ಪ್ರೀತಿಸಿ ಮದುವೆಯಾದ ಒಂದೇ ವರ್ಷಕ್ಕೆ ಈ ಹೆಣ್ಣು ಮಗಳಿಗೆ ಬಂದ ಪರಿಸ್ಥಿತಿ ಏನು ಗೊತ್ತಾ, ಯಾವುದೇ ಹೆತ್ತವರಿಗೂ ಈ ಪರಿಸ್ಥಿತಿ ಬರಬಾರದು??

73

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲಿ ಪ್ರೀತಿ ಅನ್ನುವುದು ಪ್ರಮುಖವಾಗಿರುತ್ತದೆ. ಆದರೆ ಇನ್ನೊಬ್ಬಳ ಕತೆ ನಿಜಕ್ಕೂ ಕೂಡ ಕರುಣಾಜನಕವಾಗಿದೆ. ಪ್ರೀತಿಗಾಗಿ ಮನೆಯವರನ್ನು ಬಿಟ್ಟು ಪ್ರೀತಿಸಿದವನ ಜೊತೆಗೆ ಓಡಿ ಹೋಗಿ ಮದುವೆಯಾದಳು. ಆದರೆ ಈಗ ಮದುವೆಯಾದ ಒಂದೇ ವರ್ಷಕ್ಕೆ ಆಕಿಗೆ ಆಗಿರುವಂತಹ ಪರಿಸ್ಥಿತಿ ನೋಡಿದರೆ ನಿಜಕ್ಕೂ ಕೂಡ ನಿಮ್ಮ ಕಣ್ಣಲ್ಲಿ ನೀರು ಬರುವುದು ಪಕ್ಕಾ. ಹೌದು ಗೆಳೆಯರೇ ನಾವು ಇಂದು ಮಾತನಾಡಲು ಹೊರಟಿರುವುದು ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಬೇಲೂರು ನಿವಾಸಿ ಅನುಪಮ ಎನ್ನುವ 20 ವರ್ಷದ ಹುಡುಗಿಯ ಕುರಿತಂತೆ.

ಅವಳು ಅದೇ ಊರಿನ ನಿವಾಸಿಯಾಗಿರುವ ನಿತೇಶ ಎನ್ನುವವನು ಒಂದುವರೆ ವರ್ಷದಿಂದ ಎಡೆಬಿಡದೆ ಪ್ರೀತಿಸುತ್ತಿದ್ದಳು. ಇದು ಆಕೆಯ ಮನೆಯವರಿಗೆ ತಿಳಿದು ಆತ ನಿನಗೆ ಸರಿಯಾದವನಲ್ಲ ಎಂದು ಎಷ್ಟೇ ಬಾರಿ ಹೇಳಿಕೊಂಡರು ಕೂಡ ಮನೆಯವರ ಮಾತನ್ನು ಕೇಳದೆ ಆತನೊಂದಿಗೆ ಓಡಿಹೋಗಿ ಮದುವೆಯಾಗುತ್ತಾಳೆ. ಆದರೆ ಮದುವೆಯಾದ ಒಂದೇ ತಿಂಗಳಿಗೆ ಅನುಪಮಾ ಳನ್ನು ಆಕೆಯ ಗಂಡ ನಿತೇಶ ಕೆಲಸಕ್ಕೆ ಹೋಗುವಂತೆ ಪೀಡಿಸಲು ಪ್ರಾರಂಭಿಸುತ್ತಾನೆ. ಇದೇ ಸಂದರ್ಭದಲ್ಲಿ ಅನುಪಮಾಳ ಮನೆಯವರು ಕೂಡ ಆಗಿದ್ದು ಆಗಿಹೋಯಿತು ಎಂದು ಮಗಳನ್ನು ಕ್ಷಮಿಸಿ ಆಕೆಯನ್ನು ಮಾತನಾಡಿಸಲು ಕೂಡ ಬಂದು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಅನುಪಮಾ ತನ್ನ ಗಂಡನ ಮನೆಯಲ್ಲಿ ಕೆಲಸಕ್ಕೆ ಹೋಗುವಂತೆ ಒತ್ತಾಯಿಸುತ್ತಿದ್ದಾರೆ ಎನ್ನುವ ಮಾತನ್ನು ಕೂಡ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಳು.

