ಕೆಜಿಎಫ್ 2, RRR 1000ಕೋಟಿ ಮಾಡಿಲ್ವಾ?? ಖಡಕ್ ಉತ್ತರ ಕೊಟ್ಟ ಆರ್ಮುಗ ರವಿಶಂಕರ್?? ಮತ್ತೊಮ್ಮೆ ಬಾಲಿವುಡ್ ಅನ್ನು ಶೇಕ್ ಮಾಡಲು ಮುಂದಾದ ಕಿಚ್ಚ.
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಟ್ವಿಟರ್ನಲ್ಲಿ ಹಲವಾರು ದಿನಗಳಿಂದ ಅಜಯ್ ದೇವಗನ್ ಹಾಗೂ ಕಿಚ್ಚ ಸುದೀಪ್ ಅವರ ನಡುವೆ ಹಿಂದಿ ರಾಷ್ಟ್ರ ಭಾಷೆ ಹೌದು ಅಥವಾ ಅಲ್ಲ ಎನ್ನುವುದರ ಕುರಿತಂತೆ ಸಾಕಷ್ಟು ಮುಸುಕಿನ ಗುದ್ದಾಟ ನಡೆಯುತ್ತಿರುವುದು ನಿಮಗೆಲ್ಲ ತಿಳಿದಿದೆ. ಇದರ ಕುರಿತಂತೆ ಭಾರತೀಯ ಚಿತ್ರರಂಗದ ಗಣ್ಯರು ಸೇರಿದಂತೆ ಹಲವಾರು ರಾಜಕೀಯ ಮತ್ತು ಇತರ ಕ್ಷೇತ್ರದ ಗಣ್ಯರು ಕೂಡ ಈ ಕುರಿತಂತೆ ತಮ್ಮದೇ ಆದಂತಹ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಬಹುತೇಕ ಎಲ್ಲರೂ ಕೂಡ ನಮ್ಮ ಮಾತೃಭಾಷೆ ನಮಗೆ ಪ್ರಮುಖ ಭಾಷೆ ಭಾರತದ ಸಂವಿಧಾನದಲ್ಲಿ ಯಾವುದೇ ಅಧಿಕೃತವಾಗಿ ರಾಷ್ಟ್ರೀಯ ಭಾಷೆ ಎನ್ನುವುದನ್ನು ಉಲ್ಲೇಖಿಸಿಲ್ಲ ಎಂಬುದನ್ನು ವಾದಿಸಿದ್ದಾರೆ.
ಅಂದರೆ ಬಹುತೇಕ ಎಲ್ಲರೂ ಕೂಡ ಕಿಚ್ಚ ಸುದೀಪ್ ರವರ ಪರವಾಗಿ ಬ್ಯಾಟಿಂಗ್ ಬೀಸಿದ್ದಾರೆ. ಕೆಲವೊಂದು ಸುದ್ದಿಮೂಲಗಳ ಪ್ರಕಾರ ಈ ವಿಚಾರ ದಕ್ಷಿಣ ಭಾರತದ ಚಿತ್ರಗಳು ಬಾಲಿವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ ಬಾಲಿವುಡ್ ಮಂದಿ ಈ ಕುರಿತಂತೆ ಇರಿಸುಮುರುಸು ಆಗಿರುವ ಕಾರಣದಿಂದಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬುದಾಗಿ ಕೇಳಿಬಂದಿದೆ. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ರವರಿಗೆ ರಿಪ್ಲೈ ನೀಡುವ ಸಂದರ್ಭದಲ್ಲಿ ಅಜಯ್ ದೇವ್ಗನ್ ರವರು ನೀವು ಯಾಕೆ ನಿಮ್ಮ ಚಿತ್ರಗಳನ್ನು ಹಿಂದಿಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡುತ್ತೀರಿ ಎಂಬುದಾಗಿ ಕೂಡ ಕೇಳಿದ್ದರು.
ಇದನ್ನು ಕನ್ನಡದಂತೆ ಹಾಗೂ ತಮಿಳು-ತೆಲುಗಿನಲ್ಲಿ ಹಿಂದಿ ಕೂಡ ಒಂದು ಭಾಷೆಯಾಗಿದ್ದು ಈ ಕಾರಣದಿಂದಾಗಿಯೇ ನಾವು ಡಬ್ ಮಾಡಿ ಬಿಡುತ್ತಿದ್ದೇವೆ ಎಂಬುದಾಗಿ ಪರೋಕ್ಷವಾಗಿ ಹೇಳಿಕೆ ನೀಡಿದ್ದರು. ಈ ಕುರಿತಂತೆ ಈಗ ಆರ್ಮುಗ ರವಿಶಂಕರ್ ಅವರು ಕೂಡ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತ ಕಿಚ್ಚ ಸುದೀಪ್ ರವರ ಹೇಳಿಕೆಗೆ ನನ್ನ ಬೆಂಬಲವಿದೆ ಎಂಬುದಾಗಿ ಹೇಳಿದ್ದು, ಇತ್ತೀಚಿಗಷ್ಟೇ ಕೇವಲ ಹಿಂದಿ ಸಿನಿಮಾರಂಗ ಮಾತ್ರ ಭಾರತೀಯ ಚಿತ್ರರಂಗದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ ಎಂಬುದನ್ನು ಆರ್ ಆರ್ ಆರ್ ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರಗಳು ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಸಾಬೀತುಪಡಿಸಿದೆ ಎಂಬುದನ್ನು ಹೇಳಿದ್ದಾರೆ. ತಮಿಳು ತೆಲುಗು ಮಲಯಾಳಂ ನಂತೆ ಕನ್ನಡದವರಿಗೆ ಹಿಂದಿ ಕೂಡ ಮತ್ತೊಂದು ಪ್ರಾದೇಶಿಕ ಭಾಷೆಯಾಗಿದ್ದು ಅಲ್ಲಿನ ಜನರು ನಮ್ಮ ಸಿನಿಮಾಗಳನ್ನು ಇಷ್ಟಪಡುತ್ತಿದ್ದಾರೆ ಇದಕ್ಕಾಗಿ ನಮ್ಮ ಸಿನಿಮಾಗಳು ಅವರಿಗಿಂತ ಹೆಚ್ಚಾಗಿ ಯಶಸ್ಸು ಪಡೆಯುತ್ತಿದ್ದಾವೆ ಎಂಬುದನ್ನು ಇಲ್ಲಿ ಹೇಳಿದ್ದಾರೆ.