ಇತರೆ ಕಂಪನಿಗಳಿಗೆ ಠಕ್ಕರ್ ನೀಡಿದ ಟಾಟಾ: ಟಾಟಾ ಪ್ಲೇ ಸಂಸ್ಥೆಯಿಂದ ಹೊರಬಿತ್ತು ಹೊಸ ಧಮಕ ಆಫರ್. ಎಷ್ಟೆಲ್ಲಾ ಉಳಿತಾಯ ಮಾಡಬಹುದು ಗೊತ್ತೇ??

21

ನಮಸ್ಕಾರ ಸ್ನೇಹಿತರೇ ಡಿಟಿಹೆಚ್ ಅಂದರೆ ಡೈರೆಕ್ಟ್ ಟು ಹೋಮ್ ಸೇವೆಯಲ್ಲಿ ಟಾಟಾ ಪ್ಲೇ ಸಂಸ್ಥೆ ತನ್ನ ಅಧಿಪತ್ಯವನ್ನು ಭಾರತದೇಶದಲ್ಲಿ ಸಾಧಿಸಿದೆ ಎಂದರೆ ತಪ್ಪಾಗಲಾರದು. ಒಂದಲ್ಲ ಒಂದು ವಿಶೇಷ ಯೋಜನೆಗಳ ಮೂಲಕ ಗ್ರಾಹಕರ ಮೊದಲ ಹಾಗೂ ಮೆಚ್ಚಿನ ಆಯ್ಕೆಯಾಗಿದೆ ಎಂದರೆ ತಪ್ಪಾಗಲಾರದು. ಸದ್ಯಕ್ಕೆ ಟಾಟಾ ಪ್ಲೇ ಪರಿಚಯಿಸಿರುವ ಹೊಸ ಯೋಜನೆಗಳು ಪ್ರೇಕ್ಷಕರಿಗೆ ಇಷ್ಟ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಈ ಹೊಸ ಯೋಜನೆಯಲ್ಲಿ ಆಪರೇಟರ್ ಗ್ರಾಹಕರಿಗೆ ಉಚಿತ ಹೆಚ್ ಡಿ ಸೆಟ್ ಟಾಪ್ ಬಾಕ್ಸ್ ಹಾಗೂ ಟಾಟಾ ಪ್ಲೇ ಬಿಂಜ್ ಹಾಗೂ ಸೆಟ್ ಟಾಪ್ ಬಾಕ್ಸ್ ಅನ್ನು ಉಚಿತವಾಗಿ ನೀಡುತ್ತಿದೆ. ಇದರ ಕುರಿತಂತೆ ಇನ್ನಷ್ಟು ತಿಳಿದುಕೊಳ್ಳೋಣ ಬನ್ನಿ. ಹೌದು ಗೆಳೆಯರೆ ಟಾಟಾ ಪ್ಲೇ ಸಂಸ್ಥೆ ತನ್ನ ಡಿಟಿಹೆಚ್ ಅಂದರೆ ಡೈರೆಕ್ಟ್ ಟು ಹೋಂ ಗ್ರಾಹಕರಿಗೆ ಹಲವಾರು ಬೊಂಬಾಟ್ ಆಫರ್ ಗಳನ್ನು ನೀಡುತ್ತಿದೆ.

ಒಮ್ಮೆಗೆ 4000 ರೂಪಾಯಿ ರೀಚಾರ್ಜ್ ಮಾಡಿದರೆ ಹೆಚ್ ಡಿ ಸೆಟ್ ಟಾಪ್ ಬಾಕ್ಸ್ ಅನ್ನು ಹಾಗೂ 6000 ರೂಪಾಯಿ ರೀಚಾರ್ಜ್ ಮಾಡಿದರೆ ಬಿಂಜ್ ಹಾಗೂ ಸೆಟ್ ಟಾಪ್ ಬಾಕ್ಸ್ ಅನ್ನು ಉಚಿತವಾಗಿ ತನ್ನ ಗ್ರಾಹಕರಿಗೆ ನೀಡಲಿದೆ. ಈ ಸಂದರ್ಭದಲ್ಲಿ ಡಿಜಿಟಲ್ ಪ್ಲಾಟ್ ಫಾರಂ ನ ಚಂದಾದಾರಿಕೆ ಅಥವಾ ಅಸೆಸ್ ಅನ್ನು ಆಯ್ದ ಗ್ಯಾಜೆಟ್ ಗಳಲ್ಲಿ ನೀಡಲಿದೆ. ಹಾಗಿದ್ದರೆ ಟಾಟಾ ಪ್ಲೇನ ಹೊಸ ಧಮಾಕಾ ಆಫರ್ ನಲ್ಲಿ ಏನೆಲ್ಲ ಸಿಗಲಿದೆ ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.