ಮದುವೆಯಾದ ಮೇಲೆ ನಿತೇಶನ ನಡವಳಿಕೆ ಬದಲಾಗಿದ್ದು ಅನುಪಮಾ ಳಿಗೆ ಕಂಡುಬಂದಿತ್ತು. ಆದರೆ ಮದುವೆಯಾಗಿದ್ದು ಪ್ರೀತಿಸಿ. ಈಗ ಗಂಡನನ್ನು ಬಿಟ್ಟು ಹೋದರೆ ಊರು ಹಾಗೂ ಮನೆಯವರು ಏನೆಂದುಕೊಂಡಾರು ಎಂಬ ಚಿಂತೆಯಲ್ಲಿಯೇ ಗಂಡನ ಮನೆಯಲ್ಲಿ ಕಷ್ಟವೋ ಸುಖವೋ ಎಂದು ಅಲ್ಲೇ ಇದ್ದಳು. ಆದರೆ ಮದುವೆಯಾದ ಒಂದು ವರ್ಷದಲ್ಲಿಯೇ ಈಗ ಅನುಪಮಾ ಮರಣ ಹೊಂದಿದ ಪರಿಸ್ಥಿತಿಯಲ್ಲಿ ಸಿಕ್ಕಿದ್ದಾಳೆ. ಇನ್ನು ಅನುಪಮಾಳ ಮನೆಯವರು ಇದಕ್ಕೆಲ್ಲ ಕಾರಣ ಆಕೆಯ ಗಂಡನೇ ಎಂಬುದಾಗಿ ದೂರಿದ್ದಾರೆ. ಇದೇ ಏಪ್ರಿಲ್ 27ರಂದು ನಿರ್ದೇಶಕನ ಹೆಂಡತಿ ಅನುಪಮಾ ಳನ್ನು ತನ್ನ ಸಂಬಂಧಿಕ ಆಗಿರುವ ದಿನೇಶ್ ನ ಮನೆಗೆ ಕರೆದುಕೊಂಡು ಹೋಗಿರುತ್ತಾನಂತೆ.

ಈ ಸಂದರ್ಭದಲ್ಲಿ ಆಕೆ ಅಲ್ಲಿಯೇ ಕುಸಿದು ಬಿದ್ದಿದ್ದಾಳೆ ಕೂಡಲೇ ಆಕೆಯ ಗಂಡ ನಿತೇಶ ಹತ್ತಿರದಲ್ಲಿರುವ ಆಸ್ಪತ್ರೆಗೆ ದಾಖಲಿಸಿದಾಗ ಅದಾಗಲೇ ಅನುಪಮ ಕೊನೆಯುಸಿರೆಳೆದಿದ್ದಳು. ಕೂಡಲೇ ಆತ ಅನುಪಮಾಳ ಹೆತ್ತವರಿಗೆ ಈ ವಿಷಯವನ್ನು ತಿಳಿಸಿದಾಗ ಅವರು ಆಸ್ಪತ್ರೆಗೆ ಓಡೋಡಿ ಬರುತ್ತಾರೆ. ಅನುಪಮಾ ಕೊನೆಯುಸಿರೆಳೆದ ಪರಿಸ್ಥಿತಿಯನ್ನು ನೋಡಿ ಅವರಿಗೆ ಗಂಡನ ಮೇಲೆ ಅನುಮಾನ ಬರುತ್ತದೆ. ಹೀಗಾಗಿ ಕೂಡಲೇ ಪೊಲೀಸ್ ಕಂಪ್ಲೇಂಟ್ ನೀಡುತ್ತಾರೆ. ವಿಚಾರಣೆಯ ಸಂದರ್ಭದಲ್ಲಿ ನಿತೇಶ ಅನುಪಮ ಹಲವಾರು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಳು. ಅವಳನ್ನು ಸರ್ಕಾರಿ ಆಸ್ಪತ್ರೆಗೆ ಕೂಡ ಕರೆದುಕೊಂಡು ಹೋಗಲಾಗಿತ್ತು ಎಂಬುದಾಗಿ ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ ಎಂಬುದಾಗಿ ಕೂಡಾ ಈ ಸಂದರ್ಭದಲ್ಲಿ ಹೇಳಿದ್ದಾನೆ.

