ಪಾಪ ಹುಡುಗಿ ಬಡವರೆಂದು ತಾನೇ ಖರ್ಚು ಹಾಕಿ ಮದುವೆ ಮಾಡಿಕೊಂಡ ಹುಡುಗ, ಆದರೆ ಮೊದಲ ರಾತ್ರಿಯಲ್ಲಿ ಹುಡುಗಿ ಏನು ಮಾಡಿದ್ದಾಳೆ ಗೊತ್ತೇ??

28,795

ನಮಸ್ಕಾರ ಸ್ನೇಹಿತರೇ ಮದುವೆಯನ್ನು ಅದು ಎಲ್ಲರ ಜೀವನದಲ್ಲಿ ನಡೆಯಲೇಬೇಕಾದ ಅಂತಹ ಪ್ರಮುಖ ಕಾರ್ಯ ಹಾಗೂ ಇದು ಕೇವಲ ಮದುವೆಯಾಗುವ ಜೋಡಿಗಳಿಗೆ ಮಾತ್ರವಲ್ಲದೆ ಅವರ ಮನೆಯವರಿಗೂ ಕೂಡ ಸಂತೋಷವನ್ನು ನೀಡುವಂತಹ ಕಾರ್ಯಕ್ರಮ. ಆದರೆ ಇಂದು ನಾವು ಹೇಳಲು ಹೊರಟಿರುವ ವಿಚಿತ್ರ ಮದುವೆ ಕುರಿತಂತೆ ಕೇಳಿದರೆ ನೀವು ಕೂಡ ದಂಗಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಿದ್ದರೆ ಆಗ್ರಾದಲ್ಲಿ ನಡೆದಿರುವಂತಹ ಈ ಮದುವೆ ಕುರಿತಂತೆ ಇನ್ನಷ್ಟು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಈ ಗಟನೆ ನಡೆದಿರುವುದು ಏಪ್ರಿಲ್ 25 ರಂದು ಆಗ್ರಾದ ಶಹಗಂಜ್ ಪ್ರದೇಶದಲ್ಲಿ. ಮದುವೆಯಾದ ಹತ್ತು ಗಂಟೆಗಳ ನಂತರ ತನ್ನ ಮಾವನ ಮನೆಗೆ ಬಂದು ಆ ಹುಡುಗಿ ಎಲ್ಲ ಚಿನ್ನಾಭರಣಗಳನ್ನು ಕದ್ದುಕೊಂಡು ಓಡಿ ಹೋಗಿದ್ದಾಳೆ. ವಿಘಟನೆ ಎಲ್ಲರಿಗೂ ತಿಳಿದು ಬಂದಿರುವುದು ಬೆಳಿಗ್ಗೆ. ಬೆಳ್ಳಿ ಕಾರ್ಮಿಕರೊಬ್ಬರು ವಧುವಿನ ಹುಡುಕಾಟದಲ್ಲಿದ್ದರು. ತಾಜ್ ಗಂಜ್ ಎನ್ನುವ ಪ್ರದೇಶದ ನಿವಾಸಿಯಾಗಿರುವ ಕಾರ್ಮಿಕರೊಬ್ಬರು ಕೂಡ ತಮ್ಮ ಮಗಳಿಗೆ ವರನ ಹುಡುಕಾಟದಲ್ಲಿದ್ದರು ಇಬ್ಬರು ಕೂಡ ಒಪ್ಪಿ ಮದುವೆಗೆ ಸಿದ್ಧತೆ ನಡೆಸಿಕೊಳ್ಳುತ್ತಾರೆ.

ಈ ವೇಳೆ ಮದುವೆಯಾಗುವ ಹೆಣ್ಣು ಮಗಳಿನ ಸೋದರಮಾವ ಮಾತನಾಡಿ ಮದುವೆ ಖರ್ಚನ್ನು ನೋಡಿಕೊಳ್ಳುವಷ್ಟು ಹಣ ಹೆಣ್ಣಿನ ಮನೆಯವರ ಬಳಿ ಇಲ್ಲ ಎರಡು ಕಡೆಯ ಮದುವೆ ಖರ್ಚನ್ನು ನೀವೇ ನೋಡಿಕೊಳ್ಳಬೇಕು ಎನ್ನುವುದಾಗಿ ಗಂಡಿನ ಕಡೆಯವರಿಗೆ ಹೇಳಿದಾಗ ಗಂಡು ಕೂಡ ಒಪ್ಪಿಕೊಳ್ಳುತ್ತಾರೆ. ಹೆಣ್ಣಿನ ಮನೆಯವರು ಬಡವರಾಗಿದ್ದರು ಕೂಡ ಹಿಂದೆ ಮುಂದೆ ನೋಡದೆ ಎರಡು ಮನೆಯವರ ಖರ್ಚಿನ ನೋಡಿಕೊಳ್ಳಲು ಅವರು ಒಪ್ಪಿಕೊಳ್ಳುತ್ತಾರೆ.

