ಸಕ್ಕತ್ ಖುಷಿಯಲ್ಲಿ ಕನ್ನಡತಿ ಧಾರವಾಹಿ ತಂಡ, ಅಭಿಮಾನಿಗಳಿಗೂ ಕೂಡ ಹಬ್ಬವೇ ಸರಿ. ಕಾರಣವೇನು ಗೊತ್ತೇ??

1,484

ನಮಸ್ಕಾರ ಸ್ನೇಹಿತರೇ ಧಾರವಾಹಿ ಕುರಿತಂತೆ ಇಷ್ಟ ಇಲ್ಲದವರು ಕೂಡ ಧಾರವಾಹಿಯನ್ನು ವೀಕ್ಷಿಸುವಂತೆ ಮಾಡಿದಂತಹ ಧಾರವಾಹಿ ಇದು. ಹೌದು ನಾವು ಮಾತನಾಡಲು ಹೊರಟಿರುವುದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಧಾರವಾಹಿ ಕುರಿತಂತೆ. ರಂಜನಿ ರಾಘವನ್ ಹಾಗೂ ಕಿರಣ್ ರಾಜ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಕನ್ನಡತಿ ಧಾರವಾಹಿಯನ್ನು ನೋಡುವುದೇ ಪ್ರೇಕ್ಷಕರಿಗೆ ಒಂದು ಕಣ್ಣಿಗೆ ಹಬ್ಬ ದಂತಿದೆ ಎಂದರೆ ತಪ್ಪಾಗಲಾರದು.

ಕನ್ನಡ ಧಾರವಾಹಿಗಳ ಕ್ಷೇತ್ರದಲ್ಲಿ ಕನ್ನಡದ ಧಾರವಾಹಿ ತನ್ನದೇ ಆದಂತಹ ವಿಶೇಷವಾದ ಅಭಿಮಾನಿ ಬಳಗ ಹಾಗೂ ಸ್ಟ್ಯಾಂಡರ್ಡನ್ನು ಸೆಟ್ ಮಾಡಿಕೊಂಡಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ಕಲರ್ಸ್ ಕನ್ನಡ ವಾಹಿನಿಯ ವಿಚಾರಕ್ಕೆ ಬರುವುದಾದರೆ ಆ ವಾಹಿನಿಯ ಟಾಪ್ ಧಾರಾವಾಹಿಯಾಗಿ ಮಿಂಚುತ್ತಿದೆ. ಅದರಲ್ಲೂ ಭುವಿ ಪಾತ್ರಧಾರಿಯ ಕನ್ನಡದ ಕುರಿತಂತೆ ಇರುವಂತಹ ಜ್ಞಾನ ಹಾಗೂ ಪ್ರೀತಿ ನಿಜಕ್ಕೂ ಕೂಡ ಪ್ರೇಕ್ಷಕರಲ್ಲಿ ದಾರವಾಹಿಯ ಕುರಿತಂತೆ ವಿಶೇಷವಾದ ಕಾಳಜಿ ಹಾಗೂ ಗೌರವವನ್ನು ಮೂಡಿಸುವಂತೆ ಮಾಡುತ್ತದೆ. ರಂಜನಿ ರಾಘವನ್ ರವರು ಭುವಿಯ ಪಾತ್ರದ ಮೂಲಕ ಹಾಗೂ ಕಿರಣ್ ರಾಜ್ ರವರು ಹರ್ಷನ ಪಾತ್ರದ ಮೂಲಕ ತಮ್ಮದೇ ಆದಂತಹ ಸಂಚಲನವನ್ನು ಕಿರುತೆರೆಯಲಿ ಸೃಷ್ಟಿಸಿದ್ದಾರೆ. ಇವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಲಕ್ಷಾಂತರ ಅಭಿಮಾನಿಗಳು ಇದ್ದಾರೆ.

ಇದಕ್ಕೆಲ್ಲ ಕಾರಣವಾಗಿರುವುದು ಕನ್ನಡತಿ ಧಾರವಾಹಿಯ ಜನಪ್ರಿಯತೆ ಹಾಗೂ ಅವರ ಪಾತ್ರದ ಕುರಿತಂತೆ ಜನರಿಗೆ ಇರುವಂತಹ ವಿಶೇಷವಾದ ಪ್ರೀತಿ ಎಂದರೆ ತಪ್ಪಾಗಲಾರದು. ಇನ್ನು ಇದೇ ಹಿನ್ನೆಲೆಯಲ್ಲಿ ಕನ್ನಡತಿ ಧಾರಾವಾಹಿ ಒಂದು ಹೊಸ ಸಂತೋಷದ ವಿಚಾರವನ್ನು ಹಂಚಿಕೊಂಡಿದೆ. ಹೌದು ಗೆಳೆಯರ ಬಹುಕಾಲದಿಂದ ಪ್ರಸಾರವಾಗಿ ಕೊಂಡು ಬರುತ್ತಿರುವ ಕನ್ನಡತಿ ಧಾರಾವಾಹಿ ಈಗಾಗಲೇ ಬರೋಬ್ಬರಿ 600 ಎಪಿಸೋಡ್ ಗಳನ್ನು ಪೂರ್ಣಗೊಳಿಸಿದೆ. ಇನ್ನು ಇದು ಹಿಂದಿಗೆ ಡಬ್ ಆಗುತ್ತಿರುವುದು ಕೂಡ ಕೇಳಿ ಬರುತ್ತಿದೆ. ಒಟ್ಟಾರೆಯಾಗಿ ಕನ್ನಡತಿ ಧಾರಾವಾಹಿ ತಂಡ 600 ಎಪಿಸೋಡ್ ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಇನ್ನೂ ಕೂಡ ಜನರ ನೆಚ್ಚಿನ ಧಾರವಾಹಿ ಆಗಿರುವುದರಿಂದ ಇದೇ ಚೈತನ್ಯದೊಂದಿಗೆ ಮತ್ತಷ್ಟು ಎಪಿಸೋಡ್ ಗಳನ್ನು ಚಿತ್ರೀಕರಿಸುವುದಕ್ಕೆ ಮುನ್ನುಗ್ಗುತ್ತಿದೆ. ಈ ಧಾರವಾಹಿ ಕುರಿತಂತೆ ನಿಮಗಿರುವ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.