ಕಡಿಮೆ ಬೆಲೆಯಲ್ಲಿ ಅತಿ ಹೆಚ್ಚು ಲಾಭ ನೀಡುವ ಪ್ಲಾನ್ ಗಳು ಯಾವ್ಯಾವು ಗೊತ್ತೇ?? 666 ರೂಪಾಯಿ ರೀಚಾರ್ಜ್ ಪ್ಲಾನ್ ಜಿಒ, ಏರ್ಟೆಲ್, ವಿಐ ಗಳಲ್ಲಿ ಯಾವುದು ಬೆಸ್ಟ್ ಗೊತ್ತೇ??

33

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಭಾರತ ದೇಶದ ಅತ್ಯಂತ ಅಗ್ರ ಟೆಲಿಕಾಂ ಸಂಸ್ಥೆಗಳಲ್ಲಿ ಪ್ರಮುಖ ಪಂಕ್ತಿಯಲ್ಲಿ ಕಾಣಸಿಗುವಂತಹ ಜಿಯೋ ಹಾಗೂ ಏರ್ಟೆಲ್ ಸಂಸ್ಥೆಗಳ ನಡುವೆ ಈ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಪೈಪೋಟಿ ಏರ್ಪಟ್ಟಿದೆ ಎಂದರೆ ತಪ್ಪಾಗಲಾರದು. ಎರಡು ಸಂಸ್ಥೆಗಳು ಕೂಡ ತಮ್ಮ ಗ್ರಾಹಕರನ್ನು ಹೆಚ್ಚಿನ ಮಟ್ಟದಲ್ಲಿ ಆಕರ್ಷಿಸಲು ಒಂದಿಲ್ಲೊಂದು ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಲೇ ಇದ್ದಾರೆ. ಇನ್ನು ಇವೆರಡು ಸಂಸ್ಥೆಗಳಾದನಂತರ ಪೈಪೋಟಿ ನೀಡುತ್ತಿರುವ ಮತ್ತೊಂದು ಸಂಸ್ಥೆ ಎಂದರೆ ವೊಡಾಫೋನ್ ಐಡಿಯಾ ( ವಿಐ ).

ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಜಿಯೋ ಹಾಗೂ ಏರ್ಟೆಲ್ ಸಂಸ್ಥೆಗಳು ಪರಿಚಯಿಸಿರುವ 666 ರೂಪಾಯಿಗಳ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಕುರಿತಂತೆ. ಈ ಬೆಲೆಯಲ್ಲಿ ಕಂಡುಬರುವಂತಹ ರಿಚಾರ್ಜ್ ಪ್ಲಾನ್ಗಳು ಎರಡೂ ಸಂಸ್ಥೆಯ ಯೋಜನೆಯಲ್ಲಿ ಇವೆ. ಹೀಗಾಗಿ ಇಂದಿನ ಲೇಖನಿಯಲ್ಲಿ ಇದರ ತುಲನೆಯನ್ನು ಮಾಡಲು ಹೊರಟಿದ್ದೇವೆ. ಸಾಮಾನ್ಯವಾಗಿ ಪ್ರಯೋಜನಗಳು ಎರಡರಲ್ಲಿ ಕೂಡ ಒಂದೇ ಮಟ್ಟದಲ್ಲಿ ಕಾಣಸಿಗುತ್ತದೆ ಆದರೂ ಕೂಡ ಕೆಲವೊಂದು ವ್ಯತ್ಯಾಸಗಳಿವೆ ಅದನ್ನು ಮೊದಲು ತಿಳಿಯೋಣ ಬನ್ನಿ.

ಮೊದಲು 666 ರೂಪಾಯಿ ನಲ್ಲಿ ಏರ್ಟೆಲ್ ಯಾವ್ಯಾವ ಪ್ರಯೋಜನಗಳನ್ನು ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. 77 ದಿನಗಳ ವ್ಯಾಲಿಡಿಟಿ ಯಲ್ಲಿ ದೈನಂದಿನ ವಾಗಿ 1.5 ಜಿಬಿ ಹೈ ಸ್ಪೀಡ್ ಇಂಟರ್ನೆಟ್ ಅನ್ನು ನೀಡುತ್ತದೆ. ಮೊಬೈಲ್ನಲ್ಲಿ ಅಮೆಜಾನ್ ಪ್ರೈಮ್ ನ ಉಚಿತ ಚಂದಾದಾರಿಕೆ ಕೂಡ ನೀಡಲಾಗುತ್ತದೆ. ಇಷ್ಟು ಮಾತ್ರವಲ್ಲದೆ ದೈನಂದಿನ ವಾಗಿ 100 ಉಚಿತ ಎಸ್ಎಂಎಸ್ ಗಳನ್ನು ಮಾಡುವಂತಹ ಸೌಲಭ್ಯವನ್ನು ಕೂಡ ಒದಗಿಸಲಾಗುತ್ತದೆ. ಫಾಸ್ಟ್ ಟ್ಯಾಗ್ ನಲ್ಲಿ 100 ಕ್ಯಾಶ್ಬ್ಯಾಕ್ ಹಾಗೂ ಏರ್ಟೆಲ್ ಸಂಸ್ಥೆಯ ಅಪ್ಲಿಕೇಶನ್ಗಳ ಆಗಿರುವ ಹಲೋ ಟ್ಯೂನ್ ವಿಂಕ್ ಮ್ಯೂಸಿಕ್ ಸೇರಿದಂತೆ ಹಲವಾರು ಅಪ್ಲಿಕೇಶನ್ ಗಳಿಗೆ ಉಚಿತ ಚಂದಾದಾರಿಕೆ ಕೂಡ ಸಿಗಲಿದೆ. ಹಾಗೂ ಪ್ರಮುಖವಾಗಿ ಅನ್ಲಿಮಿಟೆಡ್ ಕರೆಗಳು ಕೂಡ ವ್ಯಾಲಿಡಿಟಿ ಸಮಯದವರೆಗೆ ಸಿಗಲಿದೆ.

