ಹೆಂಡತಿಯರು ವಿವಾಹ ವಿಚ್ಚೇದನ ಪಡೆಯುವುದರ ಹಿಂದಿನ ಅಸಲಿ ಕಾರಣಗಳು ಯಾವ್ಯಾವು ಗೊತ್ತೇ?? ವಿಚ್ಚೇದನಕ್ಕೆ ಪ್ರಮುಖ ಕಾರಣಗಳೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ದಾಂಪತ್ಯ ಜೀವನ ಎನ್ನುವುದು ಒಂದು ಗಾಡಿ ಇದ್ದಂತೆ ಗಂಡ ಹೆಂಡತಿಯನ್ನು ವುದು ಎರಡು ಚಕ್ರಗಳು ಇದ್ದಂತೆ. ಇದರಲ್ಲಿ ಒಂದು ಚಕ್ರ ಕೂಡ ಕಳಚಿ ಹೋದರು ಗಾಡಿ ಆಯತಪ್ಪಿ ಬೀಳುತ್ತದೆ. ಹೀಗಾಗಿ ಪರಸ್ಪರ ನಂಬಿಕೆ ಹಾಗೂ ವಿಶ್ವಾಸಗಳಿಂದ ಸಂಸಾರ ಎಂಬ ಸಾಗರದಲ್ಲಿ ನಾವಿಕರಾಗಿ ಸಾಗಬೇಕು. ಒಂದು ವೇಳೆ ಸಂಸಾರದಲ್ಲಿ ಹೆಂಡತಿ ವಿವಾಹ ವಿಚ್ಛೇದನ ನೀಡುವ ಯೋಚನೆ ಮಾಡುತ್ತಾಳೆ ಎಂದರೆ ಅದಕ್ಕೆ ಕಾರಣ ಕೂಡ ಇರುತ್ತದೆ. ಹಾಗಿದ್ದರೆ ಇಂದಿನ ಲೇಖನಿಯಲ್ಲಿ ಆ ಕಾರಣಗಳು ಏನು ಎಂಬುದನ್ನು ನೋಡೋಣ ಬನ್ನಿ.

ದಾಂಪತ್ಯದಲ್ಲಿ ದ್ರೋಹ; ನೀವು ಎಷ್ಟೇ ಪ್ರೀತಿಸಿ ಮದುವೆಯಾಗಿದ್ದರು ಕೂಡ ದಂಪತಿಗಳು ಎಷ್ಟೇ ಪರಸ್ಪರ ಪ್ರೀತಿಸುತ್ತಿದ್ದರು ಕೂಡ ಒಂದು ವೇಳೆ ದಾಂಪತ್ಯಜೀವನದಲ್ಲಿ ಗಂಡ ದ್ರೋಹ ಮಾಡಿದ್ದು ಕಂಡು ಬಂದರೆ ಹೆಂಡತಿ ಕೂಡಲೇ ಈ ನಿರ್ಧಾರ ತೆಗೆದುಕೊಳ್ಳುತ್ತಾಳೆ. ಯಾವುದೇ ಕಾರಣಕ್ಕೂ ಕೂಡ ಹೆಂಡತಿ ಪರಸ್ತ್ರೀಯರಿಗೆ ತನ್ನ ಗಂಡ ವ್ಯವಹಾರ ನಡೆಸುವುದು ಇಷ್ಟಪಡುವುದಿಲ್ಲ. ಹೀಗಾಗಿ ಕೂಡಲೇ ಈ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ಯಾವುದೇ ಹೆಣ್ಣು ಹೇಗೆ ತಾನೇ ತನ್ನ ಗಂಡನನ್ನು ಪರಸ್ತ್ರೀಯ ಜೊತೆಗೆ ಕಾಣಲು ಸಿದ್ಧವಾಗಿರುತ್ತಾಳೆ ಹೇಳಿ. ಹೀಗಾಗಿಯೇ ಗಂಡ ಸಂಬಂಧದಲ್ಲಿ ನನಗೆ ಮೋಸ ಮಾಡುತ್ತಿದ್ದಾನೆ ಎಂದು ತಿಳಿದ ಕೂಡಲೇ ಆತನೊಂದಿಗೆ ಸಂಸಾರವನ್ನು ಕಳೆದುಕೊಂಡು ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ.
ಸ್ವಾಭಿಮಾನಕ್ಕೆ ಧಕ್ಕೆ; ಕೇವಲ ಸಾಮಾಜಿಕವಾಗಿ ಮಾತ್ರವಲ್ಲದೆ ಸಂಸಾರದಲ್ಲಿಯೂ ಕೂಡ ಹೆಣ್ಣು ಹಾಗೂ ಗಂಡು ಇಬ್ಬರೂ ಕೂಡ ಸಮಾನ ವಾಗಿರುತ್ತಾರೆ ಹಾಗೂ ಸಮಾನವಾಗಿರಬೇಕು. ಆದರೆ ಕೆಲವೊಂದು ಸಮುದಾಯ ಸಂಸಾರದಲ್ಲಿ ಹೆಣ್ಣಿಗಿಂತ ಗಂಡಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ. ಹೀಗಾಗಿ ಒಂದು ವೇಳೆ ಗಂಡ ಹೆಂಡತಿಗೆ ಪದೇ ಪದೇ ಕೀಳು ಭಾವನೆಯನ್ನು ಮೂಡಿಸುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದರೆ ಖಂಡಿತವಾಗಿ ಆಕೆ ಆತನನ್ನು ಸಂಸಾರದಿಂದ ಧಿಕ್ಕರಿಸುವ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ಅವರು ಕೂಡ ಗೌರವ ಹಾಗೂ ಪ್ರೀತಿ ಎಲ್ಲದರಲ್ಲೂ ಕೂಡ ಸಮಾನವಾಗಿ ಅರ್ಹರಾಗಿದ್ದಾಳೆ. ಇದರಲ್ಲಿ ಆಕೆಗೆ ಕೊರತೆ ಉಂಟಾದರೆ ಖಂಡಿತವಾಗಿ ಆಕೆ ಸುಮ್ಮನಿರಲಾರಳು.

