ಪ್ರತಿ ದಿನ ರಾತ್ರಿ ಊಟ ಆದ ಮೇಲೆ ತಂದೆಗೆ ಹೇಳದೆ ಮನೆಯಿಂದ ಹೊರಹೋಗುತ್ತಿದ್ದ 8 ವರ್ಷದ ಮಗ, ನಿಜವಾದ ಕಾರಣ ಗೊತ್ತಾದ ನಂತರ ತಂದೆ ಕಣ್ಣೀರು ಹಾಕಿದ್ದು ಯಾಕೆ ಗೊತ್ತಾ??

3,329

ನಮಸ್ಕಾರ ಸ್ನೇಹಿತರೇ ನೀವು ಚಿಕ್ಕವರಿರುವಾಗ ಗಮನಿಸಿರಬಹುದು ನಾವು ಕೆಲವೊಮ್ಮೆ ತಪ್ಪು ಮಾಡಿದಾಗ ಅದರ ಕುರಿತಂತೆ ಮನೆಯವರ ಬಳಿ ಹೇಳಿಕೊಳ್ಳಲು ಹೆದರಿ ಕೊಳ್ಳುತ್ತೇವೆ. ಕೆಲವೊಂದು ವಿಚಾರಗಳನ್ನು ತಂದೆ-ತಾಯಿಯ ಬಳಿ ಹೇಳದೆ ಮುಚ್ಚಿಟ್ಟುಕೊಳ್ಳುತ್ತೇವೆ. ಇನ್ನು ಇದೇ ರೀತಿಯ ಒಂದು ವಿಚಾರದ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ. ಒಂದು ಊರಿನಲ್ಲಿ ಬೆನ್ ಎನ್ನುವಾತ ತನ್ನ ಹೆಂಡತಿ ಹಾಗೂ ಲ್ಯೂಕ್ ಎನ್ನುವ ತನ್ನ ಮಗನೊಂದಿಗೆ ಒಂದು ಮನೆಯಲ್ಲಿ ವಾಸಿಸಿರುತ್ತಾನೆ.

ಪ್ರತಿದಿನ ರಾತ್ರಿ ಊಟವಾದ ನಂತರ ಮನೆಯಿಂದ ಹೊರಗೆ ತನ್ನ ಮಗ ಹೋಗುವುದನ್ನು ಗಮನಿಸುತ್ತಲೇ ಇರುತ್ತಾನೆ. ಆದರೆ ಆತ ಯಾತಕ್ಕಾಗಿ ಹೋಗುತ್ತಿದ್ದಾನೆ ಎನ್ನುವುದು ಕೂಡ ಅವನಿಗೆ ತಿಳಿದಿರುವುದಿಲ್ಲ. ಇದೇ ರೀತಿ ಸತತ 11 ದಿನಗಳ ಕಾಲ ಲ್ಯೂಕ್ ರಾತ್ರಿ ಊಟವಾದ ನಂತರ ಮನೆಯಿಂದ ಹೊರ ಹೋಗುವ ಪರಿಪಾಠವನ್ನು ಬೆಳೆಸಿಕೊಂಡಿದ್ದ. ಇಂತಹ ವಿಚಿತ್ರ ಕ್ರಿಯೆಯನ್ನು ಮಾಡುತ್ತಿದ್ದ ಮಗನನ್ನು ಈ ಕುರಿತಂತೆ ಕೇಳಿದಾಗ ಇದಕ್ಕೂ ನಿಮಗೂ ಸಂಬಂಧವಿಲ್ಲ ಅಪ್ಪ ನೀವು ಚಿಂತಿಸಬೇಡಿ ಎಂಬುದಾಗಿ ಹೇಳುತ್ತಿದ್ದ. ಆದರೆ ಬೆನ್ ಗೆ ಈ ಕುರಿತಂತೆ ಕೊನೆಗೂ ಕೂಡ ಮಗನಿಂದ ಏನು ತಿಳಿಯಲಿಲ್ಲ.