18ವರ್ಷಗಳಿಂದ ನಮ್ಮೊಂದಿಗೆ ಚೆನ್ನಾಗಿ ಬೆಳೆದು ಸಂತೋಷವಾಗಿ ಇದ್ದಂತಹ ಮಗಳು ಇದೀಗ ಕೂಡಲೇ ಯಾವನ್ನೋ ಮದುವೆಯಾದ ನಂತರ ಅನಾರೋಗ್ಯಕ್ಕೆ ತುತ್ತಾಗಿ ಅಕಾಲಿಕವಾಗಿ ಮರಣಹೊಂದಿದ್ದಾರೆ ಎಂದರೆ ಹೇಗೆ ತಾನೆ ನಂಬಲು ಸಾಧ್ಯ ಹೇಳಿ. ಈಗಾಗಲೇ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಪ್ರಕರಣ ದಾಖಲಾಗಿದ್ದು ತನಿಖೆ ಈಗಾಗಲೇ ನಡೆಯುತ್ತಿದೆ. ತಮ್ಮೊಂದಿಗೆ ಇದ್ದಾಗ ಆರೋಗ್ಯವಾಗಿದ್ದ ಮಗಳು ಈಗ ನಮ್ಮನ್ನು ಸಂಪೂರ್ಣವಾಗಿ ಬಿಟ್ಟು ಹೋಗಿದ್ದಾಳೆ ಎನ್ನುವುದನ್ನು ಹೆತ್ತವರಿಗೆ ಅರಗಿಸಿ ಕೊಳ್ಳಲು ಕೂಡ ಸಾಧ್ಯವಿಲ್ಲ.

ಅದಕ್ಕಾಗಿ ಹೇಳುವುದು ಸ್ನೇಹಿತರೆ ಪ್ರೀತಿ ಮಾಡಿ ಮದುವೆಯಾಗಿ ಹೋಗುವ ಮೊದಲು ಹೆತ್ತವರು ನೀಡುವ ಅಭಿಪ್ರಾಯ ಅಥವಾ ಅವರ ಮಾತನ್ನು ಕೇಳುವುದು ಪ್ರಮುಖವಾಗಿರುತ್ತದೆ. ಈಗ ನೋಡಿ ಅನುಪಮಾ ತೆಗೆದುಕೊಂಡ ದುಡುಕಿನ ನಿರ್ಧಾರದಿಂದ ಈಗ ಅವರ ತಂದೆ ತಾಯಿಗೆ ಮಗಳನ್ನು ಕಳೆದುಕೊಂಡಂತಹ ದುಃಖ ಜೀವನಪರ್ಯಂತ ಕಾಡುತ್ತದೆ. ಇಲ್ಲಿ ಏನು ಬೇಕಾದರೂ ಕೂಡ ನಡೆದಿರಬಹುದು ಮುಂದಿನ ದಿನಗಳಲ್ಲಿ ತನಿಖೆ ನಡೆದ ನಂತರ ಇದರ ಕುರಿತಂತೆ ಸವಿವರವಾಗಿ ನಮಗೆ ತಿಳಿದು ಬರಲಿದೆ.