ಕನಸುಗಳಿಗೆ ತೊಡಕಾದರೆ; ಮೊದಲಿನ ಕಾಲದಲ್ಲಿ ಮದುವೆಯಾದರೆ ಹೆಣ್ಣು ಗಂಡನ ಮನೆಯಲ್ಲಿ ಕೆಲಸ ಮಾಡಿಕೊಂಡು ಬಿದ್ದಿರ ಬೇಕಾಗಿತ್ತು. ಆದರೆ ಇಂದಿನ ಕಾಲದ ಹೆಣ್ಣು ಮಕ್ಕಳು ಮದುವೆಯಾದ ಮೇಲೂ ಕೂಡ ಸ್ವತಂತ್ರವಾಗಿ ಕೆಲಸ ಮಾಡಿಕೊಂಡು ತಮ್ಮ ಜೀವನವನ್ನು ನಡೆಸಬೇಕು ಎನ್ನುವ ಕನಸನ್ನು ಹೊಂದಿರುತ್ತಾರೆ. ಸಂಪ್ರದಾಯಕ್ಕೆ ಅಂಜಿ ಒಂದು ವೇಳೆ ಮದುವೆಯಾದ ನಂತರ ಗಂಡ ಅಥವಾ ಅತ್ತೆ ಇದಕ್ಕೆ ತೊಡಕಾದರೆ ಅದನ್ನು ಸವಾಲಾಗಿ ಸ್ವೀಕರಿಸಿ ಅಥವಾ ಅವರಿಂದ ಹೊರಬಂದ ಆದರೂ ಕೂಡ ತನ್ನ ಕನಸನ್ನು ಪೂರ್ಣಗೊಳಿಸುವುದಕ್ಕೆ ಎಲ್ಲಾ ಪ್ರಯತ್ನವನ್ನು ಮಾಡುತ್ತಾರೆ. ಹೀಗಾಗಿ ಇಂದಿನ ಸಮಾಜ ಹೆಣ್ಣುಮಕ್ಕಳ ಸ್ವಾವಲಂಬಿ ಜೀವನಕ್ಕೆ ಅಡ್ಡಗಟ್ಟಲು ಹೋದರೆ ಖಂಡಿತವಾಗಿ ಅವರು ಕೂಡ ಸುಮ್ಮನೆ ನಿಲ್ಲುವುದಿಲ್ಲ. ಯಾಕೆಂದರೆ ಅವರ ಬಳಿ ಈ ಸಂದರ್ಭದಲ್ಲಿ ವಿವಾಹ ವಿಚ್ಛೇದನ ಬಿಟ್ಟರೆ ಬೇರೆ ಯಾವ ದಾರಿ ಕೂಡ ಇರುವುದಿಲ್ಲ.
ಮಾನಸಿಕ ನಿಂದನೆ; ಮದುವೆಯಾದ ಮೇಲೆ ಹೆಣ್ಣಿಗೆ ಮನೆಯ ಜವಾಬ್ದಾರಿ ಹೆಚ್ಚಾಗುತ್ತದೆ ನಿಜ ಆದರೆ ಅವಳನ್ನು ಮದುವೆಯಾಗುವ ಪುರುಷ ಅವಳನ್ನು ಕೆಲಸದವಳ ಹಾಗೆ ಟ್ರೀಟ್ ಮಾಡಬಾರದು. ಅವಳು ನಿಮ್ಮ ಹೆಂಡತಿ ಆಗಿರುತ್ತಾಳೆ ಹೀಗಾಗಿ ಪ್ರತಿಯೊಂದು ಜವಾಬ್ದಾರಿಯಲ್ಲಿ ಕೂಡ ಆಕೆಗೆ ಹೆಗಲಾಗಿ ನಿಲ್ಲಬೇಕು. ಒಂದು ವೇಳೆ ನೀವು ಹೀಗೆ ಮಾಡಿದೆ ಪೂರ್ಣ ಜವಾಬ್ದಾರಿಯನ್ನು ಆಕೆಯ ತಲೆ ಮೇಲೆ ಹಾಕಿ ಪ್ರತಿ ಬಾರಿ ಆಕೆ ಅದನ್ನು ಪೂರೈಸದಿದ್ದರೆ ಅವಳ ಮೇಲೆ ಮಾನಸಿಕ ಒತ್ತಡವನ್ನು ಹೇರಿದರೆ ಅವಳಿಗೆ ಖಂಡಿತವಾಗಿ ವಿವಾಹ ವಿಚ್ಛೇದನ ಬಿಟ್ಟು ಬೇರೆ ಯಾವ ದಾರಿ ಕೂಡ ಕಾಣಿಸಲು ಸಾಧ್ಯವಿಲ್ಲ. ಈ ವಿಚಾರಗಳು ನಿಮಗೂ ಕೂಡ ಸರಿ ಎನಿಸಿದರೆ ಒಂದು ವೇಳೆ ನೀವು ಕೂಡ ವೈವಾಹಿಕ ಜೀವನದಲ್ಲಿ ಶಾಮೀಲಾಗಿದ್ದಾರೆ ತಪ್ಪದೇ ಈ ವಿಚಾರಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿ ಹಾಗೂ ಒಬ್ಬ ಉತ್ತಮ ಗಂಡನಾಗಿ ನಿಮ್ಮ ಹೆಂಡತಿಗೆ ಇರಲು ಪ್ರಯತ್ನಿಸಿ.