೂನಿಯರ್ ಚಿರುಸರ್ಜ.

ಇನ್ನು ಸದ್ಯಕ್ಕೆ ಈಗ ಚಿರು ಸರ್ಜಾ ರವರ ಕೊನೆಯ ಸಿನಿಮಾ ವಾಗಿರುವ ರಾಜಮಾರ್ತಾಂಡ ಇದೇ ಜೂನ್ ತಿಂಗಳಿನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿ ನಿಂತಿದೆ. ಇತ್ತೀಚೆಗಷ್ಟೇ ಈ ಚಿತ್ರದ ಸಮಾರಂಭ ನಡೆದಿದ್ದು ಈ ಸಂದರ್ಭದಲ್ಲಿ ಚಿತ್ರದ ಕುರಿತಂತೆ ಚಿತ್ರದ ನಿರ್ದೇಶಕರು ಹಲವಾರು ಮಾತುಗಳನ್ನು ಆಡಿದ್ದಾರೆ. ಅವುಗಳಲ್ಲಿ ಮೇಘನಾ ರಾಜ್ ಹಾಗೂ ಸುಂದರ್ ರಾಜ್ ರವರು ಚಿತ್ರತಂಡಕ್ಕೆ ನೀಡಿರುವ ಬೆಂಬಲ ಹಾಗೂ ಪ್ರೋತ್ಸಾಹವನ್ನು ಕೂಡ ಮೆಲುಕುಹಾಕಿ ಕೊಂಡಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಒಂದು ಆಶ್ಚರ್ಯಕರ ಸುದ್ದಿಯನ್ನು ಕೂಡ ಹೊರಹಾಕಿದ್ದಾರೆ.

ಹೌದು ಗೆಳೆಯರೇ ಚಿರು ಸರ್ಜಾ ರವರ ಕೊನೆಯ ಸಿನಿಮಾ ವಾಗಿರುವ ರಾಜಮಾರ್ತಾಂಡ ಸಿನಿಮಾದಲ್ಲಿ ಚಿರು ಸರ್ಜಾ ರವರು ಡಬ್ಬಿಂಗ್ ಮಾಡಿಲ್ಲ. ಈ ಕಾರಣದಿಂದಾಗಿ ಅವರ ಸಹೋದರ ಆಗಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರವರು ಅಣ್ಣನ ಪಾತ್ರಕ್ಕೆ ವಾಯ್ಸ್ ಡಬ್ ಮಾಡಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ವಾಯ್ಸ್ಓವರ್ ಕೂಡ ಇರಲಿದೆ. ಜೂನಿಯರ್ ಚಿರು ಸರ್ಜಾ ರವರು ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಲ್ಕನೇ ಅಲೆಯನ್ನು ತಲೆಯಲ್ಲಿ ಇಟ್ಟುಕೊಂಡು ಜೂನ್ ತಿಂಗಳಲ್ಲಿ ಬಿಡುಗಡೆ ಮಾಡುವ ಕುರಿತಂತೆ ನಿರ್ದೇಶಕರು ಮಾಹಿತಿಯನ್ನು ಹೊರಹಾಕಿದ್ದಾರೆ. ಯಾರೆಲ್ಲ ಈ ಸಿನಿಮಾ ನೋಡಲು ಕಾತರರಾಗಿದ್ದೀರಿ ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.