ಕೊನೆಗೆ ದಾರಿಕಾಣದೆ ಬೆನ್ ತಾನೇ ಇದರ ಹಿಂದಿನ ರಹಸ್ಯ ಏನು ಎನ್ನುವುದನ್ನು ತಿಳಿಯಲು ಹೊರಡುತ್ತಾನೆ. ಮಗನ ಕೋಣೆಯನ್ನು ಒಂದಿಂಚು ಬಿಡದೆ ಪೂರ್ತಿಯಾಗಿ ಹುಡುಕುತ್ತಾನೆ. ಆಗ ಮಗ ಲ್ಯೂಕ್ ನ ಜೀನ್ಸ್ ಪ್ಯಾಂಟ್ ಕಾಣುತ್ತದೆ. ಆಗ ಅದರ ಹಿಂದಿನ ಕಿಸೆಯಲ್ಲಿ ಒಂದು ಬಿಳಿ ಕಾಗದ ಕಂಡುಬರುತ್ತದೆ. ಆ ಕಾಗದದಲ್ಲಿ ರಾತ್ರಿ 7.15ಕ್ಕೆ ಲ್ಯೂಕ್ ಲಿಂಡ್ ಬೀದಿಯಲ್ಲಿರುವ ದೇವಾಲಯಕ್ಕೆ ಬಾ ಎನ್ನುವುದಾಗಿ ಬರೆದಿತ್ತು. ಬೆನ್ ಇದನ್ನು ನೋಡಿ ಚಿಂತಾಕ್ರಾಂತ ನಾಗುತ್ತಾನೆ. ಯಾರು ನನ್ನ ಮಗನನ್ನು ಈ ರೀತಿ ಕರೆಯುತ್ತಿರಬಹುದು ಎನ್ನುವುದಾಗಿ ಯೋಚಿಸಲು ಪ್ರಾರಂಭಿಸುತ್ತಾನೆ.

ಈ ಎಲ್ಲಾ ವಿಚಾರಗಳನ್ನು ನೋಡಿದಾಗ ಬೆನ್ ಗೆ ಏನು ನಡೆಯುತ್ತಿದೆಯೆಂದು ನೋಡುವ ಕುತೂಹಲ ಇನ್ನಷ್ಟು ಹೆಚ್ಚಾಗುತ್ತದೆ. ಹೀಗಾಗಿ ಆ ದಿನ ರಾತ್ರಿ ಲ್ಯೂಕ್ ಮನೆಯಿಂದ ಹೊರ ಹೋಗುತ್ತಲೇ ಕೂಡಲೇ ಆತನ ಹಿಂದೆ ಆತನಿಗೆ ತಿಳಿಯದಂತೆ ಹೋಗುತ್ತಾನೆ. ಲ್ಯೂಕ್ ಚೀಲವನ್ನು ಹಿಡಿದುಕೊಂಡು ಆ ಕಾಗದ ದಲ್ಲಿರುವ ಬೀದಿಯಲ್ಲಿರುವ ಪ್ರಾರ್ಥನಾ ಮಂದಿರಕ್ಕೆ ಹೋಗುತ್ತಾನೆ. ಬೆನ್ ಕೂಡ ಅವನನ್ನು ಹಿಂಬಾಲಿಸುತ್ತಾ ಹೋಗುತ್ತಾನೆ. ಅಲ್ಲಿಗೆ ಹೋದ ನಂತರ ಪ್ರಾರ್ಥನಾ ಮಂದಿರಕ್ಕೆ ಹೋಗುತ್ತಿದ್ದಂತೆ ಲ್ಯೂಕ್ ಒಬ್ಬ ವ್ಯಕ್ತಿಗೆ ತನ್ನ ಚೀಲದಿಂದ ಒಂದು ವಸ್ತುವನ್ನು ನೀಡುತ್ತಾನೆ. ಮತ್ತೊಬ್ಬ ವ್ಯಕ್ತಿ ಯಾರು ಎಂದು ನೋಡಿದಾಗ ಆತ ಲ್ಯೂಕ್ ನ ಮಾಜಿ ಶಿಕ್ಷಕ ಫ್ರಾಂಕ್ ಆಗಿರುತ್ತಾನೆ. ಕೆಲವು ದಿನಗಳ ಹಿಂದೆಯೇ ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು.