ಟಾಟಾ ಪ್ಲೇ ಸಂಸ್ಥೆ ಘೋಷಣೆ ಮಾಡಿರುವ ಆಫರ್ ನಲ್ಲಿ 6000 ರೂಪಾಯಿ ರೀಚಾರ್ಜ್ ಮೂಲಕ ಹೆಚ್ ಡಿ ಸೆಟ್ ಆಫ್ ಬಾಕ್ಸ್ ಹಾಗೂ ಟಾಟಾ ಸ್ಕೈ ಬಿಂಜ್ ಅನ್ನು ಆನಂದಿಸಬಹುದಾಗಿದೆ. ಒಂದು ಬಾರಿ ನೀವು 4000 ರೂಪಾಯಿಗಳ ರೀಚಾರ್ಜ್ ಅನ್ನು ಮಾಡಿದರೆ ಹೆಚ್ ಡಿ ಸೆಟ್ ಆಫ್ ಬಾಕ್ಸ್ ಸಂಪರ್ಕ ವ್ಯವಸ್ಥೆಯನ್ನು ಉಚಿತವಾಗಿ ನೀವು ಆನಂದಿಸಬಹುದಾಗಿದೆ. ಒಂದು ವೇಳೆ ನೀವು ಈಗಾಗಲೇ ಈ ಯೋಜನೆಯ ಚಂದಾದಾರರಾಗಿ ಇದ್ದರೆ 6000 ರೂಪಾಯಿಗಳ ರಿಚಾರ್ಜ್ ಅನ್ನು ಅಪ್ಗ್ರೇಡ್ ಮಾಡುವ ಮೂಲಕ ಬಿಂಜ್+ ಸೌಲಭ್ಯ ಪಡೆಯುವಂತಹ ಅವಕಾಶ ನಿಮ್ಮದಾಗಲಿದೆ.

ಈ ಸಂದರ್ಭದಲ್ಲಿಯೇ ಟಾಟಾ ಪ್ಲೇ ಸಂಸ್ಥೆ ತನ್ನ ಚಂದಾದಾರರಿಗೆ 1ವರ್ಷದ ವಾರಂಟಿಯನ್ನು ಕೂಡ ನೀಡುತ್ತಿದೆ. ಈಗಾಗಲೇ ಯೋಜನೆಯಲ್ಲಿ ಹೆಚ್ ಡಿ ಸೆಟ್ ಟಾಪ್ ಬಾಕ್ಸ್ ಬೆಲೆ 1699 ಹಾಗೂ ಬಿಂಜ್ ಮತ್ತು ಸೆಟ್ ಟಾಪ್ ಬಾಕ್ಸ್ ಪ್ಲಾನ್ ಬೆಲೆ 2199 ರೂಪಾಯಿ ಆಗಿದೆ. ಇದು ಕೇವಲ ಟಿವಿ ಕಂಟೆಂಟ್ ಮಾತ್ರವಲ್ಲದೆ ಡಿಜಿಟಲ್ ಪ್ಲಾಟ್ಫಾರ್ಮ್ ಗಳಾಗಿರುವ ಎರೋಸ್ ನೌ ಹಂಗಾಮ ಡಿಸ್ನಿ ಪ್ಲಸ್ ಹಂಗಾಮ ಹಾಗೂ ಜೀ 5 ಗಳಂತಹ ಪ್ರತಿಷ್ಠಿತ ಡಿಜಿಟಲ್ ಪ್ಲಾಟ್ಫಾರ್ಮ್ ಗಳ ಕಂಟೆಂಟ್ ಅನ್ನು ನೋಡುವಂತಹ ಸೌಲಭ್ಯವನ್ನು ನೀಡಲಿದೆ.

ಇತ್ತೀಚಿನ ಕೆಲವು ದಿನಗಳಲ್ಲಿ ಟಾಟಾ ಪ್ಲೇ ಕಂಪನಿ ಮೊಬೈಲ್ ಗಳಲ್ಲಿ ಕೂಡ ಡಿಜಿಟಲ್ ಪ್ಲಾಟ್ಫಾರ್ಮ್ ಗಳಲ್ಲಿ ಪ್ರವೇಶಿಸಲು ಸ್ಟಾರ್ಟರ್ ಪ್ಯಾಕ್ ಗಳನ್ನು ಕೂಡ ಪರಿಚಯಿಸಿ. ಟಾಟಾ ಪ್ಲೇ ಬಿಂಜ್ ಸ್ಟಾರ್ಟರ್ ಪ್ಯಾಕ್ 30 ದಿನಗಳ ವ್ಯಾಲಿಡಿಟಿ ವೊಂದಿಗೆ 49 ರೂಪಾಯಿಗಳಲ್ಲಿ ಸಿಗಲಿದೆ. ಇದಕ್ಕೂ ಮುನ್ನ ನಿಮಗೆ ಒಂದು ವಾರಗಳ ಫ್ರೀ ಟ್ರಯಲ್ ಕೂಡ ಸಿಗಲಿದೆ. ಫ್ರೀ ಟ್ರಯಲ್ ಮುಗಿದ ನಂತರ ನೀವು ಬೇಕಾದರೆ ಇದನ್ನು ಮುಂದುವರಿಸು ವಂತಹ ಆಯ್ಕೆಗಳು ಕೂಡ ನಿಮಗಿದೆ. ಈ ಅಪ್ಲಿಕೇಶನ್ ಅನ್ನು ಒಂದೇ ಸಮಯದಲ್ಲಿ ಮೂರು ಡಿವೈಸ್ ಗಳಲ್ಲಿ ಪ್ರಸಾರ ಮಾಡುವಂತಹ ಅವಕಾಶವನ್ನು ಕೂಡ ನೀಡಲಾಗುತ್ತದೆ. ಟಾಟಾ ಪ್ಲೇ ನ ಬೇಸಿಕ್ ನಿಮಗೆ 149 ರೂಪಾಯಿಗಳಿಗೆ ಸಿಕ್ಕರೆ ಪ್ರೀಮಿಯಂ ಯೋಜನೆ 299 ರೂಪಾಯಿಗಳಿಗೆ ಸಿಗಲಿದೆ. ಒಂದು ವೇಳೆ ನೀವು ಕೂಡ ಟಾಟಾ ಪ್ಲೇ ನ ಗ್ರಾಹಕರಾಗಿದ್ದರೆ ಈ ಹೊಸ ಧಮಾಕ ಆಫರನ್ನು ಬಳಸಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.