ಭಾರತೀಯ ಮಹಿಳೆಯನ್ನು ಮದುವೆಯಾಗಿರುವ ವಿದೇಶಿ ಕ್ರಿಕೆಟ್ ಆಟಗಾರರು ಯಾರ್ಯಾರು ಗೊತ್ತೇ?? ಯಾರೆಲ್ಲ ಇದ್ದಾರೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಕ್ರಿಕೆಟ್ ಎನ್ನುವುದು ಈಗಾಗಲೇ ಅಂತಾರಾಷ್ಟ್ರೀಯವಾಗಿ ಬೆಳೆದಂತಹ ಕ್ರೀಡೆ. ಫುಟ್ಬಾಲ್ ಬಿಟ್ಟರೆ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರೀಡೆ ಎಂದರೆ ಅದು ಕ್ರಿಕೆಟ್ ಎಂದರೆ ತಪ್ಪಾಗಲಾರದು. ಇನ್ನು ನಾವು ಇಂದಿನ ವಿಚಾರದಲ್ಲಿ ಮಾತನಾಡಲು ಹೊರಟಿರುವುದು ಯಾವೆಲ್ಲಾ ವಿದೇಶೀ ಕ್ರಿಕೆಟಿಗರು ಭಾರತೀಯ ಹುಡುಗಿಯರನ್ನು ಮದುವೆಯಾಗಿದ್ದಾರೆ ಎನ್ನುವುದರ ಕುರಿತಂತೆ. ಇದರಲ್ಲಿರುವ ಕೆಲವೊಂದು ಹೆಸರುಗಳು ಖಂಡಿತವಾಗಿ ನಿಮಗೆ ಆಶ್ಚರ್ಯವನ್ನು ತರುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಿದ್ದರೆ ಈ ಲಿಸ್ಟಿನಲ್ಲಿ ಯಾರೆಲ್ಲ ಇದ್ದಾರೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಮುತ್ತಯ್ಯ ಮುರಳೀಧರನ್; ಕ್ರಿಕೆಟ್ ಇತಿಹಾಸದಲ್ಲಿ ಮುತ್ತಯ್ಯ ಮುರಳೀಧರನ್ ರವರ ಕಾಲಘಟ್ಟವನ್ನು ಐತಿಹಾಸಿಕ ದಿನಗಳು ಎಂಬುದಾಗಿ ಹೇಳಬಹುದಾಗಿದೆ. ತಮ್ಮ ವಿಭಿನ್ನ ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟ್ಸ್ಮನ್ ಗಳನ್ನು ತನ್ನ ತಂತ್ರಕ್ಕೆ ಬೀಳುವಂತೆ ಮಾಡುತ್ತಿದ್ದರು. ಇನ್ನು ಶ್ರೀಲಂಕಾ ಮೂಲದ ಮುತ್ತಯ್ಯ ಮುರಳೀಧರನ್ ಅವರು ತಮಿಳುನಾಡಿನ ಚೆನ್ನೈ ಮೂಲದ ಮದಿ ಮಲರ್ ರಾಮ ಮೂರ್ತಿಯನ್ನು ಅವರನ್ನು ಮದುವೆಯಾಗಿದ್ದರು. ಇನ್ನು ಇವರಿಬ್ಬರಿಗೆ ಇಬ್ಬರು ಮಕ್ಕಳಿದ್ದಾರೆ.
ಹಸನ್ ಅಲಿ; ಪಾಕಿಸ್ತಾನ ಮೂಲದ ಕ್ರಿಕೆಟಿಗ ರಾಗಿರುವ ಹಸನ್ ಆಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಅತ್ಯಂತ ಪ್ರಭಾವಿ ವೇಗದ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ. ಇವರು ಭಾರತದ ಹರಿಯಾಣ ಮೂಲದ ಶಮಿಯ ಆಝ್ರೂ ಎನ್ನುವವರನ್ನು 2019 ರಲ್ಲಿ ದುಬೈನ ಅಟ್ಲಾಂಟಿಸ್ ಫಾಮ್ ಹೋಟೆಲ್ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ.

ಗ್ಲೆನ್ ಮ್ಯಾಕ್ಸ್ವೆಲ್; ಆಸ್ಟ್ರೇಲಿಯಾ ಮೂಲದ ಕ್ರಿಕೆಟಿಗ ರಾಗಿರುವ ಗ್ಲೆನ್ ಮ್ಯಾಕ್ಸ್ವೆಲ್ ರವರು ಐಪಿಎಲ್ ನಲ್ಲಿ ಹಲವಾರು ತಂಡಗಳ ಪರವಾಗಿ ಆಡಿದ್ದು ಸದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಇವರು ಚೆನ್ನೈ ಮೂಲದ ತಮ್ಮ ಬಹುಕಾಲದ ಗೆಳತಿ ಯಾಗಿರುವ ವಿನಿ ರಾಮನ್ ರವರನ್ನು ಇತ್ತೀಚಿಗಷ್ಟೇ ಮದುವೆಯಾಗಿದ್ದರು. ಇವರಿಬ್ಬರ ಮದುವೆ ಸುದ್ದಿ ದೊಡ್ಡಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ.