ಲ್ಯೂಕ್ ಕೇವಲ ತನ್ನ ಮಾಜಿ ಶಿಕ್ಷಕನಿಗೆ ಮಾತ್ರವಲ್ಲದೆ ಬೀದಿಯಲ್ಲಿ ಮುಂದುವರಿದು ಇನ್ನೂ 30 ಜನರಿಗೆ ತನ್ನ ಚೀಲದಿಂದ ತಂದಿದ್ದ ವಸ್ತುವನ್ನು ನೀಡುತ್ತಿದ್ದ. ಇದಾದ ನಂತರ ಆತ ಮನೆಗೆ ಹೋಗುತ್ತಾನೆ. ಇದನ್ನೆಲ್ಲ ನೋಡಿದ ಬೆನ್ ಮನೆಗೆ ಹೋದ ನಂತರ ತನ್ನ ಮಗನ ಬಳಿ ನೀನು ಮಾಡುತ್ತಿರುವ ಕೆಲಸವನ್ನೆಲ್ಲ ನಾನು ನೋಡಿದ್ದೇನೆ ನೀನು ಅವರಿಗೆ ಏನು ನೀಡುತ್ತಿದ್ದ ಏನಿದು ವಿಚಾರ ಎಂಬುದಾಗಿ ಕೇಳುತ್ತಾನೆ. ಆಗ ಆತನ ಮಗ ಅಳುತ್ತಲೇ ತನ್ನ ಶಿಕ್ಷಕನಿಗೆ ಕೆಲಸ ಹೋದ ನಂತರ ಆತನ ಬಳಿ ಉಳಿದುಕೊಳ್ಳಲು ಕೇವಲ ಆ ಪ್ರಾರ್ಥನಾ ಮಂದಿರ ಮಾತ್ರ ಇತ್ತು ಹಾಗೂ ಹಣತೆ ಕೂಡ ದುಡ್ಡಿರಲಿಲ್ಲ ಇದಕ್ಕಾಗಿ ಮನೆಯಿಂದ ಆಹಾರವನ್ನು ಕದ್ದು ಆತನಿಗೆ ನೀಡುತ್ತಿದೆ ಎಂಬುದಾಗಿ ಒಪ್ಪಿಕೊಳ್ಳುತ್ತಾನೆ.

ಅಲ್ಲಿದ್ದ 30 ಜನರು ಕೂಡ ಬಿಕ್ಷುಕ ರಾಗಿದ್ದು ಅವರಿಗೂ ಕೂಡ ಹಣ ಅಥವಾ ಆಹಾರವಾಗಲು ಸಿಗುತ್ತಿರಲಿಲ್ಲ ಇದೇ ಕಾರಣಕ್ಕಾಗಿ ಮನೆಯಿಂದ ಕದ್ದು ಅವರಿಗೆ ಆಹಾರವನ್ನು ನೀಡುತ್ತಿದ್ದ ಎಂಬುದಾಗಿ ಒಪ್ಪಿಕೊಳ್ಳುತ್ತಾನೆ. ಮಗನ ಕಾರ್ಯವೈಖರಿಯನ್ನು ನೋಡಿ ತಂದೆಯ ಕಣ್ಣಿನಲ್ಲಿ ನೀರು ಉಕ್ಕಿ ಬರುತ್ತದೆ. ಹಾಗೂ ಮಗನ ಈ ಕೆಲಸಕ್ಕೆ ತಂದೆ ಬೆನ್ನೆಲುಬಾಗಿ ನಿಲ್ಲುತ್ತಾನೆ. ಇಷ್ಟು ಮಾತ್ರವಲ್ಲದೆ ಕಾಲಕ್ರಮೇಣವಾಗಿ ಆ ಪ್ರಾರ್ಥನಾ ಮಂದಿರವನ್ನು ಕೂಡ ಖರೀದಿಸಿ ಅಲ್ಲಿ ಬಿಕ್ಷುಕರಿಗೆ ಹಾಗೂ ನಿರ್ಗತಿಕರಿಗೆ ವಾಸ ಮಾಡಲು ಸಹಾಯ ಮಾಡುತ್ತಾರೆ. ನಿಜಕ್ಕೂ ಕೂಡ ಇಂತಹ ವಿಚಾರಗಳು ನನಗೆ ಒಳ್ಳೆಯ ಕೆಲಸ ಮಾಡಲು ಪ್ರೇರೆಪಿಸುತ್ತವೆ ಎಂದರೆ ತಪ್ಪಾಗಲಾರದು. ಈ ಕಥೆ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.