ಇನ್ನು ಇದೆ ಮೊತ್ತಕ್ಕೆ ಜಿಯೋ ಸಂಸ್ಥೆಯಲ್ಲಿ ಸಿಗುವಂತಹ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ ಜೀವನದಲ್ಲಿ ವ್ಯಾಲಿಡಿಟಿ ಹೆಚ್ಚಾಗಿದ್ದು 84 ದಿನಗಳ ವ್ಯಾಲಿಡಿಟಿ ಸಿಗಲಿದೆ. ಅನಿಯಮಿತ ಕರೆಗಳು ಕೂಡ ಯಾವುದೇ ನೆಟ್ವರ್ಕಿಗೆ ಸಿಗಲಿದೆ. ದೈನಂದಿನ 1.5 ಜಿಬಿ ಹೈಸ್ಪೀಡ್ ಇಂಟರ್ನೆಟ್ ಕೂಡ ಇಲ್ಲಿ ಸಿಗಲಿದೆ. 100 ಉಚಿತ ಎಸ್ಎಂಎಸ್ ಗಳನ್ನು ಕೂಡ ದಿನಾಲು ಮಾಡಬಹುದಾಗಿದೆ. ಇಷ್ಟು ಮಾತ್ರವಲ್ಲದೆ ಜಿಯೋ ಸಂಸ್ಥೆಯ ಎಲ್ಲಾ ಅಪ್ಲಿಕೇಶನ್ಗಳಿಗೆ ಕೂಡ ಉಚಿತ ಚಂದಾದಾರಿಕೆಯ ಲಾಭ ಸಿಗಲಿದೆ.

ಇನ್ನು ಮೂರನೇದಾಗಿ ನಾವು ಮಾತನಾಡಲು ಹೊರಟಿರುವುದು ಇದೆ ಬೆಲೆಯಲ್ಲಿ ವೊಡಾಫೋನ್ ಐಡಿಯಾ ಜಂಟಿ ಸಂಸ್ಥೆಗಳಾಗಿರುವ ವಿಐ ನಲ್ಲಿ ಯಾವ ರೀತಿಯ ಪ್ರಯೋಜನಗಳು ಸಿಗುತ್ತವೆ ಎನ್ನುವುದಾಗಿ. 77 ದಿನಗಳ ವ್ಯಾಲಿಡಿಟಿಯೊಂದಿಗೆ ಇಲ್ಲಿ ಅನ್ಲಿಮಿಟೆಡ್ ಕರೆಗಳು ಹಾಗೂ 1.5 ಜಿಬಿ ಇಂಟರ್ನೆಟ್ ಡೇಟಾ ವ್ಯವಸ್ಥೆ ಕೂಡ ಸಿಗಲಿದೆ. ವಿಐ ಸಂಸ್ಥೆಯ ಎಲ್ಲಾ ಅಪ್ಲಿಕೇಶನ್ ಹಾಗೂ ಡಿಜಿಟಲ್ ಪ್ಲಾಟ್ಫಾರ್ಮ್ ಗಳ ಉಚಿತ ಚಂದಾದಾರಿಕೆ ಸಿಗಲಿದೆ. ಇನ್ನು ವೀಕೆಂಡ್ ಡಾಟ ರೋಲ್ ಓವರ್ ಅವಕಾಶ ಇರುವ ಕಾರಣದಿಂದಾಗಿ ಯಾವುದೇ ಡೇಟಾ ವೇಸ್ಟ್ ಆಗುವ ಚಿಂತೆ ಇರುವುದಿಲ್ಲ.

ಏರ್ಟೆಲ್ ಪರಿಚಯಿಸಿರುವ 599 ರೂಪಾಯಿಗಳ ಯೋಜನೆಯಲ್ಲಿ ಕೂಡ ಮೂರು ತಿಂಗಳ ವ್ಯಾಲಿಡಿಟಿ ಯಲ್ಲಿ ದಿನಕ್ಕೆ 3gb ಹೈಸ್ಪೀಡ್ ಇಂಟರ್ನೆಟ್ ನಂತೆ ಒಂದು ತಿಂಗಳ ಉಚಿತ ಅಮೆಜಾನ್ ಪ್ರೈಮ್ ಚಂದಾದಾರಿಕೆ ಕೂಡ ಸಿಗಲಿದೆ. ಪಾಸ್ಟ್ಯಾಗ್ ನಲ್ಲಿ 100 ಕ್ಯಾಶ್ಬ್ಯಾಕ್ ಸೇರಿದಂತೆ ಅಪೋಲೋ ಅಪ್ಲಿಕೇಶನ್ ಹಾಗೂ ಶಾ ಅಕಾಡೆಮಿ ಯಲ್ಲಿ ಮೂರು ತಿಂಗಳ ಉಚಿತ ಚಂದಾದಾರಿಕೆ ಸಿಗಲಿದೆ. ಈ ಎಲ್ಲಾ ಯೋಜನೆಗಳನ್ನು ಗಮನಿಸಿದಾಗ ಯಾವ ಸಂಸ್ಥೆಯ ಯಾವ ಯೋಜನೆಗಳು ನಿಮಗೆ ಚೆನ್ನಾಗಿ ಹಾಗೂ ನೀವು ಕೊಡುವಂತ ಹಣಕ್ಕೆ ನ್ಯಾಯಯುತವಾಗಿದೆ ಎಂಬುದಾಗಿ ಅನಿಸುತ್ತದೆ ಎಂಬುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.