ಈ ಸಂದರ್ಭದಲ್ಲಿ ಮದುವೆಗಾಗಿ ಆಗ್ರಾದಿಂದ ಗೋರಕ್ ಪುರಕ್ಕೆ ಏಪ್ರಿಲ್ 25ರಂದು ಹೆಣ್ಣಿನ ಕಡೆಯವರು ಕುಟುಂಬಸಮೇತರಾಗಿ ಆಗಮಿಸುತ್ತಾರೆ. ವಧು-ವರ ಇಬ್ಬರೂ ಕೂಡ ಕುಟುಂಬಸ್ಥರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗುತ್ತಾರೆ. ಮಾರನೇ ದಿನ ಅಂದರೆ ಏಪ್ರಿಲ್ 26ರಂದು ಮತ್ತೆ ಆಗ್ರಾಕ್ಕೆ ವಾಪಸಾಗುತ್ತಾರೆ. ಈಗಲೇ ನಡೆಯುವುದು ನಾವು ಹೇಳಲು ಹೊರಟಿರುವ ಚಮತ್ಕಾರ. ಹೌದು ಗೆಳೆಯರೇ ಏಪ್ರಿಲ್ 26ರ ಮಧ್ಯರಾತ್ರಿಯಂದು ಹುಡುಗನನ್ನು ಮದುವೆಯಾಗಿದ್ದ ಹುಡುಗಿ ಹಿತ್ತಲಿನ ಗೋಡೆಯಿಂದ ಮೇಲಕ್ಕೆ ಓಡಿಹೋಗುತ್ತಾಳೆ ಈ ಸಂದರ್ಭದಲ್ಲಿ ಅತ್ತೆಯನ್ನು ಕೂಡ ಮನೆಯ ಒಳಕ್ಕೆ ಹಾಕಿ ಬೀಗ ಹಾಕಿ ಓಡಿ ಹೋಗುತ್ತಾಳೆ. ಆಗ ಎಲ್ಲರೂ ಕೂಡ ಮಧುಮಗಳು ಓಡಿ ಹೋಗಿದ್ದಾಳೆ ಎನ್ನುವುದಾಗಿ ಹುಡುಕಾಡಲು ಪ್ರಾರಂಭಿಸುತ್ತಾರೆ.

ಆಗ ಮದುಮಗಳು ಮನೆಯಿಂದ ಓಡಿ ಹೊರಗೆ ಬರುತ್ತಿರುವುದನ್ನು ಆ ಕಾಲೋನಿಯ ಸೆಕ್ಯೂರಿಟಿ ಸಿಬ್ಬಂದಿ ನೋಡಿ ಆಕೆಯನ್ನು ತಡೆಯುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಸೆಕ್ಯೂರಿಟಿ ಸಿಬ್ಬಂದಿಯನ್ನು ಕೂಡ ಮದುಮಗಳು ಬೆದರಿಸಿ ಓಡಿಹೋಗಲು ಯಶಸ್ವಿಯಾಗಿದ್ದಾಳೆ. ಇದು ಗಂಡಿನ ಕಡೆಯವರಿಗೆ ದೊಡ್ಡಮಟ್ಟದಲ್ಲಿ ಆಶ್ಚರ್ಯವನ್ನು ಹಾಗೂ ದಿಗ್ಭ್ರಮೆಗೆ ಒಳಗಾಗುವಂತೆ ಮಾಡಿತ್ತು.

ಗಂಡ ಹಾಗೂ ಗಂಡನ ಮನೆಯವರನ್ನು ಬೀಗ ಹಾಕಿ ಮನೆಯಲ್ಲಿರುವ ಹಣ ಹಾಗೂ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿರುವ ಹುಡುಗಿಯ ವಿರುದ್ಧ ಈಗಾಗಲೇ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ದಾಖಲಾಗಿದ್ದರು ಕೂಡ ಇದುವರೆಗೆ ಯಾವುದೇ ಫಲಿತಾಂಶ ಸಿಕ್ಕಿಲ್ಲ. ಈಗಾಗಲೇ ಹಲವಾರು ಸಿಸಿಟಿವಿ ಫೂಟೇಜ್ ಗಳನ್ನು ಪರಿಶೀಲಿಸಲಾಗುತ್ತಿದೆ. ಆದರೂ ಕೂಡ ಇನ್ನೂ ಆ ಹುಡುಗಿಯ ಪತ್ತೆ ಸಿಕ್ಕಿಲ್ಲ. ಬಡ ಹುಡುಗಿಯ ಎಂದು ಆಕೆಯ ಮನೆಯವರ ಖರ್ಚನ್ನು ಕೂಡ ಹುಡುಗನೇ ನೋಡಿಕೊಂಡಿದ್ದ ಆದರೆ ಆ ಹುಡುಗಿ ಮಾಡಿರುವ ಕಾರ್ಯ ಈಗ ಎಲ್ಲರ ಪ್ರಜ್ಞೆ ತಪ್ಪುವಂತೆ ಮಾಡಿದೆ. ಈ ಹುಡುಗಿ ಮಾಡಿರುವಂತಹ ಕೃತ್ಯದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.