ದಿನಕ್ಕೊಂದು ರೀತಿಯಲ್ಲಿ ಸದ್ದು ಮಾಡುತ್ತಿರುವ ಯಶ್, ಇದೀಗ ಮತ್ತೊಂದು ನಿರ್ಧಾರದ ಮೂಲಕ ದೇಶದೆಲ್ಲೆಡೆ ಸದ್ದು ಮಾಡಿದ್ದು ಹೇಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಗಳಾಗಿರುವ ಅಜಯ್ ದೇವ್ಗನ್ ಶಾರುಖಾನ್ ಹಾಗೂ ಅಕ್ಷಯ್ ಕುಮಾರ್ ಅವರು ಪಾನ್ ಮಸಾಲ ಜಾಹೀರಾತಿನಲ್ಲಿ ಒಟ್ಟಾಗಿ ಕಾಣಿಸಿಕೊಂಡಿರುವುದಕ್ಕೆ ಪ್ರೇಕ್ಷಕರು ಅಸಮಾಧಾನಗೊಂಡಿದ್ದರು. ಅದರಲ್ಲೂ ನಾನು ಎಂದಿಗೂ ಕೂಡ ಪಾನ್ ಮಸಾಲ ಅಥವಾ ಬೇಡದ ಅರ್ಥವನ್ನು ನೀಡುವಂತಹ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಾರವು ಪೋಸ್ ನೀಡುತ್ತಿದ್ದ ಅಕ್ಷಯ್ ಕುಮಾರ್ ಅವರಿಗೆ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡು ನಂತರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದರು.
ಕೊನೆಗೂ ಕೂಡ ಈ ಕುರಿತಂತೆ ಅರಿತುಕೊಂಡ ಕಿಲಾಡಿ ಅಕ್ಷಯ್ ಕುಮಾರ್ ಈ ಕುರಿತಂತೆ ನಾನು ಇನ್ನು ಮುಂದೆ ಯಾವುದೇ ಇಂತಹ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಈ ಜಾಹೀರಾತಿನ ಅವಧಿ ಮುಗಿಯುವವರೆಗೂ ಈ ಜಾಹೀರಾತು ಟಿವಿ ವಾಹಿನಿಗಳಲ್ಲಿ ಪ್ರಸಾರವಾಗಲಿದೆ ಅದಕ್ಕಾಗಿ ಕ್ಷಮೆ ಇರಲಿ ಇದರಲ್ಲಿ ಬಂದಂತಹ ಹಣವನ್ನು ನಾನು ಒಳ್ಳೆಯ ಕೆಲಸಕ್ಕಾಗಿ ಉಪಯೋಗಿಸಿಕೊಳ್ಳುತ್ತೇವೆ ಎಂಬುದಾಗಿ ಕ್ಷಮೆ ಕೇಳಿದ್ದರು. ಇದಾದ ನಂತರ ಈಗ ಈ ವಿಚಾರಕ್ಕಾಗಿ ಸುದ್ದಿಯಾಗುತ್ತಿರುವ ನಮ್ಮೆಲ್ಲರ ನೆಚ್ಚಿನ ರಾಕಿಂಗ್ ಸ್ಟಾರ್ ಯಶ್. ಈಗಾಗಲೇ ನಿಮಗೆಲ್ಲ ಗೊತ್ತಿರುವ ಹಾಗೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಚಿತ್ರ ವಿಶ್ವಾದ್ಯಂತ ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡಿ ಗೆದ್ದ ಸಂಭ್ರಮದಲ್ಲಿದೆ. ಇದರ ನಡುವೆಯೇ ರಾಕಿಂಗ್ ಸ್ಟಾರ್ ಯಶ್ ಅವರು ಮಾಡಿರುವ ಕಾರ್ಯ ಈಗ ಬೆಳಕಿಗೆ ಬಂದಿದೆ.

ಯಶ್ ರವರಿಗೆ ಜಾಹೀರಾತು ಆಫರ್ ಗಳನ್ನು ಮ್ಯಾನೇಜ್ ಮಾಡುವಂತಹ ಕಂಪನಿಯೊಂದು ಇತ್ತೀಚಿಗೆ ಯಶ್ ರವರಿಗೆ ದೊಡ್ಡ ಪಾನ್ ಮಸಾಲ ಕಂಪನಿಯಿಂದ ಕೋಟ್ಯಾಂತರ ರೂಪಾಯಿ ಮೌಲ್ಯದ ಜಾಹೀರಾತು ಆಫರ್ ಬಂದಿರುವುದನ್ನು ದೃಢಪಡಿಸಿದೆ. ಹೌದು ಗೆಳೆಯರೆ ಪಾನ್ ಮಸಾಲ ಜಾಹೀರಾತಿನ ಅವಕಾಶ ಕೋಟ್ಯಂತರ ರೂಪಾಯಿ ಆಫರ್ ನಲ್ಲಿ ಯಶ್ ರವರಿಗೆ ಬಂದಿತ್ತು. ಹೀಗಿದ್ದರೂ ಕೂಡ ಯಶ್ ರವರು ದುಡ್ಡಿಗೆ ಆಸೆ ಪಡದೆ ನಾನು ಇದರಿಂದಾಗಿ ನನ್ನ ಅಭಿಮಾನಿಗಳಿಗೆ ಹಾಗೂ ಜನರಿಗೆ ಕೆಟ್ಟ ಸಂದೇಶವನ್ನು ನೀಡಲಾರೆ ಇದು ಸಮಾಜದ ಸ್ವಾಸ್ತ್ಯವನ್ನು ಕೊಡುವಂತಹ ಪ್ರಾಡಕ್ಟ್ ಇದನ್ನು ನಾನು ಪ್ರಮೋಷನ್ ಮಾಡಲಾರೆ ಎಂಬುದಾಗಿ ಖಡಾಖಂಡಿತವಾಗಿ ಈ ಕೋಟ್ಯಾಂತರ ರೂಪಾಯಿ ಮೌಲ್ಯದ ಆಫರನ್ನು ತಳ್ಳಿಹಾಕಿ ಜನರ ಮನಗೆಲ್ಲಲು ಮತ್ತೊಮ್ಮೆ ಯಶಸ್ವಿಯಾಗಿದ್ದಾರೆ ಎಂದು ಹೇಳಬಹುದಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.