ಶಾನ್ ಟೇಟ್; ಒಂದು ಕಾಲದಲ್ಲಿ ಆಸ್ಟ್ರೇಲಿಯಾದ ಪ್ರಮುಖ ವೇಗದ ಬೌಲರ್ ಆಗಿರುವಂತಹ ಶಾನ್ ಟೇಟ್ ರವರು ಭಾರತ ಮೂಲದ ಮಾಡೆಲ್ ನಿರೂಪಕಿ ಹಾಗೂ ವೈನ್ ಉದ್ಯಮಿ ಮಹಿಳೆಯಾಗಿರುವ ಮಶೂಮ್ ಸಿಂಘಾ ರವರನ್ನು ಮದುವೆಯಾಗಿದ್ದರು. ಇದೇ ಕಾರಣಕ್ಕಾಗಿಯೇ ಶಾನ್ ಭಾರತದಲ್ಲಿ ಅತ್ಯಂತ ಹೆಚ್ಚು ಪ್ರಸಿದ್ಧಿಯನ್ನು ಹೊಂದಿದ್ದಾರೆ.

ಮೈಕ್ ಬ್ರೆರ್ಲಿ; ಎಂಬತ್ತರ ದಶಕದಲ್ಲಿ ಇಂಗ್ಲೆಂಡ್ ತಂಡದ ನಾಯಕನಾಗಿ ಯಶಸ್ವಿಯಾಗಿ ಕಾಣಿಸಿಕೊಂಡಿದ್ದ ಮೈಕ್ ರವರು ಗುಜರಾತ್ ಮೂಲದ ಮನಾ ಎನ್ನುವವರನ್ನು ಮದುವೆಯಾಗಿದ್ದರು. ಇಲ್ಲಿಯೇ ಇದ್ದು ಇಲ್ಲಿನ ಭಾಷೆಯನ್ನು ಕಲಿಯಲು ಕೂಡ ಸಾಕಷ್ಟು ಶ್ರಮ ಪಟ್ಟಿದ್ದರು ಎಂಬುದಾಗಿ ಕೇಳಿ ತಿಳಿದು ಬಂದಿದೆ. ಸದ್ಯಕ್ಕೆ ಇಬ್ಬರೂ ಕೂಡ ಲಂಡನ್ನಲ್ಲಿ ನೆಲೆಸಿದ್ದು ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಇಂದಿಗೂ ಕೂಡ ತಮ್ಮ ಸಂಸಾರದೊಂದಿಗೆ ಸುಖಶಾಂತಿ ನೆಮ್ಮದಿಯಿಂದ ಜೀವನ ನಡೆಸಿಕೊಂಡಿದ್ದಾರೆ.
ಶೋಯಬ್ ಮಲಿಕ್; ಹಲವಾರು ವರ್ಷಗಳಿಂದ ಪಾಕಿಸ್ತಾನದ ಪ್ರಮುಖ ಬ್ಯಾಟ್ಸಮನ್ ಹಾಗೂ ಆಟಗಾರನಾಗಿ ಕಾಣಿಸಿಕೊಂಡಿರುವ ಶೊಯೆಬ್ ಮಲ್ಲಿಕ್ ರವರು ತಮ್ಮ ಮೊದಲನೇ ಮದುವೆಯ ವಿವಾಹ ವಿಚ್ಛೇದನದ ನಂತರ ಭಾರತೀಯ ಮೂಲದ ಟೆನಿಸ್ ಆಟಗಾರ್ತಿ ಆಗಿರುವ ಸಾನಿಯಾ ಮಿರ್ಜಾ ರವರನ್ನು 2008 ರಲ್ಲಿ ಹೈದರಾಬಾದ್ ನಲ್ಲಿ ಮದುವೆಯಾಗುತ್ತಾರೆ. ಇನ್ನು ಇವರಿಬ್ಬರಿಗೂ ಕೂಡ ಒಬ್ಬ ಮಗನಿದ್ದಾನೆ. ಇವರಿಬ್ಬರ ಪ್ರೀತಿಯನ್ನು ಎರಡು ದೇಶಗಳ ಜನರು ಕೂಡ ಕೆಲವರು ಹೊಗಳಿದ್ದಾರೆ ಇನ್ನು ಕೆಲವರು ತೆಗಳಿದ್ದಾರೆ. ಈ ಲೇಖನಿಯಲ್ಲಿ ನಾವು ಹೇಳಿರುವ ವಿಚಾರಗಳ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ. ನಿಮಗೆ ಕೂಡ ಈ ಲೇಖನಿ ಇಷ್ಟವಾಗಿದ್ದರೆ ತಪ್ಪದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.